ಕಟೀಲು ದೇವಸ್ಥಾನದ ಮುಂಭಾಗದಲ್ಲಿ ಖಾಸಗಿ ಬಸ್ ಬೆಂಕಿಗಾಹುತಿ- Video

 



ಮಂಗಳೂರು: ಕಟೀಲು ದೇವಸ್ಥಾನದ ಮುಂಭಾಗ ನಿಲ್ಲಿಸಿದ್ದ ಖಾಸಗಿ ಸಂಸ್ಥೆಯ ಬಸ್ ಬೆಂಕಿಗಾಹುತಿಯಾಗಿದೆ


ಮಂಗಳೂರು ಹೊರವಲಯದ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಇಂದು ಮಧ್ಯಾಹ್ನ ಈ ಘಟನೆ ‌ನಡೆದಿದೆ


ಒಎಂಪಿಎಲ್ ಸಂಸ್ಥೆಗೆ ಸೇರಿದ ಖಾಸಗಿ ಬಸ್ಸು, ಕಟೀಲು ರೂಟ್ ನಲ್ಲಿ ಚಲಿಸುವ ಬಸ್ ಆಗಿದೆ.   ಕಟೀಲಿನಲ್ಲಿ ನೌಕರನ್ನು ಬಿಟ್ಟು ವಾಪಾಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.





ಬಸ್ಸಿನಲ್ಲಿ ಡ್ರೈವರ್ ಸೇರಿ ಮೂರು ಜನ ಇದ್ದರು.  ಬಸ್ಸಿಗೆ ಬೆಂಕಿ ಬಿದ್ದಾಗ ಮೂವರು ಜಿಗಿದು ಅಪಾಯದಿಂದ ಪಾರಾಗಿದ್ದಾರೆ. ಶಾಟ್ ಸರ್ಕಿಟ್ ನಿಂದ ಘಟನೆ ಸಂಭವಿಸಿದ್ದು, ಸಂಪೂರ್ಣ ಬಸ್ ಭಸ್ಮವಾಗಿದೆ. ಸ್ಥಳೀಯವಾಗಿ ನೀರು ಸರಬರಾಜು ಮಾಡುವ  ನೀರಿನ ಟ್ಯಾಂಕರ್ ನಿಂದ ನೀರು ಹಾಯಿಸಿ ಬೆಂಕಿ ನಂದಿಸಲಾಗಿದೆ.