-->
1000938341
ಪ್ಯಾನ್ ಕಾರ್ಡ್ ಇದ್ದವರು ಈ ಸುದ್ದಿ ಕಡ್ಡಾಯವಾಗಿ ಓದಲೇಬೇಕು..!

ಪ್ಯಾನ್ ಕಾರ್ಡ್ ಇದ್ದವರು ಈ ಸುದ್ದಿ ಕಡ್ಡಾಯವಾಗಿ ಓದಲೇಬೇಕು..!

ಪ್ಯಾನ್ ಕಾರ್ಡ್ ಇದ್ದವರು ಈ ಸುದ್ದಿ ಕಡ್ಡಾಯವಾಗಿ ಓದಲೇಬೇಕು..!





ಇದು ಆದಾಯ ತೆರಿಗೆ ಇಲಾಖೆ ಹಾಗೂ ಕೇಂದ್ರೀಯ ನೇರ ತೆರಿಗೆ ಮಂಡಳಿಯ ಅಧಿಕೃತ ಹಾಗೂ ಜಂಟಿ ಪ್ರಕಟಣೆ. ಪ್ಯಾನ್ ಕಾರ್ಡ್ ಇದ್ದ ಪ್ರತಿಯೊಬ್ಬರಿಗೂ ಮಹತ್ವದ ಹಾಗೂ ಓದಲೇಬೇಕಾದ ಸುದ್ದಿ ಇದು..


ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ ಜೋಡಣೆ ಕುರಿತಾದ ಮಹತ್ವದ ಪ್ರಕಟಣೆ ಇದು.. ಈ ಎರಡು ನಮ್ಮ ದೇಶದ ಪ್ರತಿಯೊಬ್ಬರಲ್ಲೂ ಇರಬೇಕಾದ ಮಹತ್ವದ ದಾಖಲೆ. ಈ ಎರಡು ದಾಖಲೆಗಳನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಇದಕ್ಕೆ 30-06-2023 ಕೊನೆಯ ದಿನಾಂಕವಾಗಿದೆ ಎಂಬುದನ್ನು ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. (ಲಿಂಕ್‌ ನ್ನು ಸುದ್ದಿಯ ಕೊನೆಯಲ್ಲಿ ನೀಡಲಾಗಿದೆ)



ರೂ. 1000/- ವಿಳಂಬ ಶುಲ್ಕ ಸಹಿತ ಆನ್‌ನಲ್ಲಿ ಪಾನ್‌ ಕಾರ್ಡನ್ನು ಆಧಾರ್‌ ಕಾರ್ಡ್‌ಗೆ ಲಿಂಕ್ ಮಾಡಬೇಕು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.



ಒಂದು ವೇಳೆ ಲಿಂಕ್ ಮಾಡದಿದ್ದರೆ ಏನಾಗುತ್ತದೆ....?

ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ ಜೋಡಣೆ ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್‌ ಸ್ಥಗಿತಗೊಳ್ಳಬಹುದು.

ಅಂತಹ ಪಾನ್ ಸಂಖ್ಯೆಗಳಿಗೆ ಪಾವರಿಸಬೇಕಾದ ರೀಫಂಡ್ ಹಾಗೂ ಬಡ್ಡಿ ಪಾವತಿಗಳು ಬಾಕಿ ಉಳಿಯುತ್ತವೆ.

ಗರಿಷ್ಟ ಪ್ರಮಾಣದಲ್ಲಿ ಟಿಡಿಎಸ್ ಕಡಿತಕ್ಕೆ ಕಾರಣವಾಗುತ್ತದೆ

ಗರಿಷ್ಟ ಪ್ರಮಾಣದಲ್ಲಿ ಟಿಡಿಎಸ್‌ ಸಂಗ್ರಹಕ್ಕೆ ಕಾರಣವಾಗುತ್ತದೆ.



ಈ ಲಿಂಕ್ ಯಾಕೆ..?

ದಯವಿಟ್ಟು ಗಮನಿಸಿ:

ಯಾವ ವ್ಯಕ್ತಿಯೂ ಒಂದಕ್ಕಿಂತ ಹೆಚ್ಚು ಪ್ಯಾನ್ ಪಡೆಯಲಾಗುವುದಿಲ್ಲ.

ಒಂದಕ್ಕಿಂತ ಹೆಚ್ಚು ಪ್ಯಾನ್ ಪಡೆದುಕೊಂಡಲ್ಲಿ ರೂ. 10,000/- ದಂಡ ವಿಧಿಸಬಹುದಾಗಿದೆ.

ಪಾನ್ ಕಾರ್ಡ್ ಹೊಂದಿದವರು ಈ ಕೆಳಗಿನ ಲಿಂಕ್ ಮೂಲಕ ತಮ್ಮ ಪ್ಯಾನ್ ಸ್ಥಿತಿಗತಿ (Status)ನ್ನು ಪರಿಶೀಲಿಸಬಹುದು.


ಲಿಂಕ್ ಮಾಡಲು ಈ ಕೆಳಗಿನ ಲಿಂಕ್ ಬಳಸಿ: www.incometax.gov.in/iec/foportal

Status ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ: www.incometax.gov.in 

Ads on article

Advertise in articles 1

advertising articles 2

Advertise under the article