-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
kadaba:- ಸ್ವತಃ ಪೊರಕೆ ಹಿಡಿದು ಕಚೇರಿ ಗುಡಿಸಿ ಮಾದರಿಯಾದರು ಈ ಅಧಿಕಾರಿ.

kadaba:- ಸ್ವತಃ ಪೊರಕೆ ಹಿಡಿದು ಕಚೇರಿ ಗುಡಿಸಿ ಮಾದರಿಯಾದರು ಈ ಅಧಿಕಾರಿ.

ಕಡಬ

ಸ್ವತಃ ತಾನೇ ಕಚೇರಿಯಲ್ಲಿನ ಕಸಗುಡಿಸುವ ಮೂಲಕ ಉಪತಹಶಿಲ್ದಾರರೊಬ್ಬರು ಮಾದರಿಯಾಗಿದ್ದಾರೆ.

ಇವರು ಗೋಪಾಲ್. ಕೆ. ಕಡಬ ತಾಲೂಕು ಕಚೇರಿಯಲ್ಲಿ ಉಪತಹಶಿಲ್ದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕಚೇರಿಗೆ ಸರಿಯಾದ ಸಮಯಕ್ಕೆ ಆಗಮಿಸುವ ಗೋಪಾಲ್ ಅವರು, ಬೆಳಗ್ಗೆ ಕಚೇರಿಗೆ ಬಂದ ತಕ್ಷಣ ತನ್ನ ಬ್ಯಾಗನ್ನು ತನ್ನ ಟೇಬಲ್ ಮೇಲೆ ಇಟ್ಟು ಪೊರಕೆ ಹಿಡಿದು ಸಂಪೂರ್ಣ ಕಚೇರಿಯನ್ನು ಗುಡಿಸಿ ಸ್ವಚ್ಛ ಮಾಡುತ್ತಾರೆ.ನಂತರ ದೇವರ ಫೋಟೋಗೆ ಕೈಮುಗಿದು ಆ ದಿನದ ತನ್ನ ಕರ್ತವ್ಯವನ್ನು ಆರಂಭಿಸುತ್ತಾರೆ. ಗೋಪಾಲ್ ಅವರು ಉಪತಹಶಿಲ್ದಾರರ ಹುದ್ದೆಯಲ್ಲಿದ್ದರೂ ಸರಳ ಸಜ್ಜನಿಕೆಗೆ ಹೆಸರುವಾಸಿಯಾದವರು.ಆಟೋ ಅಥವಾ ಜೀಪ್ ಹತ್ತಿಕೊಂಡೇ ಕಚೇರಿಗೆ ಕರ್ತವ್ಯಕ್ಕೆ ಆಗಮಿಸುತ್ತಾರೆ.

ಸರ್ ತಾವು ಅಧಿಕಾರಿಯಾಗಿದ್ದೀರಿ ತಮಗೆ ಈ ಕೆಲಸವನ್ನು ಬೇರೆಯವರ ಕೈಯಲ್ಲಿ ಮಾಡಿಸಬಹುದಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಉಪತಹಶಿಲ್ದಾರ್ ಗೋಪಾಲ್ ಅವರು ಈ ಕಚೇರಿ ನನ್ನ ಅನ್ನಪೂರ್ಣೇಶ್ವರಿ ದೇಗುಲ. ನನಗೆ ನನ್ನ ಕುಟುಂಬಕ್ಕೆ ಅನ್ನ ಹಾಕೋದು ಇದೇ ಕಚೇರಿ.ನಾನು ಅದನ್ನು ಸ್ವಚ್ಛವಾಗಿಡೋದು ನನ್ನ ಕರ್ತವ್ಯ. ಅದರಲ್ಲಿ ನನಗೆ ಯಾವುದೇ ಮುಜುಗರ ಇಲ್ಲ.ಮಾತ್ರವಲ್ಲದೇ ನಾವು ಕೆಲಸ ಮಾಡಿಸುವುದಲ್ಲಿ ಏನೂ ವಿಶೇಷತೆ ಇಲ್ಲ. ಬದಲಾಗಿ ನಾವೇ ಆ ಕೆಲಸವನ್ನು ಮಾಡಿ ತೋರಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದಿದ್ದಾರೆ. ಕಚೇರಿ ಸಿಬ್ಬಂದಿ ಉದಯ್ ಅವರೂ ಉಪತಹಶಿಲ್ದಾರ್ ಅವರಿಗೆ ಸಾಥ್ ನೀಡಿದರು.

Ads on article

Advertise in articles 1

advertising articles 2

Advertise under the article

ಸುರ