ಪತಿ ಅರೆಸ್ಟ್ ಆಗುತ್ತಿದ್ದಂತೆ ಕುಸಿದು ಬಿದ್ದ ರಾಖಿ ಸಾವಂತ್



ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ತನ್ನ ಪತಿ ಆದಿಲ್ ದುರಾನಿಗೆ ಅಕ್ರಮ ಸಂಬಂಧ ಇರುವುದಾಗಿ ಆತನ ವಿರುದ್ಧ ಪೊಲೀಸ್ ದೂರು ನೀಡಿರುವುದು ಸುದ್ದಿಯಾಗಿತ್ತು. ಇದೀಗ ತಮ್ಮ ಪತಿ ಆದಿಲ್ ದುರಾನಿ ಅರೆಸ್ಟ್ ಆಗುತ್ತಿದ್ದಂತೆಯೇ ರಾಖಿ ಸಾವಂತ್ ಮಾಧ್ಯಮದವರ ಮುಂದೆ ಕುಸಿದು ಬಿದ್ದಿದ್ದಾರೆ.

ರಾಖಿ ಸಾವಂತ್ ಕಳೆದ ವಾರ ತಮ್ಮ ಪತಿಯ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹೊರಿಸಿದ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ವರದಕ್ಷಿಣೆ ಕೇಸ್‌ನೊಂದಿಗೆ ಕಳವು ಆರೋಪವನ್ನೂ ಹೊರಿಸಿದ್ದರು. ಈ ಹಿನ್ನೆಲೆಯಲ್ಲಿ ಓಶಿವಾರಾ ಪೊಲೀಸ್ ನವರು ಆದಿಲ್‌ನನ್ನು ಬಂಧಿಸುತ್ತಿದ್ದಂತೆ, ಇತ್ತ ರಾಖಿ ಮೂರ್ಛೆ ಹೋಗಿದ್ದಾರೆ.

ಬುಧವಾರ ಮಾಧ್ಯಮದವರನ್ನು ರಾಖಿಯ ಭೇಟಿಯಾಗಿ ಆದಿಲ್‌ನಿಂದ ತನಗೆ ಏನೆಲ್ಲಾ ಆಗಿದೆ ಎಂದು ಹೇಳಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡಿದ ಮೇಲೆ ಆದಿಲ್, ಇಡೀ ದಿನ ರಾಖಿಗೆ ಪೋನ್ ಮಾಡುತ್ತಿದ್ದರಂತೆ. ಇದನ್ನೆಲ್ಲ ವಿವರಿಸುವಾಗ, ರಾಖಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಹತ್ತಿರದ ಕಾರ್‌ನಲ್ಲಿ ಕೂರಿಸಿ, ನೀರು ಕುಡಿಸಿದಾಗ ಅವರು ಎದ್ದು ಕುಳಿತಿದ್ದಾರೆ.

ರಾಖಿ ಇದಕ್ಕೂ ಮುನ್ನ ರಿತೇಶ್ ಎಂಬವರನ್ನು ವಿವಾಹವಾಗಿದ್ದರು. ಇಬ್ಬರೂ 'ಬಿಗ್ ಬಾಸ್ 15' ಕಾರ್ಯಕ್ರಮದ ಸ್ಪರ್ಧಿಗಳಾಗಿದ್ದರು. ಆದರೆ, ಕಾರಣಾಂತರಗಳಿಂದ ಕಳೆದ ವರ್ಷ ದೂರವಾಗಿದ್ದರು. ಅದಾದ ಬಳಿಕ ಮೈಸೂರು ಮೂಲದ ಆದಿಲ್ ಎಂಬಾತನನ್ನು ರಾಖಿ ಮದುವೆಯಾಗಿದ್ದು, ಈಗ ಆ ಮದುವೆಯೂ ಮುರಿದುಬಿದ್ದಿದೆ.
BREAKING NEWS
Loading latest news...
Join our WhatsApp Channel Powered By : Online Pudu