ಏರ್‌ಬಸ್ ಏರೋಥಾನ್‌ 2023: ಸಹ್ಯಾದ್ರಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ

ಏರ್‌ಬಸ್ ಏರೋಥಾನ್‌ 2023: ಸಹ್ಯಾದ್ರಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ







2023ರ ಏರ್‌ಬಸ್‌ ಏರೋಥಾನ್‌ನಲ್ಲಿ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಹೋನ್ನತ ಸಾಧನೆ ಮಾಡಿದ್ದಾರೆ.



ಐಶ್ವರ್ಯ ಕೆ. ಜಾಕ್ಸನ್ ಲೋಬೋ, ಶ್ರೀನಿಧಿ ಭಾರಧ್ವಾಜ್ ಕೆ.ಎಸ್., ಮತ್ತು ವಿವೇಕ್ ಟಿ.ಎಂ. ಅವರನ್ನೊಳಗೊಂಡ ತಂಡ ಪ್ರತಿಷ್ಠಿತ ಏರೋಥಾನ್‌ನಲ್ಲಿ ಜಯಶಾಲಿಯಾಗಿದ್ದು, ಒಂದು ಲಕ್ಷ ರೂ. ನಗದು ಬಹುಮಾನದೊಂದಿಗೆ ಪ್ರಶಸ್ತಿ ಪಡೆದಿದೆ.



ಐಐಟಿ ಸೇರಿದಂತೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳಿಂದ ಬಂದ ಸುಮಾರು 10,000 ವೀಕ್ಷಕರ ನಡುವೆ ಕೌಶಲ್ಯ ಮತ್ತು ಪರಿಣತಿಯನ್ನು ಪ್ರದರ್ಶಿಸಿದ ಸಹ್ಯಾದ್ರಿ ವಿದ್ಯಾರ್ಥಿಗಳು ಕಠಿಣ ಪ್ರತಿಸ್ಪರ್ಧೆಯ ಮಧ್ಯೆ ಈ ಸಾಧನೆ ಮೆರೆದಿದ್ದಾರೆ.



ಏರ್‌ಬಸ್, ಪ್ರಮುಖ ಯೂರೋಪಿಯನ್ ಏರೋಸ್ಪೇಸ್ ಕಾರ್ಪೊರೇಶನ್, ಅದರ ವಿನ್ಯಾಸ, ಉತ್ಪಾದನೆ ಮತ್ತು ವಾಣಿಜ್ಯ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ರಕ್ಷಣಾ ವ್ಯವಸ್ಥೆಗಳ ಮಾರಾಟಕ್ಕಾಗಿ ಏರೋಥಾನ್ ಗುರುತಿಸಲ್ಪಟ್ಟಿದೆ.



ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು ಪಿಪಿಟಿ ಮೂಲಕ ತಮ್ಮ ಪಾಂಡಿತ್ಯ ಪ್ರದರ್ಶಿಸಿದರು. ಅಜೂರ್ ಕ್ಲೌಡ್‌ನಲ್ಲಿ ನಿಯೋಜಿಸಲಾದ ಪ್ರಾಜೆಕ್ಟ್‌ನ ಡೆಮೋದಲ್ಲಿ ಸಹ್ಯಾದ್ರಿ ಹೆಚ್ಚುವರಿ ಅಂಕಗಳನ್ನು ಬಾಚಿಕೊಂಡಿತು. ವಿಭಿನ್ನ ವಿಭಾಗದ ಲಾಗಿನ್‌ಗಾಗಿ ಸರಳವಾದ ಇಂಟರ್‌ಫೇಸ್‌ ನ್ನು ವಿನ್ಯಾಸಗೊಳಿಸಿದ್ದರು. ದೃಢೀಕರಿಸಿದ ಡಾಟಾ, ಪುನರಾವರ್ತನೆಯನ್ನು ಕಡಿಮೆ ಮಾಡಲು ಜನರಲ್ ಡಾಟಾ ಬೇಸ್‌ನ್ನು ರಚಿಸಿದ್ದರು.



ಸಹ್ಯಾದ್ರಿ ವಿದ್ಯಾರ್ಥಿಗಳ ಸಾಧನೆ ಪರಿಗಣಿಸಿ ಒಂದು ಲಕ್ಷ ರೂ. ಬಹುಮಾನವೂ ಒಲಿದುಬಂದಿದೆ. ಇದರ ಜೊತೆಗೆ ಏರ್‌ಬಸ್‌ನಲ್ಲಿ ನೇಮಕಾತಿಗೆ ಅಪೂರ್ವ ಅವಕಾಶವೂ ಒಲಿದುಬಂದಿದೆ.



ಅಸಾಧಾರಣ ಪ್ರತಿಭೆಗಳಿಗೆ ಮಾತ್ರ ಇಂತಹ ಅಪೂರ್ವ ಅವಕಾಶ ಲಭ್ಯವಾಗುತ್ತದೆ. ಏರೋಸ್ಪೇಸ್‌ ಉದ್ಯಮದಲ್ಲಿ ತಮ್ಮ ವೃತ್ತಿಪರ ಪ್ರಯಾಣವನ್ನು ಪ್ರಾರಂಭಿಸಿದಾಗ ವಿದ್ಯಾರ್ಥಿಗಳ ಭವಿಷ್ಯ ನಿಶ್ಚಿತವಾಗಿ ಉಜ್ವಲವಾಗಲಿದೆ.

.