ತಿರುವನಂತಪುರಂ: ಅಂತರ್ಧರ್ಮೀಯ ಜೋಡಿಯೊಂದು ಕೇರಳದ ತಿರುವನಂತಪುರದ ಕೋವಳಂ ದೇವಾಲಯದಲ್ಲಿ ವಿವಾಹವಾಗುವುದರಲ್ಲಿತ್ತು. ಆದರೆ ವಿವಾಹಕ್ಕೇ ಮುನ್ನವೇ ಪೊಲೀಸರು ಸ್ಥಳಕ್ಕೆ ದೌಢಾಯಿಸಿ ವಧುವನ್ನು ಎಳೆದೊಯ್ದ ಘಟನೆ ನಡೆದಿದೆ.
ಈ ಘಟನೆ ಜೂನ್ 18ರಂದು ನಡೆದಿದೆ. ಪರಸ್ಪರ ಪ್ರೀತಿಸುತ್ತಿದ್ದ ಆಲ್ಫಿಯಾ ಹಾಗೂ ಅಖಿಲ್ ಜೋಡಿ ಮದುವೆಯಾಗಲು ಕೋವಳಂ ದೇವಾಲಯಕ್ಕೆ ತೆರಳಿತ್ತು. ವರ ಇನ್ನೇನು ವಧುವಿಗೆ ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಲ್ಫಿಯಾಳನ್ನು ವಶಕ್ಕೆ ಪಡೆದು ನ್ಯಾಯಾಲದಲ್ಲಿ ಹಾಜರುಪಡಿಸಿದ್ದಾರೆ.
ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಪೊಲೀಸ್ ಅಧಿಕಾರಿಗಳು ಆಲ್ಫಿಯಾ ನಾಪತ್ತೆಯಾಗಿರುವ ಬಗ್ಗೆ ನಮಗೆ ಆಕೆಯ ಪೋಷಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾವು ಆಕೆಯನ್ನು ಕರೆದೊಯ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ವರ ಅಖಿಲ್ ಹಾಗೂ ವಧು ಆಲ್ಫಿಯಾರನ್ನು ಮದುವೆ ಮಂಟಪದಿಂದಲೇ ಪೊಲೀಸರು ಬಲವಂತವಾಗಿ ಎಳೆದೊಯ್ಯುತ್ತಿರುವ ವಿಡಿಯೋ ಚಿತ್ರೀಕರಿಸಲಾಗಿದೆ. ಪೊಲೀಸರ ಈ ವರ್ತನೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗುತ್ತದೆ ಎಂದು ಜೋಡಿ ತಿಳಿಸಿದೆ.