
ಮಂಡ್ಯದಲ್ಲಿ ಬಿಜೆಪಿಗೆ ಮತ್ತಷ್ಟು ಬಲ: ಸುಮಲತಾ ಬಳಿಕ ಮತ್ತೊಬ್ಬ ಮುಖಂಡ ಕಮಲ ಪಕ್ಷದ ಮಡಿಲಿಗೆ...
ಮಂಡ್ಯದಲ್ಲಿ ಬಿಜೆಪಿಗೆ ಮತ್ತಷ್ಟು ಬಲ: ಸುಮಲತಾ ಬಳಿಕ ಮತ್ತೊಬ್ಬ ಮುಖಂಡ ಕಮಲ ಪಕ್ಷದ ಮಡಿಲಿಗೆ...
ಮಂಡ್ಯದಲ್ಲಿ ಬಿಜೆಪಿ ಮತ್ತಷ್ಟು ಬಲಗೊಳ್ಳುತ್ತಿದೆ. ಚುನಾವಣೆ ಹೊಸ್ತಿಲಲ್ಲೇ ಸುಮಲತಾ ಬಿಜೆಪಿ ಸೇರುವ ಸ್ಪಷ್ಟ ಮುನ್ಸೂಚನೆ ನೀಡಿದ್ದು, ಕೇಸರಿ ಪಾಳಯದಲ್ಲಿ ರಣೋತ್ಸಾಹಕ್ಕೆ ಕಾರಣವಾಗಿತ್ತು.
ಇದೀಗ ಜಿಲ್ಲೆಯ ಮತ್ತೊಬ್ಬ ಮುಖಂಡ ಮಾಜಿ ಸಂಸತ್ ಸದಸ್ಯ ಶಿವರಾಮೇಗೌಡ ಬಿಜೆಪಿ ಸೇರುವ ಇಂಗಿತ ಪ್ರಕಟಿಸಿದ್ದಾರೆ.
ಪಕ್ಷಾಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ಮುಂಚೂಣಿ ಮುಖಂಡರ ಜೊತೆಗೆ ಈಗಾಗಲೇ ಮಾತುಕತೆ ನಡೆಸಿದ್ದು, ಮುಂದಿನ ಚುನಾವಣೆಯಲ್ಲಿ ನಾಗಮಂಗಲ ಸೇರಿದಂತೆ ಮಂಡ್ಯದ ಏಳೂ ಕ್ಷೇತ್ರಗಳಲ್ಲೂ ಜಯಭೇರಿ ಭಾರಿಸುವುದಾಗಿ ಅವರು ಪ್ರಕಟಿಸಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಇನ್ನು ಮುಂದೆ ಬಿಜೆಪಿ ಆಟ ಶುರುವಾಗಿದೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿ ಕೇಸರಿ ಪಾಳಯವನ್ನು ಮುನ್ನಡೆಸುವುದಾಗಿ ಶಿವರಾಮೇಗೌಡ ಪ್ರಕಟಿಸಿದ್ದಾರೆ.