ಬೆಳ್ತಂಗಡಿ ಮೂಲದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮಂಗಳೂರಿನಲ್ಲಿ ನೇಣಿಗೆ ಶರಣು

ಮಂಗಳೂರು: ಬೆಳ್ತಂಗಡಿ ಮೂಲದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯೊಬ್ಬಳು ಮಂಗಳೂರಿನಲ್ಲಿ ನೇಣಿಗೆ ಶರಣಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ನೆರಿಯ ಗ್ರಾಮದ ನೆಕ್ಕರೆ ನಿವಾಸಿ ದಾಸ್ ಎಂಬವರ ಪುತ್ರಿ ಆದಿರಾ(19) ನೇಣಿಗೆ ಶರಣಾದ ವಿದ್ಯಾರ್ಥಿನಿ.

ಆದಿರಾ ಕಳೆದ ಮೂರು ತಿಂಗಳಿನಿಂದ ತನ್ನ ಸಹೋದರರೊಂದಿಗೆ ಮಂಗಳೂರಿನ ಕುಲಶೇಖರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಬಾಡಿಗೆ ಮನೆಯಿಂದಲೇ ಅವರು ಕಾಲೇಜಿಗೆ ಹೋಗುತ್ತಿದ್ದರು. ಕಳೆದ ರವಿವಾರ ರಾತ್ರಿ ಮೂವರೂ ಜೊತೆಯಾಗಿ ಊಟ ಮುಗಿಸಿದ್ದರು ಆದಿರಾ ಒಂದು ಕೋಣೆಯಲ್ಲಿ ಮಲಗಿದ್ದಾರೆ. ಅವರ ಸಹೋದರರಿಬ್ಬರು ಮತ್ತೊಂದು ಕೋಣೆಯಲ್ಲಿ ಮಲಗಿದ್ದರು. ಆದರೆ ಸೋಮವಾರ ಬೆಳಗ್ಗೆ 8ಗಂಟೆ ವೇಳೆಗೆ ನೋಡಿದಾಗ ಆದಿರಾ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.