-->
1000938341
ಮೇ 26ರಂದು "ಪಿರ್ಕಿಲು" ತುಳು ಸಿನಿಮಾ ತೆರೆಗೆ

ಮೇ 26ರಂದು "ಪಿರ್ಕಿಲು" ತುಳು ಸಿನಿಮಾ ತೆರೆಗೆ

ಮಂಗಳೂರು: "ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಸತೀಶ್ ಪೆರ್ನೆ, ಶಿವಪ್ರಸಾದ್
ಇಜ್ಞಾವು ನಿರ್ಮಾಣದಲ್ಲಿ ಹೆಚ್.ಡಿ ಆರ್ಯ ನಿರ್ದೇಶನದಲ್ಲಿ ತಯಾರಾದ ಪಿರ್ಕಿಲು ತುಳು ಸಿನಿಮಾ ಮೇ 26 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ" ಎಂದು ತುಳು ರಂಗಭೂಮಿಯ ಹಿರಿಯ ನಟ ಭೋಜರಾಜ್ ವಾಮಂಜೂರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

"ಪಿರ್ಕಿಲು ಸಿನಿಮಾಕ್ಕೆ ಮೂರು ಹಂತದಲ್ಲಿ ಸುಳ್ಯ, ಪುತ್ತೂರು, ಮಂಗಳೂರು, ಕುರಿಯ, ಉಪ್ಪಿನಂಗಡಿಯಲ್ಲಿ 29 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು ಸಿನಿಮಾಕ್ಕೆ U/A ಸರ್ಟಿಫಿಕೇಟ್ ದೊರೆತಿದೆ. ಪಿರ್ಕಿಲು ತುಳು ಸಿನಿಮಾ ಹಾಸ್ಯ ಮತ್ತು ಕೌಟುಂಬಿಕ ಮನರಂಜನೆಯ ಚಿತ್ರ. ಎಲ್ಲಾ ವರ್ಗದ ಜನರು ಇಷ್ಟ ಪಡುವ ಕತೆಯನ್ನು ಹಾಸ್ಯಭರಿತವಾಗಿ ಹೆಣೆಯಲಾಗಿದೆ. ನಿರ್ದೇಶಕ ಹೆಚ್.ಡಿ. ಆರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ ಎಂದರು.
ಬಬಿತ ತುಳು ಸಂಭಾಷಣೆ ತರ್ಜುಮೆಯನ್ನು
ಮಾಡಿದ್ದಾರೆ. ತಾರಾ ಬಳಗದಲ್ಲಿ ಖ್ಯಾತ ನಾಮರಾದ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ನವರಸ ರಾಜ ಬೋಜರಾಜ ವಾಮಂಜೂರು,  ದೀಪಕ್ ರೈ ಪಾಣಾಜೆ, ರವಿ ರಾಮಕುಂಜ ಪ್ರಮುಖ ಪಾತ್ರದಲ್ಲಿದ್ದಾರೆ. ನಾಯಕ ನಟರಾಗಿ ವರ್ಧನ್ ಮತ್ತು ಸುದೇಶ್, ನಾಯಕಿಯಾಗಿ ಸಲೋಮಿ ಡಿ.ಸೋಜ, ಲತಾ ಅಭಿನಯಿಸಿದ್ದಾರೆ" ಎಂದರು.


ತಾರಾಗಣದಲ್ಲಿ ಸುಮಿತ್ರ ರೈ,
ಅಮಿತ, ನವೀನ್ ಬೋಂದೇಲ್, ಅರ್ಪಣ್, ಅನಿಲ್ ರೈ, ರಂಜಿತ್ ರೈ, ತಿಮ್ಮಪ್ಪ ಕುಲಾಲ್,
ಪ್ರಭಾಕರ ಶೆಟ್ಟಿ, ಮೊಹನ್, ಸೋನಿ ಮೊದಲಾದವರಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರಾದ ಶಿವಪ್ರಸಾದ್ ಇಜ್ಜಾವು, ಸತೀಶ್ ಪೆರ್ನೆ, ನಿರ್ದೇಶಕ ಹೆಚ್.ಡಿ. ಆರ್ಯ, ಧನು ರೈ, ಭೋಜರಾಜ್ ವಾಮಂಜೂರ್, ಲತಾ ಎಸ್. ಗೌಡ ಮತ್ತಿತರರು ಉಪಸ್ಥಿತರಿದ್ದರು.

ತಂತ್ರಜ್ಞರು
ವಸ್ತ್ರಾಲಂಕಾರ -ಲತಾ,  ನಿರ್ದೇಶನ ತಂಡ - ದೀಪು, ಆರಾಧ್ಯ, ಛಾಯಾಗ್ರಹಣ ಸಹಾಯ - ಕೀರ್ತಿ, ಮೇಕಪ್ - ದಿಶಾ, ದಿಲೀಪ್, ಸಂಕಲನ - ಎ.ಆರ್ ಕೃಷ್ಣ, ಅಭಿಷೇಕ್ ರಾವ್,   ಸಂಗೀತ - ವಿ ಮನೋಹರ,  ಸಾಹಿತ್ಯ-ಶ್ರೀಧರ್ ಕರ್ಕೇರ, ವಿ. ಮನೋಹರ್, ಛಾಯಾಗ್ರಹಣ - ಎ. ಆರ್ ಕೃಷ್ಣ, ನಿರ್ಮಾಪಕರು - ಸತೀಶ್ ಪೆರ್ನೆ, ಶಿವಪುಸಾದ್ ಇಜ್ಜಾವು ತುಳು ಸಂಭಾಷಣೆ ಸಹಾಯ ಮತ್ತು ತರ್ಜಿಮೆ - ಬಬಿತ, ಕಥೆ ಚಿತ್ರಕಥೆ, ಸಂಭಾಷಣೆ, ನಿರ್ದೇಶನ - ಹೆಚ್.ಡಿ ಆರ್ಯ

ಕಥೆಯ ಸಾರಾಂಶ
ಅಂದ ಚೆಂದದ ಹಾಸ್ಯ ಮತ್ತು ಕೌಟುಂಬಿಕ ಕಥಾ ಹಂತರವಿರುವ ಚಿತ್ರ ಪಿರ್ಕಿಲು -
ಪಿರ್ಕಿಲು ಎಂದು ಊರಿನ ಜನರಿಂದ ಕರೆಸಿಕೊಳ್ಳುವ ಹುಡುಗರು ಏನೆಲ್ಲ ಅವಾಂತರಗಳನ್ನು ಸೃಷ್ಟಿ ಮಾಡುತ್ತಾರೆ. ಎಂಬುದನ್ನು ಹಾಸ್ಯಭರಿತವಾಗಿ ಸಂದೇಶ ಸಾರುವುದೇ ಚಿತ್ರದ ಒನ್ ಲೈನ್ ಸ್ಟೋರಿ ಆಗಿದೆ.

Ads on article

Advertise in articles 1

advertising articles 2

Advertise under the article