ಕಜಕಿಸ್ತಾನದಲ್ಲಿ ಏಷ್ಯನ್ ಇಂಡೋರ್ ಚಾಂಪಿಯನ್‌ಶಿಪ್- ALVAS ಹಳೆ ವಿದ್ಯಾರ್ಥಿನಿ ಅಭಿನಯ ಶೆಟ್ಟಿ ಆಯ್ಕೆ

 


ವಿದ್ಯಾಗಿರಿ (ಮೂಡುಬಿದಿರೆ): ಕಜಕಿಸ್ತಾನದ ಅಸ್ತಾನದಲ್ಲಿ ಫೆ.10ರಿಂದ 12 ವರೆಗೆ ನಡೆಯಲಿರುವ ಏಷ್ಯನ್ ಇಂಡೋರ್(ಒಳಾಂಗಣ) ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ 25 ಮಂದಿ ಅಥ್ಲೀಟ್‌ಗಳ ತಂಡಕ್ಕೆ ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿ, ಹೈಜಂಪರ್ ಅಭಿನಯ ಎಸ್. ಶೆಟ್ಟಿ ಆಯ್ಕೆಯಾಗಿದ್ದಾರೆ. 

ಕಾರ್ಕಳದ ಅಭಿನಯ ಅವರು, ಆಳ್ವಾಸ್ ಕಾಲೇಜಿನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಯೋಜನೆ ಅಡಿಯಲ್ಲಿ 8ನೇ ತರಗತಿಯಿಂದ ಪದವಿ ವರೆಗೆ ಶಿಕ್ಷಣ ಪಡೆದಿದ್ದರು. ಪ್ರಸ್ತುತ ಮುಂಬೈಯಲ್ಲಿ ಪಶ್ಚಿಮ ವಲಯ ರೈಲ್ವೆ ಉದ್ಯೋಗಿಯಾಗಿದ್ದಾರೆ. ಏಕಲವ್ಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಅಭಿನಯ ಅವರ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ. 

ಈಚೆಗೆ ನಡೆದ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಹೈಜಂಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದರು. ಜೆಎಸ್‌ಡಬ್ಲ್ಯೂ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.