-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಸೌಜನ್ಯ ಅತ್ಯಾಚಾರ ಪ್ರಕರಣ-  ನಮ್ಮ ಮೇಲೆ ಆರೋಪ ಮಾಡುವ ತಿಮರೋಡಿ ಕಾನತ್ತೂರಿಗೆ ಆಣೆ ಪ್ರಮಾಣಕ್ಕೆ ಬರಲಿ :  ಧೀರಜ್  ಕೆಲ್ಲ

ಸೌಜನ್ಯ ಅತ್ಯಾಚಾರ ಪ್ರಕರಣ- ನಮ್ಮ ಮೇಲೆ ಆರೋಪ ಮಾಡುವ ತಿಮರೋಡಿ ಕಾನತ್ತೂರಿಗೆ ಆಣೆ ಪ್ರಮಾಣಕ್ಕೆ ಬರಲಿ : ಧೀರಜ್ ಕೆಲ್ಲ




ಮಂಗಳೂರು: ದೇಶದಲ್ಲಿಯೇ ಭಾರೀ ಸಂಚಲನ ಸೃಷ್ಟಿಸಿದ್ದ 2012ರಲ್ಲಿ ನಡೆದ  ಧರ್ಮಸ್ಥಳದ ಅಪ್ರಾಪ್ತೆ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್ ಆರೋಪಿ ಸಂತೋಷ್ ನನ್ನು‌ ಖುಲಾಸೆಗೊಳಿಸಿ ತೀರ್ಪು ನೀಡಿದ ಬಳಿಕ ಈ ಪ್ರಕರಣದಲ್ಲಿ ಆರೋಪ ಹೊತ್ತಿದ್ದ ಧರ್ಮಸ್ಥಳದ ಧೀರಜ್ ಕೆಲ್ಲ, ಉದಯ್ ಜೈನ್ ಮತ್ತು ಮಲ್ಲಿಕ್ ಜೈನ್ ಸುದ್ದಿಗೋಷ್ಟಿ ನಡೆಸಿ ನಮ್ಮ ಮೇಲೆ ಆರೋಪ ಮಾಡುವ ತಿಮರೋಡಿ ಕಾನತ್ತೂರಿಗೆ ಆಣೆ ಪ್ರಮಾಣಕ್ಕೆ ಬರಲಿ ಎಂದು ಸವಾಲೆಸೆದಿದ್ದಾರೆ.


ಮಾಜಿ ಸಚಿವ ಅಭಯ ಚಂದ್ರ ಜೈನ್ ಉಪಸ್ಥಿತಿಯಲ್ಲಿ ಈ ಮೂವರು ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾದರು.  ಧೀರಜ್ ಕೆಲ್ಲಾ ಮಾತನಾಡಿ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಇತರರು ನಮ್ಮ ವಿರುದ್ದ ಆರೋಪ ಮಾಡಿದ್ದರು. ದುಡ್ಡು ಮಾಡುವ ಏಕೈಕ ಉದ್ದೇಶದಿಂದ ತಿಮರೋಡಿ ಆರೋಪ ಮಾಡಿದ್ದರು.ನಾವು ತನಿಖೆಗೆ ಹಾಜರಾದರೂ ಸುಖಾಸುಮ್ಮನೆ ಆರೋಪ ಮಾಡಲಾಗಿತ್ತು.ಹೀಗಾಗಿ ನಾವು ಕಾನತ್ತೂರು ದೈವರ ಮೊರೆ ಹೋಗಿ ಆಣೆಗೆ ಕರೆದಿದ್ದೆವು, ಆದರೆ ಅದನ್ನು ತಪ್ಪಿಸಿದ್ದರು ಎಂದರು.

