-->
ಸುಳ್ಯ: ನೆಟ್ಟಾರು ಹತ್ಯೆ ಪ್ರಕರಣ - ಸುಳ್ಯ ಪಿಎಫ್ಐ ಕಚೇರಿ ಎನ್ಐಎ ವಶಕ್ಕೆ

ಸುಳ್ಯ: ನೆಟ್ಟಾರು ಹತ್ಯೆ ಪ್ರಕರಣ - ಸುಳ್ಯ ಪಿಎಫ್ಐ ಕಚೇರಿ ಎನ್ಐಎ ವಶಕ್ಕೆಮಂಗಳೂರು: ಬಿಜೆಪಿ ಯುವಮೋರ್ಚ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಎನ್ಐಎ ಕಾರ್ಯಾಚರಣೆ ನಡೆಸಿ ಸುಳ್ಯದ ಪಿಎಫ್ಐ ಕಚೇರಿಯನ್ನು ಸಂಪೂರ್ಣ ವಶಕ್ಕೆ ತೆಗೆದುಕೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗಾಂಧಿನಗರದ ಅಲೆಟ್ಟಿ ರಸ್ತೆಯಲ್ಲಿದೆ ತಾಹಿರಾ ಕಾಂಪ್ಲೆಕ್ಸ್ ನ ಫಸ್ಟ್ ಫ್ಲೋರ್ ನಲ್ಲಿ ಈ ಕಚೇರಿಯಿತ್ತು. ಪ್ರವೀಣ್ ನೆಟ್ಟಾರು ಹತ್ಯೆಗೆ ಇದೇ ಕಚೇರಿಯಲ್ಲಿ ಸಂಚು ಹೂಡಲಾಗಿತ್ತು ಎನ್ನಲಾಗಿದೆ. ಇದೀಗ ಎನ್ಐಎಯು ತನ್ನ ಕಾರ್ಯಾಚರಣೆ ಮುಂದುವರಿಸಿ ಈ ಪಿಎಫ್ಐ ಕಚೇರಿಯನ್ನು ಜಪ್ತಿ ಮಾಡಿದೆ. ಆದ್ದರಿಂದ ಹಾಲ್ ಮಾಲೀಕರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಆರ್ಡರ್ ಕಾಪಿ ರವಾನೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಎನ್ಐಎ ವಶದಲ್ಲಿರುವ ಆ ಸ್ಥಳವನ್ನು ಪರಾಬಾರೆ ಮಾಡುವಂತಿಲ್ಲ. ಬಾಡಿಗೆ, ಲೀಜ್ ಗೆ ಕೊಡುವಂತಿಲ್ಲ. ಅಲ್ಲಿರುವ ಯಾವುದೇ ವಸ್ತುಗಳನ್ನು ಸಾಗಿಸೋದು ಅಥವಾ ಕಟ್ಟಡದ ನವೀಕರಣವೂ ನಿಷಿದ್ಧವಾಗಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article