-->
ಡ್ರಾಪ್ ಮಾಡುವೆ ಎಂದು ಪುಸಲಾಯಿಸಿ 11ರ ಬಾಲಕಿಯನ್ನು ಕಾರು ಹತ್ತಿಸಿದ ಚಾಲಕ- ಮುಂದಾಗಿದ್ದೇ ಹೇಯ ಕೃತ್ಯ

ಡ್ರಾಪ್ ಮಾಡುವೆ ಎಂದು ಪುಸಲಾಯಿಸಿ 11ರ ಬಾಲಕಿಯನ್ನು ಕಾರು ಹತ್ತಿಸಿದ ಚಾಲಕ- ಮುಂದಾಗಿದ್ದೇ ಹೇಯ ಕೃತ್ಯ
ಗ್ಯಾಂಗ್ಟಕ್: ಶಾಲೆಯಿಂದ ಮನೆಗೆ ತೆರಳುತ್ತಿದ್ದ 11ವರ್ಷದ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ ಕಾರು ಚಾಲಕ ಆಕೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಅಮಾನುಷ ಘಟನೆ ಸಿಕ್ಕಿಂ ರಾಜ್ಯದಲ್ಲಿ ನಡೆದಿದೆ.

ಬಿಹಾರ ರಾಜ್ಯದ ಸಮಸ್ಟಿಪುರ ಮೂಲದ ಪ್ರೀತಂ ಶರ್ಮ(29) ಅತ್ಯಾಚಾರ, ಕೊಲೆ ಆರೋಪಿ.

ಎಪ್ರಿಲ್ 11ರಂದು ಶಾಲೆಯಿಂದ ಮನೆಗೆ ಬಾಲಕಿ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಪ್ರೀತಂ ಶರ್ಮ  ಕಾರಿನಲ್ಲಿ ಕರೆದೊಯ್ಯುವುದಾಗಿ ಬಾಲಕಿಯನ್ನು ಕರೆದಿದ್ದಾನೆ‌. ಆತನ ಮಾತನ್ನು ನಂಬಿದ ಬಾಲಕಿ ಕಾರು ಹತ್ತಿದ್ದಾಳೆ. ಆ ಬಳಿಕ ಪೆಟ್ರೋಲ್ ಬಂಕ್‌ನಲ್ಲಿ ಕಾರು ನಿಲ್ಲಿಸಿ ಬಾಲಕಿಗೆ ತಿಂಡಿ ತಿನಿಸು ಮತ್ತು ಜ್ಯೂಸ್ ಕೊಡಿಸಿದ್ದಾನೆ. ಬಳಿಕ ಪಕ್ಕದ ಅರಣ್ಯದಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆಪಾದಿಸಲಾಗಿದೆ.


ಅತ್ಯಾಚಾರ ಎಸಗಿದ ಬಳಿಕ ಆರೋಪಿ ಬಾಲಕಿಯನ್ನು ಹತ್ಯೆ ಮಾಡಿದ್ದಾನೆ. ಬಾಲಕಿ ನಾಪತ್ತೆಯಾಗಿ ಮೂರು ದಿನಗಳ ಬಳಿಕ ಪೊಲೀಸರು ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಂತ್ರಸ್ತ ಬಾಲಕಿಯ ತಾಯಿ ಆಗ್ರಹಿಸಿದ್ದಾರೆ.

"ತನ್ನ ಪುತ್ರಿ ಜೀವ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟಿದ್ದಾಳೆ. ಸಾಯುವ ಮುನ್ನ ಆಕೆಗೆ ಚಿತ್ರಹಿಂಸೆ ನೀಡಲಾಗಿತ್ತು. ಅದೇ ಶಿಕ್ಷೆಯನ್ನು ಆರೋಪಿಗೂ ನೀಡಬೇಕು. ನಮ್ಮ ಕೈಗೆ ಆರೋಪಿ ಸಿಕ್ಕಿದಲ್ಲಿ ಅದೇ ರೀತಿ ಆತನಿಗೂ ಚಿತ್ರಹಿಂಸೆ ನೀಡುತ್ತೇವೆ” ಎಂದು ಹೇಳಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article