ಉಳ್ಳಾಲ: ದುಷ್ಕರ್ಮಿಗಳಿಂದ ಯುವಕನಿಗೆ ಚೂರಿ ಇರಿತ


ಉಳ್ಳಾಲ: ಇಬ್ಬರು ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದು ಯುವಕನೋರ್ವನ ಕೊಲೆಗೆತ್ನಿಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಪುರದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.

ಕೋಟೆಪುರ ನಿವಾಸಿ ಸದಕತುಲ್ಲಾ (34)  ಚೂರಿ ಇರಿತಕ್ಕೆ ಒಳಗಾದವರು‌. ಛಬ್ಬಿ ಅಲಿಯಾಸ್ ಕಬೀರ್ ಹಾಗೂ ರಾಝಿಕ್ ಎಂಬವರು ಕೃತ್ಯ ಎಸಗಿದ ಆರೋಪಿಗಳು ಎನ್ನಲಾಗಿದೆ.

ಕಳೆದ ರಾತ್ರಿ ಮನೆಯಲ್ಲಿದ್ದ ಸದಕತುಲ್ಲಾರನ್ನು ಹೊರಗೆ ಕರೆಸಿದ ಆರೋಪಿಗಳು ಚೂರಿಯಿಂದ ಅವರ ಹೊಟ್ಟೆಯ ಭಾಗಕ್ಕೆ ಇರಿದು ಪರಾರಿಯಾಗಿದ್ದಾರೆನ್ನಲಾಗಿದೆ. ಹಲ್ಲೆ ಆರೋಪಿಗಳು ಮತ್ತು ಸದಕತುಲ್ಲಾ ನಡುವೆ ಹಳೆ ವೈಷಮ್ಯವಿದ್ದು, ಇದೇ ಕಾರಣಕ್ಕೆ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu