-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
14ರ ಬಾಲಕ ಎಲಾನ್ ಮಸ್ಕ್ ಒಡೆತನದ ಸಂಸ್ಥೆಯಲ್ಲಿ ಇಂಜಿನಿಯರ್

14ರ ಬಾಲಕ ಎಲಾನ್ ಮಸ್ಕ್ ಒಡೆತನದ ಸಂಸ್ಥೆಯಲ್ಲಿ ಇಂಜಿನಿಯರ್

ನವದೆಹಲಿ: ಮಕ್ಕಳೆಲ್ಲರೂ ತಮ್ಮ ಹದಿಹರೆಯ ಮುಗಿಯುವವರೆಗೂ ವಿದ್ಯಾಭ್ಯಾಸವನ್ನೇ ಮಾಡುತ್ತಿರುತ್ತಾರೆ. ಕೆಲಸ ಮಾಡಿದರೂ ಸಣ್ಣಪುಟ್ಟ ಸಂಸ್ಥೆಗಳಲ್ಲಿ ಪಾರ್ಟ್ ಟೈಮ್ ಕರ್ತವ್ಯ ನಿರ್ವಹಿಸಿರುತ್ತಾರೆ. ಆದರೆ ಇಲ್ಲೊಬ್ಬ ಅಸಾಮಾನ್ಯ ಪೋರ, 14ನೇ ವಯಸ್ಸಿಗೇ ಇಂಜಿನಿಯರಿಂಗ್ ಪದವಿಯನ್ನು ಮುಗಿಸಿದ್ದು ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಂಸ್ಥೆಯಲ್ಲಿ ಜ್ಯೂ. ಇಂಜಿನಿಯರ್ ಆಗಿ ಆಯ್ಕೆಯಾಗಿದ್ದಾನೆ.

ಈ ಅಸಾಮಾನ್ಯ ಬಾಲಕನ ಹೆಸರು ಕೈರಾನ್ ಕ್ವಾಜಿ. ಈತ  ಸ್ಪೇಸ್‌ ಎಕ್ಸ್ ನಲ್ಲಿ ಸ್ಟಾರ್ಲಿಂಕ್ ತಂಡವನ್ನು ಸೇರಲು ಜುಲೈ ವೇಳೆಗೆ ತನ್ನ ತಾಯಿ ಜುಲಿಯಾರೊಂದಿಗೆ ವಾಷಿಂಗ್ಟನ್ ಗೆ ತೆರಳಲು ತಯಾರಿ ನಡೆಸುತ್ತಿದ್ದಾನೆ. ಮಗುವಿದ್ದಾಗಲೇ ಈತ ಅಸಾಮಾನ್ಯ ಬಾಲಕ. ಆತನ ಬೌದ್ಧಿಕ ಬುದ್ಧಿಮಟ್ಟ ಬೇರೆಲ್ಲಾ ಮಕ್ಕಳಿಗಿಂತ ಹೆಚ್ಚಿತ್ತು. ಈತ ಪ್ರತಿಭಾನ್ವಿತ ಎಂಬ ಹೆಗ್ಗಳಿಕೆಗೆ ಒಳಗಾಗಿದ್ದ.

ಮುಖ್ಯವಾಹಿನಿಯ ಶಿಕ್ಷಣವು ಕ್ವಾಜಿಯ ಅಸಾಧಾರಣ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿಲ್ಲ ಎಂದು ಕ್ವಾಜಿಯ ಪೋಷಕರು ಮತ್ತು ಶಿಕ್ಷಣತಜ್ಞರು ಶೀಘ್ರದಲ್ಲೇ ಅರಿತುಕೊಂಡರು. ಆದ್ದರಿಂದ ಕ್ವಾಜಿ ತನ್ನ 10ನೇ ವಯಸ್ಸಿನಲ್ಲಿ ಲಿವರ್ಮೋನ್ರ ಸಮುದಾಯ ಕಾಲೇಜು ಲಾಸ್ ಪಾಸಿಟಾಸ್ಕೆ ಪ್ರವೇಶಿಸಿದ್ದನು. ಏಕಕಾಲದಲ್ಲಿ ಇಂಟೆಲ್ ಲ್ಯಾಟ್ ನಲ್ಲಿ ಎಐ ಸಂಶೋಧನಾ ಸಹಕಾರಿ ಫೆಲೋ ಆಗಿ ಇಂಟರ್ನ್ಶಿಪ್ ಪಡೆದ.

ಆತ ಅಷ್ಟೇ ವೇಗವಾಗಿ ಸಾಂತಾ ಕ್ಲಾರಾ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡು, ಅಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ಅಧ್ಯಯನಗಳಲ್ಲಿ ಮುಳುಗಿದ್ದ. 14ರ ಪ್ರಾಯಕ್ಕೆ, ಕ್ವಾಜಿ ತನ್ನ ವಿಶ್ವವಿದ್ಯಾಲಯದಲ್ಲಿನ ಶಿಕ್ಷಣವನ್ನು ಪೂರ್ಣಗೊಳಿಸಿದ. ನಂತರ ಇದೀಗ ಸ್ಪೇಸ್ ಎಕ್ಸ್ ಸಂಸ್ಥೆಯಲ್ಲಿ ಜ್ಯೂನಿಯರ್ ಇಂಜಿನಿಯರ್ ಆಗಿ ಆಯ್ಕೆ ಆಗಿದ್ದಾನೆ. 

Ads on article

Advertise in articles 1

advertising articles 2

Advertise under the article

ಸುರ