ಸಹಕಾರ ಇಲಾಖೆಯಲ್ಲಿ 100 ಹುದ್ದೆಗಳು: ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನಗಳು ಬಾಕಿ!

ಸಹಕಾರ ಇಲಾಖೆಯಲ್ಲಿ 100 ಹುದ್ದೆಗಳು: ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನಗಳು ಬಾಕಿ!





ಕರ್ನಾಟಕ ಲೋಕಸೇವಾ ಆಯೋಗ (KPSC)ವು ಕರ್ನಾಟಕ ಸಹಕಾರ ಇಲಾಖೆಯಲ್ಲಿ ಖಾಲಿ ಇರುವ 100 ಸಹಕಾರ ಸಂಘಗಳ ನಿರೀಕ್ಷಕರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.



ಅರ್ಜಿ ಸಲ್ಲಿಸಲು ಎಪ್ರಿಲ್ 30, 2023ರಂದು ಕೊನೆ ದಿನವಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು.



ವಯೋಮಿತಿ: ಕನಿಷ್ಟ '18' ವರ್ಷ ಹಾಗೂ ಗರಿಷ್ಟ '35' ವರ್ಷ ವಯಸ್ಸಾಗಿರಬೇಕು. ವಯೋಮಿತಿಯಲ್ಲಿ ಸಡಿಲಿಕೆ ಇದೆ.



ವಿದ್ಯಾರ್ಹತೆ: ಬಿಎಸ್‌ಸಿ ಕೃಷಿ, ಮಾರ್ಕೆಟಿಂಗ್, ಬಿಎಸ್‌ಸಿ ಕೋಅಪರೇಟಿವ್, ಬಿಕಾಂ, ಬಿಬಿಎ, 

ಬಿಬಿಎಂ ಈ ಪದವಿಗಳಲ್ಲಿ ಯಾವುದಾದರೂ ಒಂದು ಬೇಸಿಕ್ ವಿದ್ಯಾರ್ಹತೆಯಾಗಿ ಹೊಂದಿರಬೇಕು.



ವೇತನ: ಗರಿಷ್ಠ 52000/- ಇದರಲ್ಲಿ ಸರ್ಕಾರ ಕಾಲ ಕಾಲಕ್ಕೆ ನೀಡುವ ಭತ್ಯೆ ಇತ್ಯಾದಿಗಳು ಸೇರಿವೆ.

ಆಯ್ಕೆಯನ್ನು ನೇರ ನೇಮಕಾತಿ ಮೂಲಕ ಮಾಡಿಕೊಳ್ಳಲಾಗುತ್ತದೆ. ಯಾವುದೇ ಸಂದರ್ಶನ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಠ್ಯಕ್ರಮ ಆಧರಿಸಿ ಪ್ರಶ್ನೆ ಪತ್ರಿಕೆ ಸಿದ್ದಮಾಡಲಾಗುತ್ತದೆ.