ಕಾಸರಗೋಡು: 25ನೇ ವಿವಾಹದ ಸಿದ್ಧತೆಯಲ್ಲಿದ್ದ ಕಾಸರಗೋಡಿನ ತಳಿಪರಂಬ ನಿವಾಸಿ ವ್ಯಕ್ತಿಗೆ ನಾಗರಿಕರೇ ಹಲ್ಲೆ ಮಾಡಿ ಪೊಲೀಸರಿಗೊಪ್ಪಿಸಿರುವ ಘಟನೆ ನಡೆದಿದೆ.
50ರ ಹರೆಯದ ಈ ವ್ಯಕ್ತಿ ಈಗಾಗಲೆ 24 ವಿವಾಹವಾಗಿದ್ದಾನೆ. ಆದರೆ 25ನೇ ವಿವಾಹದ ಸಿದ್ಧತೆ ನಡೆಸುತ್ತಿರುವ ವೇಳೆ ವಿಚಾರ ಬಯಲಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಶ್ರೀಮಂತನಾಗಿರುವ ಈತ ಏಜೆಂಟ್‌ಗಳ ಸಹಕಾರದಿಂದ ಬಡ ಕುಟುಂಬದ ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಮದುವೆಯಾದ ಯುವತಿಯರಿಗೆ ಮನೆಯನ್ನೂ ಮಾಡಿ ಕೊಡುತ್ತಿದ್ದ. ಈ ಮಧ್ಯೆ ಯುವತಿ ಸಹೋದರನೆಂದು ತಿಳಿಸಿ ತೊಕ್ಕೊಟ್ಟಿನ ವ್ಯಕ್ತಿಯೊಬ್ಬ ಯುವತಿಯನ್ನು ಪರಿಚಯಿಸಿದ್ದಾನೆ. ಮದುವೆಗೆ ದಿನವನ್ನೂ ನಿಗದಿಪಡಿಸಲಾಗಿತ್ತು.
ಮದುವೆ ದಿನ ಸಮೀಪಿಸುತ್ತಿದ್ದಂತೆ ಈತನ ಬಗ್ಗೆ ಸಂಶಯಗೊಂಡ ಕೆಲವರು ವಿಚಾರಣೆಗೊಳಪಡಿಸಿದ್ದಾರೆ. ಆಗ ಈತನ ಮದುವೆ ಪುರಾಣ ಬಯಲಾಗಿದೆ. ಆದರೆ, ಲಿಖಿತ ದೂರು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿ ಆ ವ್ಯಕ್ತಿಯನ್ನು ಕಳುಹಿಸಿಕೊಡಲಾಗಿದೆ.