2014ರಲ್ಲಿ ಜುಲೈ ಹಾಗೂ ಅಗಸ್ಟ್ ನಲ್ಲಿ ಸಿಬಿಐ ನಮ್ಮನ್ನು ಎರಡೆರೆಡು ಬಾರಿ ಬೆಳ್ತಂಗಡಿ ಐಬಿಯಲ್ಲಿ ತನಿಖೆ ಮಾಡಿತ್ತು.ಚೆನ್ನೈ, ಬೆಂಗಳೂರಿಗೂ ಕರೆಸಿ ನಮ್ಮ ತನಿಖೆ ಮಾಡಿದ್ದಾರೆ.ನಮ್ಮ ರಕ್ತ ಪರೀಕ್ಷೆ, ಡಿಎನ್ಎ ಪರೀಕ್ಷೆ, ಮಂಪರು ಪರೀಕ್ಷೆ (ಬ್ರೈನ್ ಮ್ಯಾಪಿಂಗ್) ಕೂಡ ಸಿಬಿಐ ಮಾಡಿದೆ.ಮೊಬೈಲ್ ಲೊಕೇಶನ್ ಟ್ರೇಸ್, ಸುಳ್ಳು ಪತ್ತೆಯ ಪಾಲಿಗ್ರಾಫ್ ಟೆಸ್ಟ್ ಜೊತೆ ಅನೇಕ ವೈಜ್ಞಾನಿಕ ಪರೀಕ್ಷೆ ಮಾಡಲಾಗಿದೆ ಎಂದರು.

2015ರ ಫೆ.23ರಂದು ನಮ್ಮ ಮನವಿ ಮೇರೆಗೆ ಸಿಬಿಐ ಬೆಂಗಳೂರಿನ ಕೋರ್ಟ್ ಗೆ ಬ್ರೈನ್ ಮ್ಯಾಪಿಂಗ್ ಗೆ ಅರ್ಜಿ ಹಾಕಿತ್ತು.ಕೋರ್ಟ್ ಅನೇಕ ಬಾರಿ ಇದರ ಅಡ್ಡ ಪರಿಣಾಮಗಳ ಬಗ್ಗೆ ಹೇಳಿತ್ತು.ಆದರೆ ನಮ್ಮ‌ ಮನವಿ ಮೇರೆಗೆ ಕೋರ್ಟ್ ಮಂಪರು ಪರೀಕ್ಷೆ ಮತ್ತು ಬ್ರೈನ್ ಮ್ಯಾಪಿಂಗ್ ಗೆ ಅನುಮತಿ ನೀಡಿತ್ತು.ಕೊನೆಗೆ ಎಲ್ಲಾ ತನಿಖೆ ಬಳಿಕ ಸಿಬಿಐ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು.ಆದರೆ ಆ ಆರೋಪ ಪಟ್ಟಿಯಲ್ಲಿ ಎಲ್ಲೂ ನಮ್ಮನ್ನ ಅಪರಾಧಿ ಮಾಡಿಲ್ಲ ಎಂದರು.

ಆದರೆ ಮತ್ತೆ ಸೌಜನ್ಯ ತಂದೆ ನಮ್ಮನ್ನು ಸಹ ಆರೋಪಿ ಮಾಡಲು ಅರ್ಜಿ ಹಾಕಿದರು.ಆದರೆ ನಮ್ಮ ಅನುಪಸ್ಥಿತಿಯಲ್ಲಿ ಕೋರ್ಟ್ ನಮಗೆ ಸಮನ್ಸ್ ನೀಡಿತು.ಹೀಗಾಗಿ ನಾವು ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದಾಗ ನ್ಯಾಯಾಲಯ ಸಿಬಿಐ ಆರೋಪ ಪಟ್ಟಿ ಉಲ್ಲೇಖಿಸಿತು.ನಮ್ಮ ವಿರುದ್ದ ಯಾವುದೇ ಸಾಕ್ಷ್ಯ, ಆರೋಪ ಇಲ್ಲದ ಕಾರಣ ಸಹ ಆರೋಪಿ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ತಂದೆಯ ಮನವಿ ರದ್ದು ಮಾಡಿತು ಎಂದರು.

