ಮಿಥುನ ರಾಶಿ
ಶನಿದೇವನ ಸಂಪೂರ್ಣ ಅಸ್ತ ನಿಮ್ಮ ಪಾಲಿಗೆ ಹಾನಿಕಾರಕವೆಂದು ಸಾಬೀತಾಗಲಿದೆ. ಶನಿದೇವನು ಮಿಥುನ ಲಗ್ನದಲ್ಲಿ ನವಮೇಶ ಮತ್ತು ಅಷ್ಟಮೇಶನಾಗಿದ್ದಾನೆ. ಅಂದರೆ ಆತ ಪಿತೃ ಮತ್ತು ಆರೋಗ್ಯ ಕಾರಕನಾಗಿದ್ದಾನೆ ಎಂದರ್ಥ. ಹೀಗಾಗಿ ಅನಾರೋಗ್ಯ ಪೀಡಿತರು ಹಾಗೂ ಆಸ್ಪತ್ರೆಗೆ ದಾಖಲಾಗಿರುವವರಿಗೆ ಸಾಕಷ್ಟು ಕಾಳಜಿಯ ಅಗತ್ಯತೆ ಇದೆ.
ಕರ್ಕ ರಾಶಿ
ಶನಿ ದೇವನ ಸಂಪೂರ್ಣ ಅಸ್ತ ಕರ್ಕ ರಾಶಿಯವರಿಗೆ ಪ್ರತಿಕೂಲ ಎಂದು ಸಾಬೀತಾಗಲಿದೆ. ಶನಿ ನಿಮ್ಮ ಜಾತಕದ ಸಪ್ತಮೇಶ ಹಾಗೂ ಅಷ್ಟಮೇಶ. ಇದಲ್ಲದೆ ಶನಿ ನಿಮ್ಮ ಜಾತಕದ ಮಾರ್ಕೇಶ ಕೂಡ ಹೌದು. ಆದ್ದರಿಂದಲೇ ಈ ಪರಿಸ್ಥಿತಿ ನಿಮಗೆ ಒಳ್ಳೆಯದಲ್ಲ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕು ಎಂದರ್ಥ.
ಮಕರ ರಾಶಿ
ಶನಿದೇವನ ಸಂಪೂರ್ಣ ಅಸ್ತ ನಿಮಗೆ ಹಾನಿಕಾರಕವೆಂದು ಸಾಬೀತಾಗುವ ಸಾಧ್ಯತೆ ಇದೆ. ಶನಿದೇವ ನಿಮ್ಮ ಲಗ್ನ ಭಾವಕ್ಕೆ ಅಧಿಪತಿ. ಹೀಗಾಗಿ ಈ ಅವಧಿಯಲ್ಲಿ ನೀವು ಜ್ವರದಿಂದ ಬಳಲುವ ಸಾಧ್ಯತೆ ಇದೆ. ಇದೇ ವೇಳೆ ಸಂಗಾತಿಯೊಂದಿಗೆ ಯಾವುದಾದರೊಂದು ವಿಷಯಕ್ಕೆ ಸಂಬಂಧಿಸಿದಂತೆ ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ.