ಮಾಜಿ ಶಾಸಕರ ಪುತ್ರನ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ಬೆಂಗಳೂರು: ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರ ಪುತ್ರ ತೇಜಸ್ ವರ್ತೂರು ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣದಲ್ಲಿ ಜಾಮೀನು ರಹಿತ ವಾರೆಂಟ್ ಘೋಷಣೆ ಆಗಿದೆ. ಪೊಲೀಸರು ಇದೀಗ ಇವರ ಹುಡುಕಾಟದಲ್ಲಿದ್ದಾರೆ.

ಸಿಸಿಎಚ್ 19 ಕೋರ್ಟ್ ನಿಂದ ಎನ್ ಬಿ ಡಬ್ಲ್ಯೂ ಜಾರಿಯಾಗಿದ್ದು, ಬೆಂಗಳೂರು ಮೆಟ್ರೋಪಾಲಿಯನ್ ಮ್ಯಾಜಿಸ್ಟ್ರೇಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದಾರೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಈ ವಾರೆಂಟ್ ಜಾರಿಯಾಗಿದೆ. ಸದಾಶಿವ ನಗರ ಪೊಲೀಸರು ತೇಜಸ್ ವರ್ತೂರು ಅವರಿಗೆ ಹುಡುಕಾಟ ನಡೆಸುತ್ತಿದ್ದಾರೆ.