-->
1000938341
ರಜನಿಕಾಂತ್ ಪುತ್ರಿ ಮನೆಯಲ್ಲಿ ಕಳವುಗೈದ ಆಭರಣಗಳಿಂದಲೇ ಮನೆಕೆಲಸದಾಕೆ ದುಬಾರಿ ಮನೆ ಖರೀಸಿದ ಕೆಲಸದಾಕೆ: ಅದರ ಬೆಲೆ ಕೇಳಿದ್ರೆ ನಿಬ್ಬೆರಗಾಗ್ತೀರಾ

ರಜನಿಕಾಂತ್ ಪುತ್ರಿ ಮನೆಯಲ್ಲಿ ಕಳವುಗೈದ ಆಭರಣಗಳಿಂದಲೇ ಮನೆಕೆಲಸದಾಕೆ ದುಬಾರಿ ಮನೆ ಖರೀಸಿದ ಕೆಲಸದಾಕೆ: ಅದರ ಬೆಲೆ ಕೇಳಿದ್ರೆ ನಿಬ್ಬೆರಗಾಗ್ತೀರಾಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ, ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ನಡೆದಿರುವ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ಹಾಗೂ ಕಾರು ಚಾಲಕನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಕಳಗೈದಿರುವ ಚಿನ್ನಾಭರಣದಲ್ಲಿ ಮನೆಗೆಲಸದಾಕೆ ಖರೀದಿಸಿರುವ ಮನೆಯ ಮೊತ್ತ ಕೇಳಿದ್ರೆ ಒಮ್ಮೆ ಬೆರಗಾಗುವುದು ಗ್ಯಾರೆಂಟಿ.

ಚೆನ್ನೈನ ಸೈಂಟ್ ಮೇರಿಸ್ ರಸ್ತೆಯಲ್ಲಿರುವ ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ಈಶ್ವರಿ ಎಂಬಾಕೆ ಮನೆ ಕೆಲಸ ಮಾಡುತ್ತಿದ್ದಳು. ಈಕೆ ಲಾಕರ್‌ನಿಂದ ಬೆಲೆಬಾಳುವ ಚಿನ್ನಾಭರಣ ಹಾಗೂ ವಜ್ರಾಭರಣಗಳನ್ನು ಕಳವು ಮಾಡಿರುವ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿದೆ. ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿರುವ ಕಾರು ಚಾಲಕ ವೆಂಕಟೇಶ್‌ನನ್ನು ಕೂಡಾ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ರೋಚಕ ಮಾಹಿತಿಗಳು ಬಯಲಾಗಿವೆ.

ಐಶ್ವರ್ಯಾ ಮನೆಯಿಂದ ಕದ್ದ ಆಭರಣಗಳನ್ನು ಮಾರಾಟ ಮಾಡಿ ಶೋಲಿಂಗನಲ್ಲೂರು ಪ್ರದೇಶದಲ್ಲಿ ಈಶ್ವರಿ ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಮನೆಯನ್ನು ಖರೀದಿಸಿದ್ದಳು ಎಂದು ತಿಳಿದುಬಂದಿದೆ. ತನ್ನ ಮೇಲೆ ಅನುಮಾನ ಬಾರದ ರೀತಿಯಲ್ಲಿ ಬ್ಯಾಂಕ್‌ನಲ್ಲಿ ಸಾಲ ಪಡೆದು ಎರಡು ವರ್ಷದೊಳಗೆ ಈಶ್ವರಿ ಪೂರ್ತಿಯಾಗಿ ಪಾವತಿಸಿದ್ದಳು.

ಕಳೆದ 18 ವರ್ಷಗಳಿಂದ ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ಈಶ್ವರಿ ಕೆಲಸ ಮಾಡುತ್ತಿದ್ದಳು. ಆದ್ದರಿಂದ ಅವರ ಮನೆಯ ಬಗ್ಗೆ ಸಂಪೂರ್ಣ ತಿಳಿದುಕೊಂಡಿದ್ದಳು. ಅಲ್ಲದೆ ಆಕೆ ಲಾಕರ್ ಅನ್ನು ಹಲವು ಬಾರಿ ತೆಗೆದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಕೀ ಇರುವ ಸ್ಥಳವನ್ನು ಈಶ್ವರಿ ಚೆನ್ನಾಗಿ ತಿಳಿದಿದ್ದಳು. ಆಕೆ ಒಂದೇ ಬಾರಿ ಕಳ್ಳತನ ಮಾಡಿರಲಿಲ್ಲ. ಅನೇಕ ಬಾರಿ ಸ್ವಲ್ಪ ಸ್ವಲ್ಪವಾಗಿ ಆಭರಣಗಳನ್ನು ಕದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೆನ್ನೈನ ಮೈಲಾಪುರದಲ್ಲಿರುವ ಆಭರಣ ಮಳಿಗೆಯೊಂದರ ಮೇಲೂ ಪೊಲೀಸರು ದಾಳಿ ನಡೆಸಿದ್ದು, ಈಶ್ವರಿ ಅಕ್ರಮವಾಗಿ ಮಾರಾಟ ಮಾಡಿದ್ದ 100 ಪವನ್ ಚಿನ್ನಾಭರಣ ಹಾಗೂ ವಜ್ರದ ಆಭರಣಗಳ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article