ಕರ್ತವ್ಯದಲ್ಲಿದ್ದ ಪೊಲೀಸ್ ಗೆ ಸೆಲ್ಯೂಟ್ ಮಾಡಿದ ಪುಟ್ಟ ಬಾಲಕಿ: ವೀಡಿಯೋ ಶೇರ್ ಮಾಡಿದ ಕೇರಳ ಪೊಲೀಸ್ ಇಲಾಖೆ


ಕೊಚ್ಚಿ: ಕೇರಳ ರಾಜ್ಯದ ಪೊಲೀಸರು ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವೀಡಿಯೋ ಸದ್ಯ ಸಾಕಷ್ಟು ವೈರಲ್ ಆಗಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಕರ್ತವ್ಯ ನಿರತ ಪೊಲೀಸರೊಬ್ಬರಿಗೆ ಸೆಲ್ಯೂಟ್ ಮಾಡುವುದನ್ನು ಕಾಣಬಹುದು.

ಕಾರಿನ ಹಿಂಭಾಗದಲ್ಲಿ ನಿಂತಿದ್ದ ಪೊಲೀಸರ ಬಳಿಗೆ ಬಾಲಕಿ ಓಡಿ ಬಂದು ನಗುತ್ತಾ ಸೆಲ್ಯೂಟ್ ಮಾಡಿ ಗೌರವ ಸೂಚಿಸುತ್ತಾಳೆ. ಇದಕ್ಕೆ ಪ್ರತಿಯಾಗಿ ಪೊಲೀಸ್ ಅಧಿಕಾರಿಯೂ ನಗುನಗುತ್ತಾ ಸೆಲ್ಯೂಟ್‌ ಮಾಡುತ್ತಾರೆ. ಈ ವೇಳೆ ಬಾಲಕಿ ಸಂತಸಗೊಳ್ಳುತ್ತಾಳೆ.

ಕೇರಳ ಪೊಲೀಸರು ಹಂಚಿಕೊಂಡಿರುವ ವೀಡಿಯೋವನ್ನು 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕ ಮಂದಿ ಗೌರವ ಸೂಚಿಸಿರುವುದನ್ನು ಕೊಂಡಾಡಿದ್ದಾರೆ. ಜತೆಗೆ ಜನರ ರಕ್ಷಣೆಗಾಗಿ ಸದಾ ಸೇವೆಯಲ್ಲಿರುವ ಪೊಲೀಸರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಬಹತೇಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu