ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಕುನೋ ರಾಷ್ಟ್ರೀಯ ಉದ್ಯಾನವನದ ಚೀತಾ ಟ್ರ್ಯಾಕಿಂಗ್ ತಂಡದ ಮೇಲೆ ಗ್ರಾಮಸ್ಥರಿಂದ ಹಲ್ಲೆ


ಭೋಪಾಲ್: ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದ ಚೀತಾ ಟ್ರ್ಯಾಕಿಂಗ್ ತಂಡವನ್ನು ಡಕಾಯಿತರೆಂದು ತಪ್ಪಾಗಿ ಭಾವಿಸಿ ಮೇಲೆ ಶುಕ್ರವಾರ ಬೆಳಗ್ಗೆ ಗ್ರಾಮಸ್ಥರ ಗುಂಪೊಂದು ದಾಳಿ ಮಾಡಿದೆ. ಈ ದಾಳಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗಾಯಗೊಂಡಿದ್ದಾರೆ.

ಪೋಹಾರಿ ಪ್ರದೇಶದ ಬುರಖೇಡಾ ಗ್ರಾಮದ ಬಳಿ ನಾಲ್ವರು ಸದಸ್ಯರಿದ್ದ ಟ್ರ್ಯಾಕಿಂಗ್ ತಂಡವು ಸಂರಕ್ಷಿತ ಪ್ರದೇಶದಿಂದ ಹೊರಬಂದಿರುವ ಆಶಾ ಎಂಬ ಹೆಣ್ಣು ಚೀತಾವನ್ನು ಪತ್ತೆಹಚ್ಚಲು ಅರಣ್ಯ ಪ್ರದೇಶಕ್ಕೆ ಬಂದಿತ್ತು. ಆದರೆ ಬೆಳಗ್ಗಿನ ಜಾವ 4ಗಂಟೆ ಸುಮಾರಿಗೆ ತಂಡವು ಆ ಪ್ರದೇಶದಲ್ಲಿ ಇರುವುದನ್ನು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ತಾವು ಚೀತಾ ಜಾಡು ಹಿಡಿಲು ಬಂದಿರುವ ಅರಣ್ಯ ಇಲಾಖೆ ಸಿಬ್ಬಂದಿ ಎಂದು ವಿವರಿಸಿದರೂ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ ಎಂದು ವರದಿ ಮಾಡಿದೆ.

ಘಟನೆಯಲ್ಲಿ ಅರಣ್ಯ ಸಿಬ್ಬಂದಿ ಪವನ್ ಅಗರ್ವಾಲ್ ಗಾಯಗೊಂಡಿದ್ದಾರೆ. ದಾಳಿಯಲ್ಲಿ ಅರಣ್ಯ ಇಲಾಖೆಯ ವಾಹನಕ್ಕೂ ಹಾನಿಯಾಗಿದೆ. ದಾಳಿಯ ಬಳಿಕ, ಅರಣ್ಯ ಇಲಾಖೆಯ ಸಿಬ್ಬಂದಿ ಕುನೋ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಎರಡನೇ ತಂಡವನ್ನು ಕಳುಹಿಸಲಾಯಿತು ಎಂದು ವರದಿಯಾಗಿದೆ.

ಕುನೋ ರಾಷ್ಟ್ರೀಯ ಉದ್ಯಾನವನದ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಪ್ರಕಾಶ್ ಕುಮಾರ್ ವರ್ಮಾ ಈ ಬಗ್ಗೆ ಪ್ರತಿಕ್ರಿಯಿಸಿ, ಚೀತಾ ಟ್ರ್ಯಾಕಿಂಗ್ ತಂಡವನ್ನು ಗ್ರಾಮಸ್ಥರು ತಡೆದು ಹಲ್ಲೆ ಮಾಡಿದ್ದಾರೆ. ಒಬ್ಬ ಅರಣ್ಯ ಇಲಾಖೆಯ ಸಿಬ್ಬಂದಿ ಗಾಯಗೊಂಡಿದ್ದಾರೆ. ನಾವು ಪೊಹಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.