-->

ಆರ್ ಸಿಬಿ 'ಸ್ಮೃತಿ ಮಂದನಾ'ರಷ್ಟು ಸಂಭಾವನೆ ಪಾಕ್ ನಾಯಕ ಬಾಬರ್ ಗಿಲ್ಲ: ಮೀಮ್ಸ್, ಟ್ರೋಲ್ ಮಾಡಿ ಕಾಲೆಳೆದ ನೆಟ್ಟಿಗರು

ಆರ್ ಸಿಬಿ 'ಸ್ಮೃತಿ ಮಂದನಾ'ರಷ್ಟು ಸಂಭಾವನೆ ಪಾಕ್ ನಾಯಕ ಬಾಬರ್ ಗಿಲ್ಲ: ಮೀಮ್ಸ್, ಟ್ರೋಲ್ ಮಾಡಿ ಕಾಲೆಳೆದ ನೆಟ್ಟಿಗರು


ನವದೆಹಲಿ: ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನ ಹರಾಜು ಪ್ರಕ್ರಿಯೆ ಫೆಬ್ರವರಿ 13ರಂದು ನಡೆದಿದೆ. ಈ ಪ್ರಕ್ರಿಯೆಯಲ್ಲಿ 3.4 ಕೋಟಿ ರೂ. ದಾಖಲೆಯ ಮೊತ್ತಕ್ಕೆ ಆರ್‌ಸಿಬಿ ತಂಡದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ಪಾತ್ರರಾಗಿ ದುಬಾರಿ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಮೆರೆದಿದ್ದಾರೆ. 

ಇದಕ್ಕಾಗಿ ಸೆಲೆಬ್ರಿಟಿಗಳು ಸೇರಿದಂತೆ ತಂಡದ ಸಹ ಆಟಗಾರರು ಸ್ಮೃತಿ ಮಂದನಾಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಆದರೆ ಇದೀಗ ಸ್ಮೃತಿ,  ಡಬ್ಲ್ಯುಪಿಎಲ್‌ಗೆ ಪಡೆದಿರುವ ಭಾರೀ ಸಂಭಾವನೆ ಪಾಕಿಸ್ತಾನ ನಾಯಕ ಬಾಬರ್ ಅಜಾಮ್ ವಿರುದ್ಧದ ಮೀಮ್ಸ್ ಹಾಗೂ ಟ್ರೋಲ್ಸ್‌ಗೆ ಕಾರಣವಾಗಿದೆ. ಬಾಬರ್ ಮತ್ತು ಸ್ಮೃತಿ ಅವರನ್ನು ಹೋಲಿಕೆ ಮಾಡಿ ಬಾಬರ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಬಾಬರ್ ಅಜಾಮ್ ಪಾಕ್ ತಂಡದ ನಾಯಕನಲ್ಲದೆ, ವಿಶ್ವದ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್)ನಲ್ಲಿ 2.30 ಕೋಟಿ ರೂ.ಗೆ ಬಿಕರಿಯಾಗುವ ಮೂಲಕ ಪಿಎಸ್‌ಎಲ್‌ನ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ, ಬಾಬರ್‌ಗಿಂತ ನಮ್ಮ ಸ್ಮೃತಿ ಮಂದನಾಗೆ ಅಧಿಕ ಸಂಭಾವನೆ ದೊರಕಿದೆ. ಹಣದ ಮೊತ್ತದ ವಿಚಾರದಲ್ಲಿ ಸ್ಮೃತಿಯವರ ಹತ್ತಿರಕ್ಕೂ ಬಾಬರ್ ಸುಳಿದಿಲ್ಲ. ಆದ್ದರಿಂದ ಮಹಿಳಾ ಪ್ರೀಮಿಯರ್ ಲೀಗ್‌ಅನ್ನು ಸಹ ಪಿಎಸ್ಎಲ್ ಮೀರಿಸುತ್ತಿಲ್ಲ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ದೊರಕುವ ಸಂಭಾವನೆ ಕೂಡ ಪಾಕ್ ಕ್ರಿಕೆಟಿಗರಿಗೆ ಸಿಗುತ್ತಿಲ್ಲ ಎಂದು ನೆಟ್ಟಿಗರು ಕಿಚಾಯಿಸಿದ್ದಾರೆ.

ಅಂದಹಾಗೆ ಈ ಡಬ್ಲ್ಯೂಪಿಎಲ್ ಮಾರ್ಚ್ 4ರಿಂದ 26ರವರೆಗೆ ನಡೆಯಲಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article