-->
1000938341
ದೆಹಲಿ ಮೆಟ್ರೋ ರೈಲಿನಲ್ಲಿ ಕನಿಷ್ಠ ಉಡುಗೆಯಲ್ಲಿ ಕಾಣಿಸಿಕೊಂಡ ಯುವತಿಯ ಗುರುತು ಪತ್ತೆ

ದೆಹಲಿ ಮೆಟ್ರೋ ರೈಲಿನಲ್ಲಿ ಕನಿಷ್ಠ ಉಡುಗೆಯಲ್ಲಿ ಕಾಣಿಸಿಕೊಂಡ ಯುವತಿಯ ಗುರುತು ಪತ್ತೆನವದೆಹಲಿ: ಮಿನಿ ಸ್ಕರ್ಟ್ ಹಾಗೂ ಬ್ರಾ ತೊಟ್ಟು ಕನಿಷ್ಠ ಉಡುಗೆಯಲ್ಲಿ ದೆಹಲಿ ಮೆಟ್ರೋ ರೈಲಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದ ಅಪರಿಚಿತ ಯುವತಿಯ ಗುರುತು ಪತ್ತೆಯಾಗಿದೆ.

ಈಕೆಯ ವೀಡಿಯೋವನ್ನು ಮೆಟ್ರೋ ಪ್ರಯಾಣಿಕರು ತೆಗೆದಿದ್ದರು. ಈ ವೀಡಿಯೋ ನಿನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿದ್ದ ಯುವತಿ ಬಾಲಿವುಡ್ ನ ಬಿಚ್ಚಮ್ಮ ಉರ್ಫಿ ಜಾವೇದ್ ರೀತಿ ವಿಭಿನ್ನವಾಗಿ ಅರೆಬೆತ್ತಲೆ ಉಡುಗೆ ತೊಟ್ಟಿದ್ದಳು. ಬಿಳಿ ಬಣ್ಣದ ಸ್ಕರ್ಟ್ ಹಾಗೂ ಬ್ರಾ ಧರಿಸಿ ಜನನಿಬಿಡ ಮೆಟ್ರೋ ಈಕೆ ರೈಲಿನಲ್ಲಿ ಕಾಣಿಸಿಕೊಂಡಿದ್ದಳು. ಆ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸಾಕಷ್ಟು ಮಂದಿ ಯಾರು ಆ ಯುವತಿ ಎಂಬ ಪ್ರಶ್ನೆ ಕೇಳಿದ್ದರು.

ಇದೀಗ ಆಕೆ ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಆ ಯುವತಿಯ ಹೆಸರು ರಿಧಮ್ ಚಾನನ. ಈಕೆ @prettypastry11112222 ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆ ಹೊಂದಿದ್ದಾಳೆ. ಪಂಜಾಬ್‌ನ ಫತೇಹಗಢ ಸಾಹೀಬ್ ನಗರದ ನಿವಾಸಿಯಾಗಿರುವ ಈ ಯುವತಿ ಸಾಂಪ್ರದಾಯಿಕ ಕುಟುಂಬದಿಂದ ಬಂದವಳಾಗಿದ್ದರು. ಅವಳ ಮುಕ್ತ ದೃಷ್ಟಿಕೋನದಿಂದಾಗಿ, ಅವಳು ಕುಟುಂಬದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಿಲ್ಲ. ದೆಹಲಿ ಮೆಟ್ರೋದಲ್ಲಿ ರಿಧಮ್ ಧರಿಸಿದ್ದ ಬಟ್ಟೆಗಳ ಮಾದರಿಯಲ್ಲೇ ಆಕೆಯ ಇನ್‌ಸ್ಟಾಗ್ರಾಮ್ ಪೋಸ್ಟ್ ಗಳಲ್ಲಿಯೂ ಅದೇ ಮಾದರಿಯ ಉಡುಗೆಗಳು ತೊಟ್ಟಿರುವ ಫೋಟೋಗಳು ಅಪ್ಲೋಡ್ ಆಗಿವೆ. ಫ್ಯಾಶನ್ ಕಳೆಗುಂದಬಹುದು ಆದರೆ, ಸ್ಟೈಲ್ ಮಾತ್ರ ಎಂದಿಗೂ ಉಳಿಯುತ್ತದೆ ಎಂದು ಅಡಿಬರಹ ಬರೆದುಕೊಂಡಿದ್ದಾಳೆ.

ರಿಧಮ್ ಇನ್‌ಸ್ಟಾಗ್ರಾಂ ತುಂಬೆಲ್ಲ ಆಕೆಯ ಅರೆಬೆತ್ತಲೆ ಫೋಟೋಗಳೇ ತುಂಬಿವೆ. ನಾನು ಉರ್ಫಿ ಜಾವೇದ್‌ನಿಂದ ಪ್ರಭಾವಿತಳಾಗಿಲ್ಲ. ಆದರೆ ನನ್ನ ಸ್ವಂತ ಆಯ್ಕೆಯ ಬಟ್ಟೆಗಳನ್ನು ಧರಿಸುತ್ತೇನೆ. ಸದ್ಯ ರಿಧಮ್ ಪ್ರಸ್ತುತ ನಟನಾ ಶಾಲೆಯಲ್ಲಿ ಆ್ಯಕ್ಟಿಂಗ್ ಕೋರ್ಸ್ ಮಾಡುತ್ತಿದ್ದಾಳೆ. ಮಾಡೆಲ್ ಆಗುವ ಹಾದಿಯಲ್ಲಿದ್ದಾಳೆ. ದೆಹಲಿಯ ಪಿಂಕ್ ಲೈನ್ ಮೆಟ್ರೊ ಹೊರತುಪಡಿಸಿ ಎಲ್ಲಿಯೂ ತನ್ನ ಬಟ್ಟೆಯಿಂದ ಯಾವುದೇ ಸಮಸ್ಯೆ ಎದುರಿಸಲಿಲ್ಲ ಎಂದು ಹೇಳಿದ್ದಾಳೆ.

ರಿಧಮ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಈ ವಿಷಯದ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿದೆ. ಡಿಎಂಆರ್‌ಸಿ ತನ್ನ ಪ್ರಯಾಣಿಕರು ಸಮಾಜದಲ್ಲಿ ಸ್ವೀಕಾರಾರ್ಹವಾದ ಎಲ್ಲ ಸಾಮಾಜಿಕ ಶಿಷ್ಟಾಚಾರ ಮತ್ತು ನೀತಿಸಂಹಿತೆಯನ್ನು ಅನುಸರಿಸಬೇಕೆಂದು ನಿರೀಕ್ಷಿಸುತ್ತದೆ. ಪ್ರಯಾಣಿಕರು ಯಾವುದೇ ಅಸಭ್ಯ ಚಟುವಟಿಕೆಯಲ್ಲಿ ತೊಡಗಬಾರದು ಅಥವಾ ಇತರ ಸಹ ಪ್ರಯಾಣಿಕರ ಸಂವೇದನೆಗೆ ಧಕ್ಕೆ ತರುವಂತಹ ಯಾವುದೇ ಉಡುಗೆಯನ್ನು ಧರಿಸಬಾರದು. ಮೆಟ್ರೋದಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಸುವಾಗ ಸಭ್ಯತೆಯಿಂದ ನಡೆದುಕೊಳ್ಳಲು ಎಲ್ಲ ಪ್ರಯಾಣಿಕರಿಗೆ ನಾವು ಮನವಿ ಮಾಡುತ್ತೇವೆ ಎಂದಿದೆ.

Ads on article

Advertise in articles 1

advertising articles 2

Advertise under the article