ಪತಿಯ ಸೋದರಿಯನ್ನೇ ಆತನ ಎರಡನೇ ಹೆಂಡತಿಯೆಂದು ನ್ಯಾಯಾಲಯಕ್ಕೆ ವಂಚನೆ: ಪತ್ನಿ ವಿಚ್ಛೇದನಕ್ಕಾಗಿ ಎಷ್ಟೆಲ್ಲ ನಾಟಕ!





ಗ್ವಾಲಿಯರ್: ಮಧ್ಯಪ್ರದೇಶದಲ್ಲಿ ನ್ಯಾಯಾಲಯವನ್ನೇ ವಂಚಿಸಿ ವಿಚ್ಛೇದನ ಪಡೆದ ಪ್ರಕರಣವೊಂದು ಭಾರೀ ಸುದ್ದಿಯಲ್ಲಿದೆ. ಮಹಿಳೆಯೊಬ್ಬಳು ತನ್ನ ಪತಿಯಿಂದ ವಿಚ್ಛೇದನ ಪಡೆಯಲು ಆತನಿಗೆ ಎರಡನೇ ಮದುವೆಯಾಗಿದೆ ಎಂದು ಸುಳ್ಳು ಹೇಳಿದ್ದಳು. ಅದಕ್ಕೆ ಕೋರ್ಟ್ ಸಾಕ್ಷಿ ಕೇಳಿದಾಗ ಪತಿಯ ಸೋದರಿಯನ್ನೇ ಆತನ 2ನೇ ಹೆಂಡತಿ ಎಂದು ಸುಳ್ಳು ಹೇಳಿದ್ದಳು.

2021ರಲ್ಲಿ ಮಹಿಳೆ ತನ್ನ ಪತಿಯು ಮರುಮದುವೆ ಆಗಿದ್ದಾರೆ ಎಂದು ಹೇಳಿಕೊಂಡು ಆಕೆ ವಿವಾಹ ವಿಚ್ಛೇದನ ಕೋರಿದ್ದಳು. ಇದಕ್ಕೆ ಸಾಕ್ಷಿಯಾಗಿ ಆಕೆ ಪತಿಯ ಸಹೋದರಿ ಮತ್ತು ಇತರ ಸಂಬಂಧಿಕರೊಂದಿಗೆ ನಿಂತಿರುವ ಕುಟುಂಬದ ಫೋಟೋವನ್ನು ನೀಡಿದ್ದರು. ಅದರಲ್ಲಿ ಆಕೆಯ ಪತಿಯ ಪಕ್ಕದಲ್ಲಿ ನಿಂತಿದ್ದ ಆತನ ತಂಗಿಯನ್ನೇ ಆತನ ಎರಡನೇ ಹೆಂಡತಿ ಎಂದು ಕೋರ್ಟ್​ಗೆ ನಂಬಿಸಿ ಸಾಕ್ಷಿ ನೀಡಿದ್ದಳು. ಈ ವಿಷಯ ಭಾರೀ ವಿವಾದಕ್ಕೆ ಕಾರಣವಾಗಿದೆ.

ಎಪ್ರಿಲ್ ಮೊದಲ ವಾರದಲ್ಲಿ ಪತಿಗೆ ವಿಚ್ಛೇದನದ ಆದೇಶದ ಬಗ್ಗೆ ತಿಳಿದಾಗ ಈ ವಿಷಯ ಬೆಳಕಿಗೆ ಬಂದಿತು. ನ್ಯಾಯಾಲಯದ ದಾಖಲೆಗಳನ್ನು ಪರಿಶೀಲಿಸಿದ ನಂತರ ಆಕೆ ತಪ್ಪು ಸಾಕ್ಷಿ ನೀಡಿ, ವಂಚನೆ ಮಾಡಿದ್ದು ಗೊತ್ತಾಯಿತು. ಅವರು ಈಗ ಗ್ವಾಲಿಯರ್ ಹೈಕೋರ್ಟ್‌ನಲ್ಲಿ ಈ ವಿಚ್ಛೇದನದ ತೀರ್ಪನ್ನು ಪ್ರಶ್ನಿಸಿದ್ದಾರೆ. ನ್ಯಾಯಾಲಯವನ್ನು ದಾರಿ ತಪ್ಪಿಸುವ ಮೂಲಕ ತಮ್ಮ ಪತ್ನಿ ಮೋಸದಿಂದ ತೀರ್ಪು ಪಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಲಿದೆ.

ಜಗಳದಿಂದಾಗಿ 2015 ರಿಂದಲೇ ಆ ಮಹಿಳೆ ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದಳು. ದೀರ್ಘಕಾಲದ ಬೇರ್ಪಡುವಿಕೆಯ ಹೊರತಾಗಿಯೂ ಪತಿಗೆ ವಿಚ್ಛೇದನಕ್ಕೆ ಒಪ್ಪಿಗೆ ನೀಡಲು ಇಷ್ಟವಿರಲಿಲ್ಲ. ಆದರೆ ಹೆಂಡತಿ ಮದುವೆಯನ್ನು ವಿಚ್ಛೇದನ ಪಡೆಯಲು ದೃಢನಿಶ್ಚಯದಲ್ಲಿದ್ದಳು. ಹೀಗಾಗಿ, ಸುಳ್ಳು ಸಾಕ್ಷಿ ನೀಡಿ ವಿಚ್ಛೇದನ ಪಡೆಯಲು ನಿರ್ಧರಿಸಿದಳು. ಅದಕ್ಕಾಗಿ 2021 ಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಳು.

BREAKING NEWS
Loading latest news...
Join our WhatsApp Channel Powered By : Online Pudu