-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಸಾವಿರ ಮಂದಿಯ ಅಂಧತ್ವ ನಿವಾರಣೆಗೆ ಹಣದ ನೆರವು ಒದಗಿಸಿದ ಮಿ.ಬೀಸ್ಟ್: ಅಂಧರ ಬಾಳನ್ನು ಬೆಳಗಿದ ಪ್ರಖ್ಯಾತ ಯೂಟ್ಯೂಬರ್

ಸಾವಿರ ಮಂದಿಯ ಅಂಧತ್ವ ನಿವಾರಣೆಗೆ ಹಣದ ನೆರವು ಒದಗಿಸಿದ ಮಿ.ಬೀಸ್ಟ್: ಅಂಧರ ಬಾಳನ್ನು ಬೆಳಗಿದ ಪ್ರಖ್ಯಾತ ಯೂಟ್ಯೂಬರ್



ವಾಷಿಂಗ್ಟನ್:‌ ಯೂಟ್ಯೂಬ್ ನಲ್ಲಿ ಅತೀ ಹೆಚ್ಚು ಚಂದಾದಾರರನ್ನು ಪಡೆದಿರುವವರಲ್ಲಿ ಒಬ್ಬರಾಗಿರುವ 'ಮಿಸ್ಟರ್ ಬೀಸ್ಟ್‌ʼ‌ ಅಕಿಯಾಸ್ ಜಿಮ್ಮಿ ಡೊನಾಲ್ಡ್ಸನ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಇವರಿಗೆ ಯೂಟ್ಯೂಬ್ ನಲ್ಲಿ ಬರೋಬ್ಬರಿ 130 ಮಿಲಿಯನ್‌ ಸಬ್ಸಕ್ರೈಬರ್ಸ್ ಇದ್ದಾರೆ. ಈ ಮೂಲಕ ಇವರು ಯೂಟ್ಯೂಬ್ ಮೂಲಕ ಕೋಟಿ ಗಟ್ಟಲೆ ಸಂಪಾದನೆ ಮಾಡುತ್ತಾರೆ.

ಸದಾ ವಿಭಿನ್ನ ಕಂಟೆಂಟ್‌ ಗಳನ್ನು ಅಪ್ಲೋಡ್‌ ಮಾಡುವ ಮಿ.ಬೀಸ್ಟ್‌ ಇದೀಗ ಎಲ್ಲರೂ ಮೆಚ್ಚುವ ಕಾಯಕವೊಂದನ್ನು ಮಾಡಿದ್ದಾರೆ. ಈ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾಗಶಃ ಕುರುಡರು, ಕಣ್ಣಿನ ಪೊರೆಯಿಂದ ದೃಷ್ಟಿ ಕಳೆದುಕೊಂಡವರು. ಒಟ್ಟಿನಲ್ಲಿ ಅಂಧತ್ವದ ಸಮಸ್ಯೆಯಿಂದ ಬಳಲುತ್ತಿದ್ದ ಸಾವಿರ ಮಂದಿಗೆ ಮೊದಲ ಬಾರಿಗೆ ದೃಷ್ಟಿ ಕಾಣುವಂತೆ ಮಾಡಿದ್ದಾರೆ. ಮೊದಲು ಜಿಮ್ಮಿ ಡೊನಾಲ್ಡ್ಸನ್ ತಂಡ ಯಾರಿಗೆ ತಮ್ಮ ಕಣ್ಣಿನ ದೃಷ್ಟಿಯ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲದ ಸ್ಥಿತಿ ಇರುತ್ತದೋ ಅಂಥವರನ್ನು ಹುಡುಕಾಟ ನಡೆಸಿತ್ತು.

ಸೆಪ್ಟೆಂಬರ್‌ ನಲ್ಲಿ ಜಾಕ್ಸನ್‌ವಿಲ್ಲೆ ಮೂಲದ ನೇತ್ರಶಾಸ್ತ್ರಜ್ಞ ಮತ್ತು ಶಸ್ತ್ರಚಿಕಿತ್ಸಕ ಡಾ. ಜೆಫ್ ಲೆವೆನ್ಸನ್ ಜೊತೆಯಲ್ಲಿ ಈ ಬಗ್ಗೆ ಮಾತನಾಡುತ್ತಾರೆ. ಅದರಂತೆ ಸುಮಾರು 1000 ಮಂದಿಯ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಹಾಗೂ ಭಾಗಶಃ ಅಂಧತ್ವವುಳ್ಳವರಿಗೆ ದೃಷ್ಟಿ ನೀಡಲು ಮುಂದಾಗುತ್ತಾರೆ. ಅಷ್ಟು ಮಂದಿಯ ಹಣವನ್ನು ತಾವೇ ಪಾವತಿಸಿದ್ದಾರೆ.‌ ಅಲ್ಲದೆ ದೃಷ್ಟಿ ಪಡೆದ ಕೆಲ ಮಂದಿಗೆ ಮಿಸ್ಟರ್‌ ಮೀಸ್ಟ್‌ ಉಡುಗೊರೆಯನ್ನು ಸಹ ನೀಡಿ ಸಂತಸ ಪಡಿಸಿದ್ದಾರೆ. 

ಈ ಬಗ್ಗೆ ವೀಡಿಯೋ ಮಾಡಿ ಮಿ.ಬೀಸ್ಟ್‌ ಚಿಕಿತ್ಸೆ ಪಡೆದವರ ಮೊದಲ ಅನುಭವ, ಮೊದಲ ಬಾರಿ ಬೆಳಕನ್ನು ನೋಡುವ ಕ್ಷಣವನ್ನು ವೀಡಿಯೋ ಚಿತ್ರೀಕರಿಸಿದ್ದಾರೆ. ಈ ವೀಡಿಯೊವನ್ನು ಎರಡೇ ದಿನದಲ್ಲಿ 57 ಮಿಲಿಯನ್‌ ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಜಮೈಕಾ, ಹೊಂಡುರಾಸ್, ನಮೀಬಿಯಾ, ಮೆಕ್ಸಿಕೋ, ಇಂಡೋನೇಷ್ಯಾ, ಬ್ರೆಜಿಲ್, ವಿಯೆಟ್ನಾಂ ಮತ್ತು ಕೀನ್ಯಾ ಮುಂತಾದ ಕಡೆಯ ಮಂದಿ ಮೊದಲ ಬಾರಿ ದೃಷ್ಟಿಯನ್ನು ಪಡೆದುಕೊಂಡಿದ್ದಾರೆ.



Ads on article

Advertise in articles 1

advertising articles 2

Advertise under the article

ಸುರ