ಲೈಂಗಿಕ ಹಿಂಸಾಚಾರ: ರಾಹುಲ್ ಗಾಂಧಿ ಮನೆಗೆ ಪೊಲೀಸರ ಭೇಟಿ- ರಾಜಕೀಯ ದ್ವೇಷ ಎಂದು ಬಣ್ಣಿಸಿದ ಖರ್ಗೆ, ಜೈರಾಂ
ಲೈಂಗಿಕ ಹಿಂಸಾಚಾರ: ರಾಹುಲ್ ಗಾಂಧಿ ಮನೆಗೆ ಪೊಲೀಸರ ಭೇಟಿ- ರಾಜಕೀಯ ದ್ವೇಷ ಎಂದು ಬಣ್ಣಿಸಿದ ಖರ್ಗೆ, ಜೈರಾಂ
ಲೈಂಗಿಕ ಹಿಂಸಾಚಾರದ ಬಗ್ಗೆ ಮಾಹಿತಿ ಪಡೆಯಲು ಪೊಲೀಸರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ದಿಲ್ಲಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಭಾರತ್ ಜೋಡೋ ಕಾರ್ಯಕ್ರಮದ ಸಂದರ್ಭದಲ್ಲಿ ದೇಶದಲ್ಲಿ ಈಗಲೂ ಲೈಂಗಿಕ ಹಿಂಸಾಚಾರಗಳು ನಡೆಯುತ್ತಿವೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಈ ಭೇಟಿ ನೀಡಲಾಗಿದೆ.
ರಾಹುಲ್ ಅವರಿಂದ ಮಾಹಿತಿ ಪಡೆದು ಲೈಂಗಿಕ ಶೋಷಣೆಯಿಂದ ಮಹಿಳೆಯರನ್ನು ಮುಕ್ತ ಮಾಡುತ್ತೇವೆ ಎಂಬಂತೆ ಪೊಲೀಸರು ಈ ಭೇಟಿ ನೀಡಿದ್ದಾರೆ.
ಇದೊಂದು ರಾಜಕೀಯ ದ್ವೇಷ ಸಾಧನೆಯ ಮತ್ತು ಕೀಳು ಮಟ್ಟದ ಕೃತ್ಯ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಅಪಾರ ಜನಪ್ರಿಯತೆ ಪಡೆಯುತ್ತಿರುವ ರಾಹುಲ್ ವರ್ಚಸ್ಸನ್ನು ತಗ್ಗಿಸುವ ಕೇಂದ್ರ ಸರ್ಕಾರದ ಕುಕೃತ್ಯವಿದು ಎಂದು ಪ್ರತಿಪಕ್ಷ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ಹಿರಿಯ ನಾಯಕರಾದ ಅಭಿಷೇಕ್ ಮನು ಸಿಂಘ್ವಿ, ಜೈರಾಮ್ ರಮೇಶ್, ಪವನ್ ಖೇರ ಮೊದಲಾದ ನಾಯಕರು ರಾಹುಲ್ ಮನೆಗೆ ಭೇಟಿ ನೀಡಿದರು.
ಈ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗಿದರು. ಅವರನ್ನು ಬಂಧಿಸಿ ಬಳಿಕ ಮುಚ್ಚಳಿಕೆ ಪಡೆದು ಬಿಡುಗಡೆ ಮಾಡಲಾಗಿದೆ.