-->

ಚಿಕನ್, ಗೀರೈಸ್ ತಿಂದು ಎಡವಟ್ಟು : ಮಂಗಳೂರಿನ 137ಕ್ಕೂ ಅಧಿಕ ವಿದ್ಯಾರ್ಥಿನಿಯರು ಆಸ್ಪತ್ರೆಗೆ

ಚಿಕನ್, ಗೀರೈಸ್ ತಿಂದು ಎಡವಟ್ಟು : ಮಂಗಳೂರಿನ 137ಕ್ಕೂ ಅಧಿಕ ವಿದ್ಯಾರ್ಥಿನಿಯರು ಆಸ್ಪತ್ರೆಗೆ


ಮಂಗಳೂರು: ಹಾಸ್ಟೆಲ್ ನಲ್ಲಿ ಮಾಡಲಾಗಿದ್ದ ಚಿಕನ್ ಗೀ ರೈಸ್ ತಿಂದು 150ಕ್ಕೂ ಅಧಿಕ ಮಂದಿ ವಿದ್ಯಾರ್ಥಿನಿಯರು ಅಸ್ತಸ್ಥರಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಸಿಟಿ ನರ್ಸಿಂಗ್ ಕಾಲೇಜಿನ ಪ್ಯಾರಾಮೆಡಿಕಲ್ ನ ಶಕ್ತಿನಗರದ ಹಾಸ್ಟೆಲ್‌ನಲ್ಲಿ ಈ ವಿದ್ಯಾರ್ಥಿನಿಯರು ವಾಸ್ತವ್ಯವಿದ್ದರು. ಸೋಮವಾರ ರಾತ್ರಿ ಹಾಸ್ಟೆಲ್ ನಲ್ಲಿ ಮಾಡಲಾಗಿದ್ದ ಚಿಕನ್ ಗೀ ರೈಸ್ ಅನ್ನು ವಿದ್ಯಾರ್ಥಿನಿಯರು ಸೇವಿಸಿದ್ದರು. ಆದರೆ ಸೋಮವಾರ ಮುಂಜಾನೆ 3 ಗಂಟೆಯ ವೇಳೆಗೆ ವಿದ್ಯಾರ್ಥಿನಿಯರಲ್ಲಿ ಹೊಟ್ಟೆನೋವು, ವಾಂತಿ-ಭೇಧಿ ಕಾಣಿಸಿಕೊಂಡಿದೆ.

ಅನೇಕ ವಿದ್ಯಾರ್ಥಿನಿಯರು ಇಂದು ಕಾಲೇಜಿಗೆ ಗೈರು ಹಾಜರಾದ ಪರಿಣಾಮ ಫುಡ್ ಪಾಯಿಸನ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಬಹಳಷ್ಟು ಸಂಖ್ಯೆಯಲ್ಲಿ ವಿಷಾಹಾರ ಸೇವೆನೆಯಾಗಿರೋದು ವಿದ್ಯಾರ್ಥಿನಿಯರ ಹೆತ್ತವರಲ್ಲೂ ಆತಂಕ ತರಿಸಿದೆ. ಹೀಗಾಗಿ ರಾತ್ರಿ ಎಂಟು ಗಂಟೆಯ ವೇಳೆಗೆ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರ ಹೆತ್ತವರು ದೊಡ್ಡ ಸಂಖ್ಯೆಯಲ್ಲಿ ಸಿಟಿ ಆಸ್ಪತ್ರೆ ಮುಂಭಾಗ ಜಮಾಯಿಸಿ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾತನಾಡಿ, ಘಟನೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ..ಪ್ಯಾರಾ ಮೆಡಿಕಲ್ ನ ವಿದ್ಯಾರ್ಥಿನಿಯರು ಶಕ್ತಿನಗರದ ಹಾಸ್ಟೆಲ್‌ನಲ್ಲಿ ಸೋಮವಾರ ಸಂಜೆ ಆಹಾರ ಸೇವಿಸಿದ್ದಾರೆ. ಆದರೆ ಮುಂಜಾನೆ ಎರಡು ಗಂಟೆಯಿಂದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದೆ. ಪರಿಣಾಮ ಇವರು ಕಾಲೇಜುಗಳಿಗೆ ಗೈರು ಹಾಜರಾಗಿದ್ದರು.

