-->
ಇದು ನನ್ನ ಕೊನೆಯ ಚುನಾವಣೆ: ನಿವೃತ್ತಿ ಸುಳಿವು ನೀಡಿದ ವಿನಯ್ ಕುಮಾರ್ ಸೊರಕೆ

ಇದು ನನ್ನ ಕೊನೆಯ ಚುನಾವಣೆ: ನಿವೃತ್ತಿ ಸುಳಿವು ನೀಡಿದ ವಿನಯ್ ಕುಮಾರ್ ಸೊರಕೆ

ಇದು ನನ್ನ ಕೊನೆಯ ಚುನಾವಣೆ: ನಿವೃತ್ತಿ ಸುಳಿವು ನೀಡಿದ ವಿನಯ್ ಕುಮಾರ್ ಸೊರಕೆ





ಹಿರಿಯ ರಾಜಕಾರಣಿ ವಿನಯ ಕುಮಾರ್ ಸೊರಕೆ ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದಾರೆ. ಈ ಬಾರಿಯ ಚುನಾವಣೆ ತಮ್ಮ ಜೀವನದ ಕೊನೆಯ ಚುನಾವಣೆ ಎಂದು ಹೇಳುವ ಮೂಲಕ ಚುನಾವಣಾ ರಾಜಕೀಯಕ್ಕೆ ಇತೀಶ್ರೀ ಘೋಷಿಸಿದ್ದಾರೆ.



ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಜನಸೇವೆ ಮಾಡಿದ್ದೇನೆ. ಅಧಿಕಾರ ಇದ್ದಾಗ, ಯಾ ಅಧಿಕಾರ ಇಲ್ಲದ ಸಮಯದಲ್ಲೂ ಜನರೊಂದಿಗೆ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ ಎಂದು ಅವರು ಹೇಳಿದ್ದಾರೆ.



ಅಧಿಕಾರದಲ್ಲಿ ಇದ್ದಾಗ ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ಈಗಿನ ಚುನಾವಣೆಯೇ ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆಯಾಗಲಿದೆ ಅವರು ಭಾವನಾತ್ಮಕವಾಗಿ ಮಾತನಾಡಿದರು.



ಉಡುಪಿ ಜಿಲ್ಲೆಯ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಾಗಿದೆ. ಆದರೆ, ಜನರು ಮತ್ತು ಕಾರ್ಯಕರ್ತರು ನನ್ನನ್ನು ಯಾವತ್ತೂ ಕೈ ಬಿಡಲಿಲ್ಲ ಎಂದು ಅವರು ಆತ್ಮತೃಪ್ತಿ ವ್ಯಕ್ತಪಡಿಸಿದರು.



ಚುನಾವಣೆಯಲ್ಲಿ ಸೋತರೂ, ಜನರು ನನ್ನ ಸಂಪರ್ಕದಲ್ಲಿ ಎಂದಿನಂತೆ ಇದ್ದು, ಅವರ ಸಮಸ್ಯೆಗಳನ್ನು ನನ್ನ ಬಳಿ ಹೇಳುತ್ತಾರೆ ಮತ್ತು ನಾನು ಅದಕ್ಕೆ ಸ್ಪಂದಿಸಿದ್ದೇನೆ. ಹಿಂದುತ್ವದ ಹೆಸರಲ್ಲಿ ಅಧಿಕಾರ ಪಡೆದ ಬಿಜೆಪಿ ರಾಜ್ಯದ ವಿವಿಧ ದೇವಸ್ಥಾನಗಳನ್ನು ಕೆಡವಲು ಪ್ರಯತ್ನಿಸಿತ್ತು. ನಂಜನಗೂಡಿನಲ್ಲಿ ಇತಿಹಾಸ ಪ್ರಸಿದ್ಧ ದೇವಸ್ಥಾನ ಕೆಡವಿದ ಸಂದರ್ಭದಲ್ಲಿ ಜನರ ಪ್ರತಿಭಟನೆಗೆ ಹೆದರಿ ತನ್ನ ನಿರ್ಧಾರದಿಂದ ಅದು ಹಿಂದಕ್ಕೆ ಸರಿದಿತ್ತು ಎಂದು ತಿಳಿಸಿದರು.


ಈಗಿನ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದು, ಈ ಬಾರಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನಿಶ್ಚಿತವಾಗಿದೆ. ಅಧಿಕಾರ ಇರಲಿ ಅಧಿಕಾರ ಇಲ್ಲದಿರಲಿ, ಜಾತಿ ಧರ್ಮವನ್ನು ನೋಡಿಲ್ಲ. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣವಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸೊರಕೆ ತಿಳಿಸಿದರು.

Ads on article

Advertise in articles 1

advertising articles 2

Advertise under the article