ಭೀಕರ ಅಪಘಾತಕ್ಕೆ ದಂಪತಿ ಬಲಿ: ಮಕ್ಕಳಿಬ್ಬರ ಸ್ಥಿತಿ ಗಂಭೀರ


ಚಿಕ್ಕಮಗಳೂರು: ಭೀಕರ ರಸ್ತೆ ಅಪಘಾತದಿಂದ ಪತಿ-ಪತ್ನಿ ಇಬ್ಬರೂ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟು, ಮಕ್ಕಳಿಬ್ಬರ ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಭವಿಸಿದೆ.

ಶ್ರೀನಿವಾಸ್ ಹಾಗೂ ಶ್ವೇತಾ ದಂಪತಿ ಮೃತಪಟ್ಟ ದುರ್ದೈವಿಗಳು.

ಶ್ರೀನಿವಾಸ್ ಹಾಗೂ ಶ್ವೇತಾ ದಂಪತಿ ಕಾರಿನಲ್ಲಿ ಮಕ್ಕಳೊಂದಿಗೆ ಕುಟುಂಬಸ್ಥರ ವಿವಾಹ ನಿಶ್ಚಿತಾರ್ಥಕ್ಕೆಂದು ಬೆಂಗಳೂರಿನಿಂದ ಭದ್ರಾವತಿಗೆ ತೆರಳುತ್ತಿದ್ದರು. ಈ ಸಂದರ್ಭ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ತರೀಕೆರೆ ತಾಲೂಕಿನ ಬೆಟ್ಟದ ತಾವರೆ ಗ್ರಾಮದ ಬಳಿ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. 

ಪರಿಣಾಮ ಈ ಭೀಕರ ಅಪಘಾತದಿಂದ ಕಾರಿನಲ್ಲಿದ್ದ ದಂಪತಿ ಶ್ರೀನಿವಾಸ್-ಶ್ವೇತಾ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮಕ್ಕಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತರೀಕೆರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.


BREAKING NEWS
Loading latest news...
Join our WhatsApp Channel Powered By : Online Pudu