ಮಂಗಳೂರು: ಸಾಲಬಾಧೆ ಸಹಿಸದೆ ಅವಳಿ - ಜವಳಿ ಪುತ್ರಿಯರೊಂದಿಗೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ‌


ಮಂಗಳೂರು: ಒಂಬತ್ತು ವರ್ಷದ ಅವಳಿ - ಜವಳಿ ಪುತ್ರಿಯರೊಂದಿಗೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿರುವ ಹೃದಯ ಘಟನೆಯೊಂದು ನಗರದ ಕೆ.ಎಸ್.ರಾವ್ ರಸ್ತೆಯ ಕರುಣಾ ಲಾಡ್ಜ್ ನಲ್ಲಿ ನಡೆದಿದೆ.

ಮೈಸೂರು ಮೂಲದ ದೇವೇಂದ್ರ(48) ಅವರ ಪತ್ನಿ ನಿರ್ಮಲಾ ಹಾಗೂ ಒಂಬತ್ತು ವರ್ಷದ ಇಬ್ಬರು ಅವಳಿ - ಜವಳಿ ಪುತ್ರಿಯರಾದ ಚೈತನ್ಯಾ, ಚೈತ್ರಾ ಆತ್ಮಹತ್ಯೆ ಮಾಡಿಕೊಂಡವರು.

ಮೈಸೂರಿನ ವಿಜಯನಗರ ಮೂಲದವರಾದ ದೇವೇಂದ್ರರವರು ಕುಟುಂಬ ಸಹಿತರಾಗಿ ಮೂರು ದಿನಗಳಿಂದ ಈ ಲಾಡ್ಜ್ ನಲ್ಲಿ ವಾಸ್ತವ್ಯವಿದ್ದಾರೆ‌. ಒಂದು ದಿನಕ್ಕೆಂದು ಲಾಡ್ಜ್ ಬುಕ್ ಮಾಡಿದ್ದ ಅವರು ಆ ಬಳಿಕ ಮತ್ತೆ ಎರಡು ದಿನಗಳ ಕಾಲ ಮತ್ತೆ ವಿಸ್ತರಣೆ ಮಾಡಿದ್ದರು. ನಿನ್ನೆ ಸಂಜೆ ರೂಂ ಚೆಕ್ ಔಟ್ ಮಾಡಬೇಕಿತ್ತು.  ಆದರೆ ಬಾಗಿಲು ತೆಗೆಯದೆ ಇದ್ದಾಗ ಅನುಮಾನಗೊಂಡು ತಪಾಸಣೆ ಮಾಡಿದಾಗ ವಿಚಾರ ಬಹಿರಂಗಗೊಂಡಿದೆ. 

ದೇವೇಂದ್ರರವರು ಪತ್ನಿ ಹಾಗೂ ಪುತ್ರಿಯರಿಗೆ ವಿಷ ನೀಡಿ ಆ ಬಳಿಕ ತಾವೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹಗಳ ಬಳಿ ಡೆತ್ ನೋಟ್ ಪತ್ತೆಯಾಗಿದ್ದು, ಸಾಲದಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದುಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಓರ್ವರು ನೇಣುಬಿಗಿದ ಸ್ಥಿತಿಯಲ್ಲಿ ಹಾಗೂ ಮೂವರು ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಜೈನ್ ಭೇಟಿ ನೀಡು ಪರಿಶೀಲನೆ ನಡೆಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu