BJP ಪಕ್ಷ ನನ್ನನ್ನು ನಡೆಸಿಕೊಂಡ ರೀತಿ ಸರಿ ಇಲ್ಲ- ಕಣ್ಣೀರು ಹಾಕಿದ ರಘುಪತಿ ಭಟ್
Wednesday, April 12, 2023
ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತರಾದ ಶಾಸಕ ರಘುಪತಿ ಭಟ್ ಬಿಜೆಪಿ ಪಕ್ಷವು ನಡೆಸಿಕೊಂಡ ರೀತಿ ಸರಿ ಇರಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಬಿಜೆಪಿ ಪಕ್ಷವು ಉಡುಪಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಬಳಿಕ ಮಾತನಾಡಿದ ರಘುಪತಿ ಭಟ್ " ನಾನು ಯಾವುದೇ ನಿರ್ಧಾರವನ್ನು ಇನ್ನೂ ಮಾಡಿಲ್ಲ. ಪಕ್ಷದ ನಿರ್ಧಾರದ ಬಗ್ಗೆ ಬೇಸರ ಇಲ್ಲ. ನಾವೆ ಬೆಳೆಸಿದ ಹುಡುಗನನ್ನು ಅಭ್ಯರ್ಥಿ ಮಾಡಿದ್ದಾರೆ. ಆದರೆ ಪಕ್ಷ ನನ್ನನ್ನು ನಡೆಸಿಕೊಂಡ ರೀತಿಯ ಬಗ್ಗೆ ಬೇಸರ ಇದೆ. ಮೊದಲೇ ಹೇಳಿದ್ದರೆ ಈಶ್ವರಪ್ಪ ಅವರ ರೀತಿಯಲ್ಲಿ ನಿವೃತ್ತಿ ತೆಗೆಯುತ್ತಿದ್ದೆ. ನನಗೆ ಕೊನೆಕ್ಷಣದವರೆಗೂ ಎರಡು ಬ್ರಾಹ್ಮಣರಾದರೂ ಕೊಡುತ್ತೇವೆ ಎಂದು ಎಲ್ಲಾ ನಾಯಕರು ಹೇಳಿದರು. ನಾನು ಲಾಬಿ ಮಾಡಿಕೊಂಡು ಹೋಗಿಲ್ಲ. ಜಿಲ್ಲೆಯಲ್ಲಿ ಪಕ್ಷವನ್ನು ಪ್ರಾಮಾಣಿಕವಾಗಿ ಕಟ್ಟಿದ್ದೇನೆ ಎಂದು ತಿಳಿಸಿದ್ದಾರೆ.