-->
1000938341
ನಗ್ನ ವೀಡಿಯೋ ಕಾಲ್ ರೆಕಾರ್ಡ್: ಮಹಿಳಾ ಪ್ರೊಫೆಸರ್‌ ಗೆ 4ಲಕ್ಷ ಬೇಡಿಕೆಯಿಟ್ಟ ಮಾಜಿ ವಿದ್ಯಾರ್ಥಿ

ನಗ್ನ ವೀಡಿಯೋ ಕಾಲ್ ರೆಕಾರ್ಡ್: ಮಹಿಳಾ ಪ್ರೊಫೆಸರ್‌ ಗೆ 4ಲಕ್ಷ ಬೇಡಿಕೆಯಿಟ್ಟ ಮಾಜಿ ವಿದ್ಯಾರ್ಥಿ

ಪುಣೆ: ವಿದ್ಯಾರ್ಥಿಯೋರ್ವನು ತನ್ನ ಮಾಜಿ ಮಹಿಳಾ ಪ್ರೊಫೆಸರ್‌ ನಗ್ನ ವೀಡಿಯೋ ಇರಿಸಿಕೊಂಡು ಬ್ಲಾಕ್‌ ಮೇಲ್ ಮಾಡಿ 4 ಲಕ್ಷ ರೂ.ಗೆ ಬೇಡಿಕೆಯಿಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡ  ಪೊಲೀಸರು ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ

ಬಿಹಾರ ಮೂಲದ ಮಯಾಂಕ್ ಸಿಂಗ್ ಬಂಧಿತ ವಿದ್ಯಾರ್ಥಿ. ಈತ ಮಹಾರಾಷ್ಟ್ರದ ವಿವಿಯ ವಿದ್ಯಾರ್ಥಿಯಾಗಿದ್ದನು. ಈತ ಪರೀಕ್ಷೆಯಲ್ಲಿ ಪಾಸ್ ಆದ ಬಳಿಕವೂ ಮಹಿಳಾ ಪ್ರೊಫೆಸರ್ ಒಬ್ಬರೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಆಗಾಗ್ಗೆ ಚಾಟ್ ಮಾಡುತ್ತಿದ್ದ. ಬಳಿಕ ಇವರಿಬ್ಬರು ಪರಸ್ಪರ ವಾಟ್ಸ್ಆ್ಯಪ್ ಕರೆ ಮಾಡಲು ಆರಂಭಿಸಿದ್ದರು. ಹೀಗಿರುವಾಗಲೇ ಮಯಾಂಕ್ ಪ್ರೊಫೆಸರ್ ಜತೆಗಿನ ಎಲ್ಲ ಕರೆಗಳನ್ನು ರೆಕಾರ್ಡ್ ಮಾಡಿಕೊಂಡು ಅವುಗಳನ್ನು ವಿವಿಗೆ ಬಹಿರಂಗಗೊಳಿಸುವುದಾಗಿ ಹೆದರಿಸುತ್ತಿದ್ದನು.

ಆದ್ದರಿಂದ ಆ ಪ್ರೊಫೆಸರ್ ಅವನು ಹೇಳಿದಂತೆ ಕೇಳಬೇಕಾದ ಸ್ಥಿತಿಗೆ ಸಿಲುಕಿದ್ದರು. ಇದನ್ನೇ ಮಯಾಂಕ್ ತನ್ನ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸಿದ್ದಾನೆ. ಇತ್ತೀಚೆಗಷ್ಟೇ ಮಯಾಂಕ್ ಆಕೆಗೆ ವಿಡಿಯೋ ಕರೆ ಮಾಡಿ, ತಾನು ಹೇಳಿದಂತೆ ನಡೆದುಕೊಳ್ಳದಿದ್ದರೆ ತಮ್ಮ ಚಾಟಿಂಗ್‌ನ ಸ್ಟೀನ್ ಶಾಟ್ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.

ಇದರಿಂದ ಬೆದರಿದ ಪ್ರೊಫೆಸರ್, ವಿದ್ಯಾರ್ಥಿ ಹೇಳಿದಂತೆಯೇ ವೀಡಿಯೋ ಕಾಲ್‌ನಲ್ಲಿ ಬೆತ್ತಲೆಯಾಗಿದ್ದಾರೆ. ಆತ ವೀಡಿಯೋ ಕಾಲ್ ಅನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ಅಲ್ಲದೆ ಆರೋಪಿ ಆ ವೀಡಿಯೋವನ್ನು ಆಕೆಯ ಪತಿಗೆ ಕಳುಹಿಸಿ 4 ಲಕ್ಷ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾನೆ. ಕೊನೆಗೆ ಪ್ರೊಫೆಸರ್ ದಂಪತಿ ಪೊಲೀಸರನ್ನು ಸಂಪರ್ಕಿಸಿ ವಿದ್ಯಾರ್ಥಿಯ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. 

Ads on article

Advertise in articles 1

advertising articles 2

Advertise under the article