ಇದೀಗ ಇಡೀ ಕೇಸ್ ನಲ್ಲಿ ಸಿಬಿಐ ಕೋರ್ಟ್ ತೀರ್ಪು ಕೊಟ್ಟಿದೆ.ಹೀಗಿದ್ದರೂ ಮಹೇಶ್ ಶೆಟ್ಟಿ ಮತ್ತೆ ನಮ್ಮ ವಿರುದ್ದ ಆರೋಪ‌ ಮಾಡುತ್ತಿದ್ದಾರೆ.ಮಾಧ್ಯಮಗಳ ಎದುರು ಬಂದು ನಮ್ಮ ವಿರುದ್ದ ಆರೋಪ ಮಾಡುತ್ತಿದ್ದಾರೆ.ಹೀಗಾಗಿ ನಾವು ಮತ್ತೆ ಅವರನ್ನು ಆಣೆ ಪ್ರಮಾಣಕ್ಕೆ ಕರೀತಾ ಇದೇವೆ.ತಿಮರೋಡಿ ಅವನ ಅಪ್ಪನಿಗೆ ಹುಟ್ಟಿದ್ರೆ ಆಣೆ ಪ್ರಮಾಣಕ್ಕೆ ಬರಲಿ.ಕಾನತ್ತೂರು ನಾಲ್ವರ್ ದೈವಗಳ ಎದುರು ಬಂದು ಆಣೆ ಮಾಡಲಿ ಎಂದರು.

ಮಹೇಶ್ ಶೆಟ್ಟಿ ತಿಮರೋಡಿ ದುಡ್ಡು ಮಾಡುವ ಏಕೈಕ ಉದ್ದೇಶದಿಂದ ಬಾಲಕಿಯ ಮನೆಯವರನ್ನು ತಲೆಕೆಡಿಸಿ ನಾವು ತನಿಖೆಗೆ ಹಾಜರಾಗಿದ್ದರೂ ನಮ್ಮ ಮೇಲೆ ಸುಖಾಸುಮ್ಮನೆ ಅತ್ಯಾಚಾರ, ಕೊಲೆ ಆರೋಪ ಮಾಡಿದ್ದಾರೆ. ಅವರಿಗೆ ಅಣ್ಣಪ್ಪನ ಮೇಲೆ ಭಕ್ತಿ ಇಲ್ಲದಿದ್ದರೂ ಧರ್ಮಸ್ಥಳಕ್ಕೆ ಆಣೆ ಪ್ರಮಾಣಕ್ಕೆ ಕರೆಯುತ್ತಾರೆ. ತಿಮರೋಡಿಯಂತಹ ರೌಡಿಶೀಟರ್ ಧರ್ಮಸ್ಥಳ ಕ್ಷೇತ್ರಕ್ಕೆ ಪ್ರವೇಶಿಸಿದರೆ ಅಲ್ಲಿ ಬ್ರಹ್ಮಕಲಶವೇ ಮಾಡಬೇಕಾದೀತು. ಆದ್ದರಿಂದ ನಾವು ಈ  ಅತ್ಯಾಚಾರ, ಕೊಲೆ ನಾವು ಮಾಡಿಲ್ಲವೆಂದು ಕಾನತ್ತೂರು ಕ್ಷೇತ್ರಕ್ಕೆ ಬಂದು ಆಣೆ - ಪ್ರಮಾಣ ಮಾಡುತ್ತೇವೆ ಎಂದರು.

ಆಣೆ - ಪ್ರಮಾಣವನ್ನು ಒಂದು ವಾರದೊಳಗೆ ನಾವು ಮಾಡಲಿದ್ದೇವೆ. ಮಹೇಶ್ ಶೆಟ್ಟಿ ತಿಮರೋಡಿ, ಬಾಲಕಿಯ ಮನೆಯವರು ಹಾಗೂ ಮಾಧ್ಯಮಗಳ ಸಮಕ್ಷಮದಲ್ಲಿಯೇ ನಾವು ಕಾನತ್ತೂರು ಕ್ಷೇತ್ರದಲ್ಲಿ ಆಣೆ ಮಾಡಲಿದ್ದೇವೆ. 

