-->

ಎದೆನೋವೆಂದು ಒದ್ದಾಡಿದ 13ರ ಬಾಲಕಿ: ವೈದ್ಯರ ಮಾತಿನಿಂದ ಮುಗಿಲು ಮುಟ್ಟಿತು ಪಾಲಕರ ಆಕ್ರಂದನ

ಎದೆನೋವೆಂದು ಒದ್ದಾಡಿದ 13ರ ಬಾಲಕಿ: ವೈದ್ಯರ ಮಾತಿನಿಂದ ಮುಗಿಲು ಮುಟ್ಟಿತು ಪಾಲಕರ ಆಕ್ರಂದನ



ಹೈದರಾಬಾದ್: ಮುಂಜಾನೆ ಎದ್ದಾಗಲೇ ಎದೆನೋವೆಂದು ಒದ್ದಾಡಿದ 13 ವರ್ಷದ ಬಾಲಕಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ಮೆಹಬೂಬಬಾದ್ ಜಿಲ್ಲೆಯ ಮರಿಪೆದ ಮಂಡಲದ ಬೋದತಾಂಡದಲ್ಲಿ ಶುಕ್ರವಾರ ನಡೆದಿದೆ.

ಮಂಡಲ ಕೇಂದ್ರದ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಶ್ರಾವಂತಿ (13) ಮೃತಪಟ್ಟ ಬಾಲಕಿ. 

ರಾಮನವಮಿ ರಜೆ ಹಿನ್ನೆಲೆಯಲ್ಲಿ ತನ್ನ ಸ್ನೇಹಿತರೊಂದಿಗೆ ಗುರುವಾರ ಸಂಜೆಯವರೆಗೂ ಶ್ರಾವಂತಿ ಆಟವಾಡಿದ್ದಾಳೆ. ಬೋದತಾಂಡದಿಂದ ಅನತಿ ದೂರದಲ್ಲಿರುವ ನೂತನವಾಗಿ ನಿರ್ಮಾಣವಾಗಿರುವ ತಮ್ಮ ಮನೆಯಲ್ಲಿ ಮಲಗಲು ಪಾಲಕರು ತೆರಳಿದ್ದಾರೆ. ಆದರೆ, ಶ್ರಾವಂತಿ ತನ್ನ ಅಜ್ಜಿಯೊಂದಿಗೆ ಹಳೆಯ ಮನೆಯಲ್ಲೇ ಮಲಗಿದ್ದಾಳೆ.

ಆದರೆ ಶುಕ್ರವಾರ ನಸುಕಿನ ವೇಳೆ 3 ಗಂಟೆಗೆ ಎಚ್ಚರಗೊಂಡ ಶ್ರಾವಂತಿ ತೀವ್ರ ಎದೆನೋವೆಂದು ತನ್ನ ಅಜ್ಜಿಯ ಬಳಿ ಹೇಳಿದ್ದಾಳೆ. ಆ ಬಳಿಕ ಹೊರಗಡೆ ಹೋಗಿ ಮೂತ್ರ ವಿಸರ್ಜನೆ ಮಾಡಿ ಮತ್ತೆ ಮನೆಗೆ ಬಂದು ಮಲಗಿಕೊಂಡಿದ್ದಾಳೆ. ಆದರೆ ಆಕೆ ಬಹಳ ಸುಸ್ತಾಗಿರುವುದನ್ನು ಗಮನಿಸಿದ ಅಜ್ಜಿ, ಶ್ರಾವಂತಿಯ ತಂದೆಗೆ ಮಾಹಿತಿ ತಿಳಿಸಿದರು.

ತಕ್ಷಣ ಹಳೆಯ ಮನೆಗೆ ಬಂದ ಶ್ರಾವಂತಿಯ ತಂದೆ ಆಕೆಯ ಸಿಪಿಆರ್ ಮಾಡಿ, ತಕ್ಷಣ ಆಕೆಯನ್ನು ಮರಿಪೆದ ಮಂಡಲದಲ್ಲಿರುವ ಆರ್‌ಎಂಪಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಆದರೆ, ಅದನ್ನು ಒಪ್ಪದ ಪಾಲಕರು ಬದುಕಿಸಿಕೊಳ್ಳಬಹುದು ಎಂಬ ಆಸೆಯಿಂದ ಖಮ್ಮಮ್‌ನಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ತಪಾಸಣೆ ನಡೆಸಿದ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಪುತ್ರಿಯ ಸಾವಿನ ಸುದ್ದಿ ಕೇಳಿ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article