-->
ಈ ಒಂದು ಕಾರಣಕ್ಕಾಗಿ ನಟ ಶಾರುಖ್ ಖಾನ್ ಮಹಿಳಾ ಅಂಗರಕ್ಷಕರನ್ನು ಹೊಂದಿದ್ದಾರಂತೆ

ಈ ಒಂದು ಕಾರಣಕ್ಕಾಗಿ ನಟ ಶಾರುಖ್ ಖಾನ್ ಮಹಿಳಾ ಅಂಗರಕ್ಷಕರನ್ನು ಹೊಂದಿದ್ದಾರಂತೆ


ಮುಂಬೈ: ಬಾಲಿವುಡ್ ಸೂಪ‌ರ್ ಸ್ಟಾರ್ ಶಾರುಖ್ ಖಾನ್ ಈಗಲೂ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲೂ ಹೆಚ್ಚಿನ ಅಭಿಮಾನಿಗಳು ಮಹಿಳೆಯರೇ ಆಗಿದ್ದಾರೆ. ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ ಮತ್ತು ಕುಚ್ ಕುಚ್ ಹೋತಾ ಹೈ ಮುಂತಾದ ರೋಮ್ಯಾಂಟಿಕ್ ಸಿನಿಮಾಗಳ ಯಶಸ್ಸು ಶಾರುಖ್ ಅವರನ್ನು ಮಹಿಳೆಯರ ಪಾಲಿಗೆ ಲವರ್ ಬಾಯ್ ಆಗಿ ಮಾಡಿದೆ. ಹೀಗಾಗಿಯೇ ಶಾರುಖ್ ರನ್ನು ಸಾರ್ವಜನಿಕವಾಗಿ ಕಂಡಲ್ಲಿ ಅವರನ್ನು ಹಿಡಿದು ತಬ್ಬಿಕೊಂಡು, ಎಳೆದಾಡಿ ಮುತ್ತು ಕೊಡುವುದಕ್ಕೂ ಮಹಿಳಾ ಅಭಿಮಾನಿಗಳು ಹಿಂಜರಿಯುವುದಿಲ್ಲ.

ಈ ಕಾರಣಕ್ಕಾಗಿಯೇ ಶಾರುಖ್ ಖಾನ್ ಅವರು ತಮ್ಮೊಂದಿಗೆ ಮಹಿಳಾ ಬಾಡಿಗಾರ್ಡ್‌ಗಳನ್ನು ನೇಮಿಸಿಕೊಂಡಿದ್ದಾರಂತೆ. ಮಹಿಳಾ ಅಭಿಮಾನಿಗಳ ಸುರಕ್ಷತೆಗಾಗಿಯೇ ಅವರು ಮಹಿಳಾ ಅಂಗರಕ್ಷಕರನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. 2017 ರಲ್ಲಿ ನಡೆದ ಇಂಡಿಯನ್ ಟುಡೆ ಕಾಶ್ಮೀವ್‌ನಲ್ಲಿ ಸ್ವತಃ ಶಾರುಖ್ ಇದನ್ನು ಬಹಿರಂಗಪಡಿಸಿದರು. ಮಹಿಳೆಯರನ್ನು ತಳ್ಳುವ ಪುರುಷ ಅಂಗರಕ್ಷಕರು ಅಸಭ್ಯವಾಗಿ ಕಾಣುತ್ತಾರೆ, ಹೀಗಾಗಿ ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಬಾಡಿಗಾರ್ಡ್ ಹೊಂದಿದ್ದೇನೆ ಎಂದು ಹೇಳಿದರು.

ನಾನು ಪಾರ್ಟಿಗೆ ಬರುವಾಗ ಕಾರಿನಲ್ಲಿರುವ ನನ್ನ ಚಿತ್ರಗಳು ಯಾವಾಗಲೂ ಗೊಣಗುತ್ತಿರುತ್ತವೆ. ಇದು ನಿಜಕ್ಕೂ ಭಯಾನಕವಾಗಿದೆ. ನನ್ನನ್ನು ಇಷ್ಟಪಡುವ ಬಹಳಷ್ಟು ಹೆಂಗಸರಿದ್ದಾರೆ. ಆದ್ದರಿಂದ ನನಗೆ ಈಗ ಮಹಿಳಾ ಅಂಗರಕ್ಷಕರಿದ್ದಾರೆ. ನನ್ನನ್ನು ರಕ್ಷಿಸಲು ಪುರುಷ ಅಂಗರಕ್ಷಕರು ಮಹಿಳೆಯರನ್ನು ತಳ್ಳುವಾಗ ಅದು ಅಸಭ್ಯವಾಗಿರುತ್ತದೆ ಎಂದು ಹೇಳಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article