-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ವಿವಾಹವಾದ ಮರುಕ್ಷಣವೇ ವಿಷ ಸೇವಿಸಿ ಸಾಯಲು ಯತ್ನಿಸಿದ ನವವಿವಾಹಿತ ಜೋಡಿ : ವರ ಸಾವು, ಜೀವನ್ಮರಣ ಸ್ಥಿತಿಯಲ್ಲಿ ವಧು

ವಿವಾಹವಾದ ಮರುಕ್ಷಣವೇ ವಿಷ ಸೇವಿಸಿ ಸಾಯಲು ಯತ್ನಿಸಿದ ನವವಿವಾಹಿತ ಜೋಡಿ : ವರ ಸಾವು, ಜೀವನ್ಮರಣ ಸ್ಥಿತಿಯಲ್ಲಿ ವಧು


ಇಂದೋರ್: ವಿವಾಹದಂದೇ ವರ ಹಾಗೂ ವಧುವಿನ ನಡುವೆ ಉಂಟಾದ ವಾಗ್ವಾದದ ಹಿನ್ನೆಲೆಯಲ್ಲಿ ಮನಸ್ತಾಪಗೊಂಡು ಇಬ್ಬರೂ ವಿಷ ಸೇವಿಸಿದ ಪ್ರಸಂಗವೊಂದು ನಡೆದಿದೆ. ದುರದದೃಷ್ಟವಶಾತ್ ಈ ಪ್ರಕರಣದಲ್ಲಿ ವರ ಮೃತಪಟ್ಟಿದ್ದು, ವಧುವಿನ ಸ್ಥಿತಿ ಗಂಭೀರವಾಗಿದೆ. ಪರಿಣಾಮ ಸಂಭ್ರಮದಲ್ಲಿದ್ದ ಎರಡೂ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.

ಕನಾಡಿಯಾ ಪ್ರದೇಶದ ಆರ್ಯ ಸಮಾಜ ದೇವಸ್ಥಾನದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ಆದ್ದರಿಂದ 21ವರ್ಷದ ವರ ವಿಷ ಸೇವಿಸಿದ್ದಾನೆ. ಆ ಬಳಿಕ 20 ವರ್ಷದ ವಧುವಿಗೆ ಈ ವಿಚಾರವನ್ನು ತಿಳಿಸಿದ್ದಾನೆ. ಇದನ್ನು ತಿಳಿದು ಗಾಬರಿಗೊಂಡ ವಧು ತಾನೂ ಕೂಡ ವಿಷ ಸೇವಿಸಿದ್ದಾಳೆ. ಇಬ್ಬರೂ ವಿಷ ಸೇವಿಸಿದ ವಿಚಾರ ತಿಳಿದ ತಕ್ಷಣ ಮನೆಯವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವರ ಮೃತಪಟ್ಟಿದ್ದಾನೆ. ವಧು ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದಾಳೆ. 

ವರನ ಕುಟುಂಬದ ಸದಸ್ಯರು ಮಾತ್ರ ಕಳೆದ ಹಲವು ದಿನಗಳಿಂದ ಯುವತಿ ತನ್ನನ್ನು ಮದುವೆಯಾಗುವಂತೆ ಯುವಕನ ಮೇಲೆ ಒತ್ತಡ ಹೇರುತ್ತಿದ್ದಳು. ಆದರೆ ಯುವಕ ಮಾತ್ರ ತನ್ನ ವೃತ್ತಿಜೀವನದ ಅಭಿವೃದ್ಧಿಗಾಗಿ ಎರಡು ವರ್ಷಗಳ ಕಾಲಾವಕಾಶ ಕೋರಿದ್ದ. ಈ ಸಂದರ್ಭ ಯುವತಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು ಎಂದಿದ್ದಾರೆ. 


Ads on article

Advertise in articles 1

advertising articles 2

Advertise under the article

ಸುರ