-->
ಮದುವೆಯ ಮರುದಿನವೇ ಪತ್ನಿಯನ್ನು ಟ್ರಾಫಿಕ್ ಜಾಮ್ ನಲ್ಲಿ ತೊರೆದು ಪತಿ ಎಸ್ಕೇಪ್

ಮದುವೆಯ ಮರುದಿನವೇ ಪತ್ನಿಯನ್ನು ಟ್ರಾಫಿಕ್ ಜಾಮ್ ನಲ್ಲಿ ತೊರೆದು ಪತಿ ಎಸ್ಕೇಪ್

ಬೆಂಗಳೂರು: ಖತರ್ನಾಕ್ ಪತಿಯೊಬ್ಬ ಮದುವೆಯಾದ ಮರುದಿನವೇ ಟ್ರಾಫಿಕ್ ಜಾಮ್‌ನಲ್ಲಿ ಪತ್ನಿಯನ್ನು ತೊರೆದು ಪರಾರಿಯಾದ ವಿಚಿತ್ರ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಪತ್ನಿಯನ್ನು ತೊರೆದು ಪರಾರಿಯಾದವನ ಹೆಸರು ವಿಜಯ್ ಜಾರ್ಜ್. ಈತ ಮಾಜಿ ಪ್ರೇಯಸಿಯ ಬೆದರಿಕೆಗೆ ಹೆದರಿ ಪತ್ನಿಯನ್ನು ತೊರೆದು ಓಡಿದ್ದಾನೆಂದು ತಿಳಿದುಬಂದಿದೆ. ಈ ಘಟನೆ ಫೆ.16ರಂದು ನಡೆದಿದೆ. ಆದರೆ ಇದೀಗ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮದುವೆ ನಡೆದ ಮರುದಿನವೇ ಈ ಘಟನೆ ಮಹದೇವಪುರದಲ್ಲಿ ನಡೆದಿದೆ. ಮದುವೆ ಮರುದಿನ ದಂಪತಿ ಚರ್ಚ್‌ಗೆ ಹೋಗಿ ಮನೆಗೆ ಮರಳುತ್ತಿದ್ದರು. ಈ ಸಂದರ್ಭ ಕಾರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದೆ. ಆಗ ಕಾರಿನಿಂದ ಕೆಳಗೆ ಇಳಿದ ಜಾರ್ಜ್ ಎಸ್ಕೆಪ್ ಆಗಿದ್ದು, ಆತನಿಗಾಗಿ ಪೊಲೀಸರು ಕಳೆದ ಎರಡು ವಾರಗಳಿಂದ ಹುಡುಕಾಟ ನಡೆಸುತ್ತಿದ್ದಾರೆ.

ವಿಜಯ್, ಈ ಹಿಂದೆ ಮಹಿಳೆಯೊಬ್ಬರೊಂದಿಗೆ ಸಂಬಂಧ ಇಟ್ಟುಕೊಂಡಿದ್ದ. ಈಕೆ ಆತನ ತಂದೆಯ ಕಂಪೆನಿಯಲ್ಲಿ ಕೆಲಸ ಮಾಡುವ ಆಟೋ ಚಾಲಕನ ಪತ್ನಿಯೊಂದಿಗೆ ಲವ್ವೀಡವ್ವಿ ಇಟ್ಟುಕೊಂಡಿದ್ದ. ಮಹಿಳೆಗೆ ಇಬ್ಬರು ಮಕ್ಕಳಿದ್ದು ಅದೇ ಕಂಪೆನಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಳು.

ಆದರೆ ಇವರಿಬ್ಬರ ಸಂಬಂಧದ ಬಗ್ಗೆ ಕುಟುಂಬಕ್ಕೆ ತಿಳಿಯಿತೋ ಆಗ ಸಂಬಂಧವನ್ನು ಮುರಿದುಕೊಂಡು ಮದುವೆಯಾಗಲು ಜಾರ್ಜ್ ನಿರ್ಧಾರ ಮಾಡಿದ್ದ. ಮದುವೆಗೂ ಮುನ್ನ ವಿಜಯ್, ತನ್ನ ತಪ್ಪಿನ ಬಗ್ಗೆಯೂ ಪತ್ನಿಗೆ ಹೇಳಿಕೊಂಡಿದ್ದ. ಆಕೆ ಎಲ್ಲವನ್ನು ಕ್ಷಮಿಸಿ ಮದುವೆ ಆಗಿದ್ದಳು. ಆದರೆ, ಇದೀಗ ಮಾಜಿ ಪ್ರೇಯಸಿ ಬೇರೊಬ್ಬಳನ್ನು ಮದುವೆಯಾದರೆ, ಖಾಸಗಿ ಫೋಟೋ ಮತ್ತು ವೀಡಿಯೋಗಳನ್ನು ಹರಿಬಿಡುವುದಾಗಿ  ಬೆದರಿಸುತ್ತಿದ್ದಳು. ಇದರಿಂದ ಜಾರ್ಜ್ ಬಹಳ ಒತ್ತಡಕ್ಕೆ ಸಿಲುಕಿದ್ದ.

ಆದ್ದರಿಂದ ಚರ್ಚ್‌ನಿಂದ ಮನೆಗೆ ಬರುವಾಗ ಕಾರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿತು. ಈ ವೇಳೆ ಜಾರ್ಜ್ ಕಾರಿನ ಬಾಗಿಲು ತೆರೆದು ಓಡಿ ಹೋದ. ಇದನ್ನು ನೋಡಿ ಪತ್ನಿ ಆಘಾತಕ್ಕೆ ಒಳಗಾಗಿದ್ದಾಳೆ. ಆತನನ್ನು ಹಿಂಬಾಲಿಸಲು ಯತ್ನಿಸಿದರೂ ಆತ ಸಿಗಲಿಲ್ಲ. ಆದರೂ ವಿಜಯ್ ಜಾರ್ಜ್ ಪರವಾಗಿರುವ ಪತ್ನಿ ಆತ ಸುರಕ್ಷಿತವಾಗಿದ್ದಾರೆ ಮತ್ತು ಮರಳಿ ಬರುತ್ತಾರೆ ಎಂದು ನಿರೀಕ್ಷೆಯಲ್ಲಿದ್ದಾಳೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article