-->
ತನ್ನನ್ನು ಜೈಲಿಗೆ ಕಳುಹಿಸುವಂತಹ ಕಾನೂನು ಈವರೆಗೆ ರೂಪುಗೊಂಡಿಲ್ಲ

ತನ್ನನ್ನು ಜೈಲಿಗೆ ಕಳುಹಿಸುವಂತಹ ಕಾನೂನು ಈವರೆಗೆ ರೂಪುಗೊಂಡಿಲ್ಲ



ನವದೆಹಲಿ: ತನ್ನ ಅಂಗಾಂಗ ಪ್ರದರ್ಶಿಸುವ ಬಟ್ಟೆಗಳಿಂದಲೇ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್ ವಿರುದ್ಧ ಇತ್ತೀಚೆಗೆ ಮುಂಬೈನಲ್ಲಿ ದೂರು ದಾಖಲಾಗಿತ್ತು. ಅಲ್ಲದೆ ಅರೆಬೆತ್ತಲೆಯಾಗಿ ಫೋಟೋಶೂಟ್ ಮಾಡುತ್ತಿದ್ದ ಅವರನ್ನು ದುಬೈ ಪೊಲೀಸರು ಬಂಧಿಸಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಳ್ಳದ ದುಬೈ ಪೊಲೀಸರು ಬುದ್ಧಿ ಮಾತು ಹೇಳಿ ಕಳುಹಿಸಿದ್ದರು.

ಇಷ್ಟಾದರೂ ಸುಮ್ಮನಿರದ ಉರ್ಫಿ ಜಾವೇದ್ ಮತ್ತೆ ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಿದ್ದಾಳೆ. ತುಂಡುಡುಗೆಯನ್ನು ತೊಟ್ಟುಕೊಂಡು ಅಂಗಾಂಗ ಪ್ರದರ್ಶಿಸುವಂತೆ ವೀಡಿಯೋ ಮಾಡಿ ಅದನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದಾಳೆ. ಆದ್ದರಿಂದ ಬಿಜೆಪಿ ಸದಸ್ಯೆ ಚಿತ್ರಾ ವಾಫ್ ಎಂಬುವವರು ಉರ್ಫಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿ ಆಗ್ರಹಿಸಿದ್ದರು.


ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಉರ್ಫಿ ಕೆಂಡಾಮಂಡಲವಾಗಿದ್ದಾರೆ. ದೂರು ನೀಡಿದವರ ವಿರುದ್ಧವೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ. ತನ್ನನ್ನು ಜೈಲಿಗೆ ಕಳುಹಿಸುವಂತಹ ಯಾವುದೇ ಕಾನೂನು ಈವರೆಗೆ ರೂಪುಗೊಂಡಿಲ್ಲ ಎಂದು ಹೇಳಿಕೊಂಡಿದ್ದಾಳೆ. ಅಶ್ಲೀಲತೆ ಎನ್ನುವುದು ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತದೆ. ಇದುವರೆಗೆ ನಾನು ಅಶ್ಲೀಲವಾಗಿರುವಂತಹ ಯಾವುದೇ ಬಟ್ಟೆಯನ್ನು ಧರಿಸಿಲ್ಲ. ಈ ವಿಚಾರವನ್ನು ಅರ್ಥ ಮಾಡಿಕೊಳ್ಳದವರು ನನ್ನ ವಿರುದ್ಧ ದೂರು ನೀಡಿದ್ದಾರೆ ಎಂದು ಉರ್ಫಿ ಜಾವೇದ್ ಕಿಡಿಕಾರಿದ್ದಾಳೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article