kadaba_ ಹೃದಯಾಘಾತದಿಂದ ಯೋಧ ಮೃತ್ಯು. ಪಾರ್ಥಿವ ಶರೀರ ಇಂದು ಸ್ವಗೃಹಕ್ಕೆ.

ಕಡಬ

ಕೊಯಂಬತ್ತೂರು ಮದ್ರಾಸ್ ರಿಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದರಾದ ಸೈನಿಕ ಶ್ರೀ ಲಿಜೇಶ್ ಕುರಿಯನ್ ರವರು ದಿನಾಂಕ 26 ರಂದು ಹೃದಯಾಘಾತದಿಂದ ವೀರ ಮರಣ ಹೊಂದಿದ್ದಾರೆ.

ಕಡಬ ತಾಲೂಕಿನ ಕುಟ್ರುಪ್ಪಾಡಿ ತರಪ್ಪೇಳ್‌ ನಿವಾಸಿ ಜೋನಿ ಎಂಬವರ ಮಗನಾದ ಲಿಜೇಶ್ ಅವರು ತಮಿಳುನಾಡಿನ ಕೊಯಂಬತ್ತೂರು ಮದ್ರಾಸ್ ರಿಜಿಮೆಂಟ್‌ನಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರು.ಮಾರ್ಚ್ 26ರಂದು ಲಿಜೇಶ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು.ಮೃತರು ಪತ್ನಿ ಜೋಮಿತಾ,ಒಂದು ವರ್ಷದ ಮಗು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಲಿಜೇಶ್ ಅವರ ಪಾರ್ಥಿವ ಶರೀರವು ಇಂದು ಬೆಳಗ್ಗೆ ಕಡಬ ತಲುಪಲಿದ್ದು, ಸುಮಾರು ಬೆಳಗ್ಗೆ 11:30 ಗಂಟೆಗೆ ಕುಟ್ರುಪ್ಪಾಡಿ ಸಂತ ಮೇರಿಸ್ ಕ್ಯಾಥೋಲಿಕ್ ಫೋರೋನಾ ದೇವಾಲಯದಲ್ಲಿ ಅಂತ್ಯಸಂಸ್ಕಾರದ ಕ್ರಿಯೆಗಳು ನೆರವೇರಲಿದೆ ಎಂದು ಚರ್ಚ್ ಧರ್ಮಗುರುಗಳಾದ ಜೋಸ್ ಆಯಂಕುಡಿ ಅವರು ತಿಳಿಸಿದ್ದಾರೆ.