ಆರೋಪಿ ಸಂತೋಷ್ ನನ್ನ ನಾವು ಕಳ್ಳತನದ ಸಂಶಯದ ಮೇಲೆ ಪೊಲೀಸರಿಗೆ ಹಿಡಿದು ಕೊಟ್ಟೆವು.ಅವನು ಓಡಿದಾಗ ಕಳ್ಳ ಅಂತ ನಾವು ಹಿಡಿದು ಕೊಟ್ಟೆವು.ಆದರೆ ಪೊಲೀಸರು ಅವನನ್ನ ಅರೆಸ್ಟ್ ಮಾಡಿದ್ದರು.ನಾವು ಅವನೇ ಸೌಜನ್ಯ ಆರೋಪಿ ಅಂತ ಹೇಳಿಲ್ಲ, ಅದು ನಮಗೆ ಸಂಬಂಧಿಸಿದ್ದಲ್ಲ ಎಂದರು.

ಈ ಪ್ರಕರಣದಲ್ಲಿ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಆಕೆಯ ಮಾವ ವಿಠ್ಠಲ ಗೌಡನ ಮೇಲೆ ನಮಗೆ ಅನುಮಾನವಿದೆ. ಇವರ ತನಿಖೆಯಾದಲ್ಲಿ ಸತ್ಯ ಬಯಲಾಗುತ್ತದೆ ಎಂದು  ಧೀರಜ್ ಕೆಲ್ಲ ಆರೋಪಿಸಿದರು.

ಸುದ್ದಿಗೋಷ್ಟಿಯಲ್ಲಿ ತಿಮರೋಡಿ ವಿರುದ್ದ ಗುಡುಗಿದ ಮಾಜಿ ಸಚಿವ ಅಭಯ ಚಂದ್ರ ಜೈನ್ ಅವರು ತಿಮರೋಡಿ ಇದೀಗ ಮತ್ತೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ವಿರುದ್ದ ಮಾತನಾಡುತ್ತಿದ್ದಾನೆ.ಅವನು ಹಣ ಮಾಡುವ ಉದ್ದೇಶದಿಂದ ಇದನ್ನು ಮಾಡುತ್ತಿದಾನೆ.ಅವನು ಒಬ್ಬ ರೌಡಿಶೀಟರ್, ಬೆಳ್ತಂಗಡಿ ತಾಲೂಕಿನ ಕೆಟ್ಟ ವ್ಯಕ್ತಿ.ಅವನ ಈ ಹೇಳಿಕೆಗಳ ವಿರುದ್ಧ ನಾವು ಪ್ರತಿಭಟಿಸ್ತೇವೆ.ಅವನಿಗೆ ತಲೆ ಸರಿ ಇಲ್ಲ, ನಮ್ಮ ಹೆಗ್ಗಡೆಯವರ ಬಗ್ಗೆ ಮಾತನಾಡ್ತಾನೆ.ಅವನ ವಿರುದ್ದ ಕಾನೂನಾತ್ಮಕ ಹೋರಾಟ ನಾವು ಮಾಡ್ತೇವೆ.ಸಮಾಜದ ವ್ಯಕ್ತಿ ವಿರುದ್ದ ಅವನು ಅಪನಂಬಿಕೆ ಮೂಡಿಸ್ತಿದಾನೆ ಎಂದರು

ತಿಮರೋಡಿ ಎಷ್ಟೇ ದೊಡ್ಡ ರೌಡಿಯಾದ್ರೂ ನಾವು ನೋಡಿಕೊಳ್ಳುತ್ತೇವೆ.ತಿಮರೋಡಿ ನೈಜ ಆರೋಪಿಗಳ ಪತ್ತೆಗೆ ಐಜಿ ಕಚೇರಿ ಎದುರು ಹೋರಾಟ ಮಾಡಲಿ.ಯಾರೋ ದೊಡ್ಡ ವ್ಯಕ್ತಿ ವಿರುದ್ದ ಮಾತನಾಡುವುದಲ್ಲ.ಸೌಜನ್ಯ ಮಾವ ವಿಠಲ ಮತ್ತು‌ ಮಹೇಶ್ ಶೆಟ್ಟಿ ವಿರುದ್ದ ತನಿಖೆ‌ ನಡೆಯಬೇಕು ಎಂದರು.

Ads on article

Advertise in articles 1

advertising articles 2

Advertise under the article

ಸುರ