ಹಿಂದೂ ಪಂಚಾಂಗದ ಪ್ರಕಾರ, ಕಾರ್ತಿಕ ಶುಕ್ಲ ದ್ವಾದಶಿ ತಿಥಿಯು ನವೆಂಬರ್ 23, 2023 ರಂದು ಸಂಜೆ 5.09 ರಿಂದ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 24, ಶುಕ್ರವಾರದಂದು ರಾತ್ರಿ 7.45 ಕ್ಕೆ ಕೊನೆಗೊಳ್ಳುತ್ತದೆ. 
ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ತುಳಸಿ ವಿವಾಹವನ್ನು ಮಾಡಲಾಗುತ್ತದೆ. ತಾಯಿ ಲಕ್ಷ್ಮಿಯ ಅವತಾರ ಎಂದು ಪರಿಗಣಿಸಲಾಗುವುದು. ಈ ವರ್ಷ ತುಳಸಿ ವಿವಾಹವು 24 ನವೆಂಬರ್ 2023, ಶುಕ್ರವಾರದಂದು ಇರಲಿದೆ. 
ಸಂಪತ್ತಿನ ದೇವತೆಗೆ ಮೀಸಲಾದ ಶುಕ್ರವಾರದ ದಿನ ಶುಭ ಯೋಗದಲ್ಲಿ ಮನೆಯಲ್ಲಿ ಶಾಲಿಗ್ರಾಮ್-ತುಳಸಿ ವಿವಾಹವನ್ನು ಮಾಡುವುದರಿಂದ ಅಪಾರ ಧನ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. 
ತುಳಸಿ ವಿವಾಹ 2023ರ ಮುಹೂರ್ತ: 
24 ನವೆಂಬರ್ 2023 ರ ಶುಕ್ರವಾರದಂದು ಬೆಳಿಗ್ಗೆ 11.43 ರಿಂದ 12.26 ರವರೆಗೆ  ತುಳಸಿ ವಿವಾಹಕ್ಕೆ ಅಭಿಜಿತ್ ಮುಹೂರ್ತವು ಪ್ರಾಶಸ್ತ್ಯವಾಗಿದೆ.
 
 
 
 
 
 
 
 
 
 
 
 
 
 
 
 
 