ಫುಡ್ ಪಾಯಿಸನ್ ಆಗಿರುವ ವಿಚಾರ ತಿಳಿದು ಇತರ ವಿದ್ಯಾರ್ಥಿಗಳು, ಹೆತ್ತವರು ಆತಂಕಗೊಂಡಿದ್ದರು. ಪರಿಣಾಮ ಸಿಟಿ ವಿದ್ಯಾರ್ಥಿನಿಯರ ಆಸ್ಪತ್ರೆಯ ಮುಂಭಾಗ 400ಕ್ಕೂ ಅಧಿಕ ವಿದ್ಯಾರ್ಥಿಗಳು, ಹೆತ್ತವರು ಜಮಾಯಿಸಿದ್ದಾರು‌. ಸದ್ಯ 137 ಮಂದಿ ವಿದ್ಯಾರ್ಥಿನಿಯರನ್ನು ನಗರದ 6 ಖಾಸಗಿ ಆಸ್ಪತ್ರೆ ಗಳಿಗೆ ದಾಖಲುಪಡಿಸಲಾಗಿದೆ. ಬೆಳಗ್ಗೆ ಘಟನೆಯಾದರೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿಲ್ಲ. ಆಹಾರ ತಿಂದು ಸ್ವಲ್ಪ ಮಟ್ಟಿನ ಆರೋಗ್ಯ ಸಮಸ್ಯೆಯಾಗಿದೆ. ಬೇರೆ ಯಾವುದೇ ಗಂಭೀರ ಪ್ರಮಾಣದ ಆರೋಗ್ಯ ಏರುಪೇರು ಆಗಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ‌‌.

ಇನ್ನು ಜಿಲ್ಲಾ ಆರೋಗ್ಯ ಇಲಾಖೆ ಸರ್ವೇಕ್ಷಣಾಧಿಕಾರಿ ಡಾ.ಅಶೋಕ್ ಮಾತನಾಡಿ, ಹೆಚ್ಚಿನ ವಿದ್ಯಾರ್ಥಿನಿಯರಿಗೆ ಆರೋಗ್ಯ ಸಮಸ್ಯೆ ಆದ ಕಾರಣ ಎಲ್ಲಾ ವಿದ್ಯಾರ್ಥಿನಿಯರು ಭೀತಿಗೊಳಗಾಗಿದ್ದಾರೆ. ಡೀ ಹೈಡ್ರೇಷನ್ ಆಗಿದೆ‌‌. ಅಡ್ಮಿಟ್ ಆದ ವಿದ್ಯಾರ್ಥಿನಿಯರನ್ನು ಒಂದರೆಡು ಗಂಟೆಯಲ್ಲಿ ಬಿಡುಗಡೆ ಮಾಡುತ್ತೇವೆ‌‌. ಈಗಾಗಲೇ ಆಸ್ಪತ್ರೆಯ ತಜ್ಞ ವೈದ್ಯರು,ಹಾಸ್ಟೆಲ್‌ನ ಕುಕ್,ವಿದ್ಯಾರ್ಥಿನಿಯರ ಹೇಳಿಕೆ ಪಡೆಯುತ್ತೇವೆ.‌ಸದ್ಯ ಎಲ್ಲರ ಆರೋಗ್ಯ ವೂ ಸ್ಥಿರವಾಗಿದೆ.ವಿಷಾಹಾರ ಆಗಲು ಕಾರಣದ ಬಗ್ಗೆ ಇಂದೇ ತನಿಖೆ ನಡೆಸಿ ಆಹಾರವನ್ನು ಪರೀಕ್ಷೆ ಗೆ ಕಳುಹಿಸೋದಾಗಿ ಹೇಳಿದ್ದಾರೆ ಎಂದರು.

Ads on article

Advertise in articles 1

advertising articles 2

Advertise under the article