ತರಗತಿ ಕೊಠಡಿಯಲ್ಲೇ ಗರ್ಭಪಾತ ಮಾಡಿಕೊಂಡ ಬಿಟೆಕ್ ವಿದ್ಯಾರ್ಥಿನಿ ವಿಪರೀತ ರಕ್ತಸ್ರಾವದಿಂದ ಮೃತ್ಯು

ಹೈದರಾಬಾದ್: ಬಿಟೆಕ್ ವಿದ್ಯಾರ್ಥಿನಿಯೋರ್ವಳು ಕಾಲೇಜು ಕೊಠಡಿಯಲ್ಲಿಯೇ ಗರ್ಭಪಾತ ಮಾಡಿಸಿಕೊಂಡು ವಿಪರೀತ ರಕ್ತಸ್ರಾವದಿಂದ ಮೃತಪಟ್ಟ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.

ನೆಲ್ಲೂರು ಜಿಲ್ಲೆಯ ಮರಿಪಾಡು ಮಂಡಲದ 19ರ ಯುವತಿ ನೆಲ್ಲೂರು ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಟೆಕ್ ವ್ಯಾಸಂಗ ಮಾಡುತ್ತಿದ್ದಳು. ಎ.11ರಂದು ಇತರ ವಿದ್ಯಾರ್ಥಿಗಳು ತರಗತಿಯಿಂದ ಹೊರಗೆ ಹೋಗಿದ್ದರು. ಈ ವೇಳೆ ವಿದ್ಯಾರ್ಥಿನಿ ತರಗತಿಯ ಒಳಗೆ ಹೋಗಿ ಬಾಗಿಲು ಲಾಕ್ ಮಾಡಿಕೊಂಡಿದ್ದಳು. ಎಷ್ಟು ಹೊತ್ತಾದರೂ ಈಕೆಯ ಪತ್ತೆಯಿರದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಹುಡುಕಾಡಿದ್ದು ಕ್ಲಾಸ್ ರೂಂನಲ್ಲಿ ಬಾಗಿಲು ಹಾಕಿಕೊಂಡಿರುವುದು ಪತ್ತೆಯಾಗಿದೆ. ಬಳಿಕ ಬಾಗಿಲು ಒಡೆದು ನೋಡಿದಾಗ ಕ್ಲಾಸ್ ರೂಮಿನಲ್ಲಿ ಯುವತಿ ಭಾರೀ ರಕ್ತಸ್ರಾವಗೊಂಡು ಬಿದ್ದಿದ್ದಳು.

ಪಕ್ಕದಲ್ಲೇ ಭ್ರೂಣವೂ‌ ಬಿದ್ದಿದ್ದು, ಆಕೆಯ ಹೆತ್ತವರಿಗೆ ಮಾಹಿತಿ ನೀಡಲಾಗಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಿ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ನೆಲ್ಲೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿದ್ದಾರೆ. ಬಾಲಕಿ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಆಕೆಗೆ ನಿಜಕ್ಕೂ ಗರ್ಭಪಾತವಾಗಿತ್ತಾ ಯೂಟ್ಯೂಬ್ ನೋಡಿ ಗರ್ಭಪಾತಕ್ಕೆ ಯತ್ನಿಸಿದ್ದಳೇ ಎಂಬ ಬಗ್ಗೆ, ಆಕೆ ಗರ್ಭ ಧರಿಸಲು ಕಾರಣ ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu