-->
ಮಂಗಳೂರು: ತಣ್ಣೀರುಬಾವಿಯಲ್ಲಿ ಬಾಲಕನ ಮೇಲೆ ಲಾಠಿ ಬೀಸಿದ ಪೊಲೀಸ್ ಸಸ್ಪೆಂಡ್

ಮಂಗಳೂರು: ತಣ್ಣೀರುಬಾವಿಯಲ್ಲಿ ಬಾಲಕನ ಮೇಲೆ ಲಾಠಿ ಬೀಸಿದ ಪೊಲೀಸ್ ಸಸ್ಪೆಂಡ್


ಮಂಗಳೂರು: ನಗರದ ತಣ್ಣೀರುಬಾವಿ ಬೀಚ್ ರಸ್ತೆಯಲ್ಲಿ ಬ್ಲಾಕ್ ಆಗಿರುವುದಕ್ಕೆ ಕ್ರಿಕೆಟ್ ಆಟವಾಡಿ ಜಯಗಳಿಸಿ ಮೆರವಣಿಗೆ ಮಾಡಿರುವ ಯುವಕ ತಂಡವೇ ಕಾರಣವೆಂದು ಬಾಲಕನಿಗೂ ಸೇರಿದಂತೆ ಲಾಠಿ ಬೀಸಿದ ಪೊಲೀಸ್ ಕಾನ್ಸ್ ಟೇಬಲ್ ಅಮಾನತು ಆಗಿದ್ದಾರೆ.

ಪಣಂಬೂರು ಠಾಣಾ ಪೊಲೀಸ್ ಪೇದೆ ಸುನಿಲ್ ಅಮಾನತುಗೊಂಡವರು. ರವಿವಾರ ಘಟನೆ ನಡೆದಿದ್ದು,  ಪೊಲೀಸರು ಲಾಠಿ ಬೀಸಿರುವುದರಿಂದ ಆರನೇ ತರಗತಿಯ ಹಾಗೂ ಪಿಯುಸಿ ವಿದ್ಯಾರ್ಥಿಗೆ ಗಾಯಗಳಾಗಿತ್ತು. ಪರಿಣಾಮ ಪೊಲೀಸರ ವಿರುದ್ಧವೇ ಸ್ಥಳೀಯರು ಆಕ್ರೊಶಗೊಂಡಿದ್ದರು.


ವಾರಂತ್ಯ ದಿನವಾಗಿದ್ದರಿಂದ  ತಣ್ಣೀರುಬಾವಿ ಬೀಚ್ ನಲ್ಲಿ ಬೆಳಗ್ಗಿನಿಂದಲೂ ಜನದಟ್ಟಣೆ‌ ಅಧಿಕವಾಗಿತ್ತು. ರವಿವಾರ ಸಂಜೆ ಅಲ್ಲಿ ಕ್ರಿಕೆಟ್ ಆಡಿ ಬೈಕಿನಲ್ಲಿ ತೆರಳುತ್ತಿದ್ದ ಯುವಕರನ್ನು ಅಡ್ಡಗಟ್ಟಿದ ಪೊಲೀಸರು, ನಿಮ್ಮಿಂದಲೇ ಬ್ಲಾಕ್ ಆಗಿದೆಯೆಂದು ಅವರಿಗೆ ಲಾಠಿ ಬೀಸಿದ್ದಾರೆ.

ಈ ಲಾಠಿಯೇಟಿನಿಂದ ಆರನೇ ಕ್ಲಾಸ್ ವಿದ್ಯಾರ್ಥಿಯೊಬ್ಬನಿಗೆ ಗಂಭೀರ ಗಾಯಗೊಂಡಿದ್ದನು.  ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪಣಂಬೂರು ಪೊಲೀಸರ ಈ ದುರ್ವತನೆಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಪೊಲೀಸ್ ಕಮೀಷನರ್ ಪಣಂಬೂರು ಠಾಣಾ ಇನ್ ಸ್ಪೆಕ್ಟರ್ ಮೂಲಕ ವರದಿ ತರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದು, ಇದೀಗ ವರದಿ ಕೈಸೇರಿದ ಬಳಿಕ ಪೊಲೀಸ್ ಕಾನ್ಸ್ ಟೇಬಲ್ ಸುನಿಲ್ ನನ್ನು ಸಸ್ಪೆಂಡ್ ಮಾಡಿ ಆದೇಶಿಸಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article