-->
ಆನ್ಲೈನ್ ಗೇಮಿಂಗ್ ಆ್ಯಪ್ ನಲ್ಲಿ 49 ರೂ. ಕಟ್ಟಿ 1.50ಕೋಟಿ ರೂ. ಗೆದ್ದ ಐಪಿಎಲ್ ಅಭಿಮಾನಿ

ಆನ್ಲೈನ್ ಗೇಮಿಂಗ್ ಆ್ಯಪ್ ನಲ್ಲಿ 49 ರೂ. ಕಟ್ಟಿ 1.50ಕೋಟಿ ರೂ. ಗೆದ್ದ ಐಪಿಎಲ್ ಅಭಿಮಾನಿ


ಭೋಪಾಲ್: ಐಪಿಎಲ್‌ ಆರಂಭಗೊಂಡಿದ್ದು, ಈ ವೇಳೆ ಕೆಲ ಕ್ರೀಡಾಭಿಮಾನಿಗಳು ಆನ್ಲೈನ್‌ ಗೇಮಿಂಗ್‌ ಆ್ಯಪ್ ನಲ್ಲಿ ತಮ್ಮದೇ ತಂಡವನ್ನು ರಚಿಸಿ ಹಣ ಗೆಲ್ಲುವ ಉತ್ಸಾಹದಲ್ಲಿರುತ್ತಾರೆ. ಇಂಥದ್ದೇ ಕ್ರೀಡಾಭಿಮಾನಿಯೊಬ್ಬನು 1.50 ಕೋಟಿ ರೂಪಾಯಿ ಗೆದ್ದಿರುವ ಘಟನೆ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ನಡೆದಿದೆ.

ವೃತ್ತಿಯಲ್ಲಿ ಚಾಲಕನಾಗಿರುವ ಶಹಾಬುದ್ದೀನ್ ಮನ್ಸೂರಿ ಆನ್ಲೈನ್ ಗೇಮ್ ನಲ್ಲಿ 1.50ಕೋಟಿ ರೂ. ಗೆದ್ದವನು. ಈತ ಕಳೆದ ಎರಡು ವರ್ಷಗಳಿಂದ ಆನ್ಲೈನ್‌ ಗೇಮಿಂಗ್‌ ಆ್ಯಪ್ ನಲ್ಲಿ ಟೀಮ್‌ ಮಾಡಿ ಅದೃಷ್ಟವನ್ನು ಪರೀಕ್ಷೆ ಮಾಡಿಸುತ್ತಲೇ ಇದ್ದರು. ರವಿವಾರ ಐಪಿಎಲ್‌ ನಲ್ಲಿ ನಡೆದ ಕೆಕೆಆರ್‌ ಹಾಗೂ ಪಂಜಾಬ್‌ ನಡುವಿನ ಪಂದ್ಯಕ್ಕೆ ತಮ್ಮ ಕನಸಿನ ತಂಡ ರಚಿಸಿ 49 ರೂ.ಯನ್ನು ಕಟ್ಟಿದ್ದಾರೆ.

ಕೋಟಿ ಗೆಲ್ಲುವ ವಿಭಾಗದಲ್ಲಿ ತಂಡವನ್ನು ಕಟ್ಟಿದ ಶಹಾಬುದ್ದೀನ್ ಮನ್ಸೂರಿ ಪಂದ್ಯ ಮುಗಿದ ಶಹಾಬುದ್ದೀನ್ ಮನ್ಸೂರಿ 1.50 ಕೋಟಿ ರೂ.ವನ್ನು ಗೆಲ್ಲುವ ಮೂಲಕ ಅವರ ಜೀವನವೇ ಬದಲಾಗಿದೆ. ಸದ್ಯ ಶಹಾಬುದ್ದೀನ್ ತನ್ನ ಆ್ಯಪ್ ವ್ಯಾಲೆಟ್‌ನಿಂದ 20 ಲಕ್ಷ ರೂ. ವಿತ್ ಡ್ರಾ ಮಾಡಿಕೊಂಡಿದ್ದಾರೆ. ವಿಜೇತ ಮೊತ್ತದ 1.5 ಕೋಟಿ ರೂ.ನಲ್ಲಿ ಒಟ್ಟು ರೂ.6 ಲಕ್ಷ ತೆರಿಗೆಯಾಗಿ ಕಡಿತವಾಗಿದೆ.

ಶಹಾಬುದ್ದೀನ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಗೆದ್ದ ಹಣದಲ್ಲಿ ಸ್ವಂತ ಮನೆಯೊಂದನ್ನು ಕಟ್ಟಿ, ತಾವೇ ಒಂದು ವ್ಯಾಪಾರವನ್ನು ಆರಂಭಿಸುತ್ತಾರೆಂದು ಹೇಳಿಕೊಂಡಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article