ಸಚಿವರನ್ನು 3 ದಿನ ಸತಾಯಿಸಿದ ಕೇಂದ್ರ ಸಚಿವ!: ಅಕ್ಕಿಯಲ್ಲಿ ರಾಜಕೀಯ ಬೇಡ- ಅಮಿತ್ ಷಾ ಗೆ ಸಿದ್ದು ಕಿವಿಮಾತು
ಕರ್ನಾಟಕದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಅಕ್ಕಿಯನ್ನು ಒದಗಿಸುವ ನಿಟ್ಟಿನಲ್ಲಿ ತಮ್ಮನ್ನು ಭೇಟಿಯಾಗಲು ಮೂರು ದಿನ ಸತಾಯಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ನಡೆಗೆ ಕೆ.ಎಚ್. ಮುನಿಯಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಬಡವರಿಗೆ ಉಚಿತವಾಗಿ ನೀಡುವ ಅಕ್ಕಿಯಲ್ಲಿ ರಾಜಕೀಯ ಮಾಡಬೇಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಅಮಿತ್ ಷಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ಧೇನೆ, ರಾಜ್ಯಕ್ಕೆ ಅಕ್ಕಿ ನೀಡುವುದಾಗಿ ಭಾರತೀಯ ಆಹಾರ ನಿಗಮ ಭರವಸೆ ನೀಡಿತ್ತು. ಮರುದಿನವೇ ನಿಲುವು ಬದಲಿಸಿ ಅಕ್ಕಿ ಕೊಡುವುದಿಲ್ಲ ಎಂದು ಹೇಳಿತ್ತು. ಇದನ್ನು ಅಮಿತ್ ಷಾ ಗಮನಕ್ಕೆ ತಂದಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಮಧ್ಯೆ, ಮೂರು ದಿನಗಳಿಂದ ಕನಿಷ್ಟ ಒಂದು ಭೇಟಿಗೆ ಅವಕಾಶ ನೀಡದ ಪಿಯೂಷ್ ಗೋಯಲ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಮುನಿಯಪ್ಪ, ಇದಕ್ಕೆ ರಾಜ್ಯ ಬಿಜೆಪಿ ನಾಯಕರ ಕೈವಾಡ ಇದೆ ಎಂದು ದೂರಿದರು.