-->
1000938341
ತನ್ನ ದೇಹದ ಭಾಗವನ್ನು ತಾನೂ ತಿಂದು ಗೆಳೆಯನಿಗೂ ತಿನ್ನಿಸಿದ ವಿಚಿತ್ರ ಯುವತಿ

ತನ್ನ ದೇಹದ ಭಾಗವನ್ನು ತಾನೂ ತಿಂದು ಗೆಳೆಯನಿಗೂ ತಿನ್ನಿಸಿದ ವಿಚಿತ್ರ ಯುವತಿ


ಅಮೆರಿಕ: ತಮ್ಮದೇ ದೇಹದ ಯಾರಾದರೂ ತಿನ್ನುತ್ತಾರೆಯೇ?, ಅಥವಾ ಯಾರಿಗಾದರೂ ತಿನ್ನಿಸುತ್ತಾರೆಯೋ?. ಖಂಡಿತಾ ಇದು ಭಯಾನಕ ಅಲ್ಲವೇ?. ಆದರೆ ಪೌಲಾ ಗೋನು ಎಂಬ ಯುವತಿ ತನ್ನ ಮೊಣಕಾಲಿನ ಭಾಗವನ್ನು ಬೇಯಿಸಿ ತಾನೂ ತಿಂದು ಗೆಳೆಯನಿಗೆ ತಿನ್ನಿಸಿ ಸುದ್ದಿಯಾಗಿದ್ದಾಳೆ. ಇದು ವಿಚಿತ್ರವೆನಿಸಿದರೂ ಸತ್ಯ ಘಟನೆಯಾಗಿದೆ.

ಸ್ಪೈನ್‌ ದೇಶದ ನಿವಾಸಿ ಟ್ವಿಚ್ ಸ್ಟೀಮರ್ ಪೌಲಾ ಗೋನು ಇತ್ತೀಚೆಗೆ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಶಸ್ತ್ರಚಿಕಿತ್ಸೆಯ ಕಾಲದಲ್ಲಿ ಆಕೆಯ ಕಾಲಿನ ಭಾಗದ ಮೂಳೆಯ ಸಣ್ಣ ಮಾದರಿಯನ್ನು ಜಾರ್‌ನಲ್ಲಿ ತುಂಬಿಸಿ ಮನೆಗೆ ವೈದ್ಯರು ಆಕೆಗೆ ನೀಡಿದ್ದರು. ಯುವತಿ ಮೊಣಕಾಲಿನ ಭಾಗವನ್ನು ಮನೆಗೆ ತಂದಿದ್ದಾಳೆ. ಆದರೆ ಮನೆಗೆ ಬಂದ ಬಳಿಕ ಆಕೆಗೆ ತನ್ನ ಕಾಲಿನ ಮೂಳೆ ತುಂಡನ್ನು ತಿನ್ನುವ ವಿಚಿತ್ರ ಬಯಕೆಯಾಗಿದೆ. ಈ ಕುರಿತು ತನ್ನ ಗೆಳೆಯನೊಂದಿಗೆ ತಮಾಷೆ ಮಾಡಲು ಪ್ರಾರಂಭಿಸಿದಳು. ಆದರೆ ಒಂದು ದಿನ ತನ್ನ ಕಾಲಿನ ಮೂಳೆಯನ್ನೇ ಪಾಸ್ತಾಕ್ಕೆ ಸೇರಿಸಿ ಒಂದು ಪದಾರ್ಥವನ್ನೇ ತಯಾರಿಸಿ ಸೇವಿಸಿದ್ದಾಳೆ.

“ಅದು ನನ್ನ ದೇಹದ ಭಾಗವಾಗಿತ್ತು. ಆದ್ದರಿಂದ  ನಾನು ಅದನ್ನು ಮತ್ತೆ ನನ್ನ ದೇಹದಲ್ಲಿ ಇಡಬೇಕಾಗಿತ್ತು. ಹಾಗಾಗಿಯೇ ನಾನು ಅದನ್ನು ತಿನ್ನಲು ಬಯಸಿದ್ದೆ. ನಾನು ಮಂಡಿಚಿಪ್ಪನ್ನು ತಿಂದೆ. ನನ್ನ ಗೆಳೆಯನಿಗೆ ಮೂಳೆಯಿಂದ ತಯಾರಿಸಿದ ಇನ್ನೊಂದು ಪದಾರ್ಥವನ್ನು ನೀಡಿದೆ” ಎಂದಿದ್ದಾಳೆ. ಈ ಕುರಿತಾಗಿ ಪೌಲಾ ತನ್ನ ಸಾಮಾಜಿಕ ಜಾಲತಾಣದಲ್ಲಿ ವಿಚಾರ ಹಂಚಿಕೊಂಡಿದ್ದಾಳೆ. ಈಕೆ ತನ್ನ ದೇಹದ ಭಾಗವನ್ನು ತಿಂದಿರುವ ವಿಚಾರ ತಿಳಿಸುತ್ತಿದ್ದಂತೆ ನೆಟ್ಟಿಗರು ಆಕೆಯ ವಿಚಿತ್ರ ವರ್ತನೆ ಕುರಿತಾಗಿ ಕಾಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಚ್ ಸ್ಟೀಮರ್ ಪೌಲಾ ಸಾಮಾಜಿಕ ಜಾಲತಾಣದಲ್ಲಿ 228,000ಕ್ಕೂ ಅಧಿಕ ಫಾಲೊವರ್ಸ್ ಹೊಂದಿದ್ದಾರೆ. 

Ads on article

Advertise in articles 1

advertising articles 2

Advertise under the article