-->
1000938341
ದೇಶದ ಪ್ರಧಾನಿ ಹೆಸರು ಗೊತ್ತಿಲ್ಲದ ವರನನ್ನು ಬಿಟ್ಟು ಆತನ ಸಹೋದರನ ಮದುವೆಯಾದ ವಧು

ದೇಶದ ಪ್ರಧಾನಿ ಹೆಸರು ಗೊತ್ತಿಲ್ಲದ ವರನನ್ನು ಬಿಟ್ಟು ಆತನ ಸಹೋದರನ ಮದುವೆಯಾದ ವಧು

ಉತ್ತರಪ್ರದೇಶ: ಮಂಟಪದಲ್ಲಿಯೇ ಮದುವೆ ಮುರಿದು ಬೀಳುವ ಅದೆಷ್ಟೋ ಪ್ರಸಂಗಗಳು ನಾವು ನೋಡುತ್ತಲೇ ಇರುತ್ತೇವೆ. ಆದರೆ ಇಲ್ಲೊಬ್ಬ ವಧು, ದೇಶದ ಪ್ರಧಾನಿ ಹೆಸರು ಹೇಳಲು ಹೆಣಗಾಡಿದ ವರನೊಂದಿಗಿನ ಮದುವೆಯನ್ನೇ ಮುರಿದು ಆತನ ತಮ್ಮನನ್ನು ವಿವಾಹವಾದ ವಿಲಕ್ಷಣ ಘಟನೆಯೊಂದು ಗಾಜಿಪುರ ಜಿಲ್ಲೆಯ ಸೈದ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ  ಬೆಳಕಿಗೆ ಬಂದಿದೆ.

ನಾಸಿರ್‌ಪುರ ಗ್ರಾಮದ ನಿವಾಸಿ ಶಿವಶಂಕರ್ (27) ಎಂಬಾತನ ವಿವಾಹ ರಂಜನಾ ಎಂಬಾಕೆಯೊಂದಿಗೆ ಜೂನ್ 11ರಂದು ನಡೆದಿದೆ. ಮದುವೆಯ ಮರುದಿನ ಎರಡೂ ಕುಟುಂಬದವರು ಸೇರಿ ಖಿಚಡಿ( ಉತ್ತರಪ್ರದೇಶ ಸಂಪ್ರದಾಯ) ಕಾರ್ಯಕ್ರಮ ಆಯೋಜಿಸಿದ್ದಾರೆ. ಈ ಪ್ರಶೋತ್ತರ ಆಟದ ಸಂದರ್ಭ ವಧುವಿನ ಕಡೆಯವರು ವರನಿಗೆ, ವರನ ಕಡೆಯವರು ವಧುವಿಗೆ ಪ್ರಶ್ನೆ ಕೇಳಿ, ಉತ್ತರ ಪಡೆಯುವ ಆಟವಿದು.

ಈ ಖಿಚಡಿ ಆಡುವ ವೇಳೆ ವಧುವಿನ ಸೋದರಿ ವರನಿಗೆ ದೇಶದ ಪ್ರಧಾನಿ ಯಾರೆಂದು ಕೇಳಿದ್ದಾರೆ. ಆದರೆ ಅದಕ್ಕೆ ವರ ಉತ್ತರ ಕೊಡಲಿಲ್ಲ. ಬಳಿಕ ಇನ್ನೂ ಕೆಲವು ಪ್ರಶ್ನೆ ಕೇಳಿದಾಗಲೂ ವರನ ಕಡೆಯಿಂದ ಉತ್ತರವೇ ದೊರಕಲಿಲ್ಲ. ವರ ಉತ್ತರ ಕೊಡದಿರುವುದನ್ನು ಕಂಡು ವಧುಗೆ ಬೇಸರವಾಗಿದೆ. ಯಾವ ಪ್ರಶ್ನೆಗೂ ಉತ್ತರ ನೀಡದೇ ಇರುವುದುರಿಂದ ಅಲ್ಲಿದ್ದವರು ಗೇಲಿ ಮಾಡಲು ಪ್ರಾರಂಭಿಸಿದ್ದಾರೆ. ಕೋಪಗೊಂಡ ವಧು ಸಾಮಾನ್ಯ ಜ್ಞಾನವಿಲ್ಲದ ವ್ಯಕ್ತಿ ನನಗೆ ಪತಿಯಾಗಿ ಬೇಡವೆಂದು ವಧು ಮದುವೆ ಮುರಿದುಕೊಂಡಿದ್ದಾಳೆ. ಬಳಿಕ ಎರಡೂ ಮನೆಯವರ ಒತ್ತಾಯದ ಮೇರೆಗೆ ವರನ ಸಹೋದರನನ್ನು ಮತ್ತೆ ಮರುಮದುವೆಯಾಗಿದ್ದಾಳೆ.

ಬಳಿಕ ವಧುವಿನ ಕುಟುಂಬಸ್ಥರು ವರನ ಮನೆಗೆ ಹೋಗಿ ತಮ್ಮ ಪುತ್ರಿಯನ್ನು ಮನೆಗೆ ಕಳುಹಿಸಿ ಕೊಡಿ ಎಂದು ಗಲಾಟೆ ಮಾಡಿದ್ದಾರೆ. ಈ ಘಟನೆಯಿಂದ ಬೇಸರಗೊಂಡ ವರನ ಕುಟುಂಬಸ್ಥರು ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾರೆ. ಈ ಪ್ರಕರಣದ ಕುರಿತಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article