-->
SSLC ಆದವರಿಗೆ ಅಂಚೆ ಇಲಾಖೆಯಲ್ಲಿ ಇವೆ  40889 ಹುದ್ದೆಗಳು- ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ

SSLC ಆದವರಿಗೆ ಅಂಚೆ ಇಲಾಖೆಯಲ್ಲಿ ಇವೆ 40889 ಹುದ್ದೆಗಳು- ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ

 



ಅಂಚೆ ಇಲಾಖೆಯಲ್ಲಿ ಗ್ರಾಮೀಣ ಅಂಚೆ ಸೇವಕರ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ


ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಸಂಬಂಧಿಸಿದಂತೆ ಅಂಚೆ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ  ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.  ಆನ್ ಲೈನ್ ಮೂಲಕ ನೇಮಕಾತಿ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  16-02- 2023 ಆಗಿರುತ್ತದೆ ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀ ಹರ್ಷ ಎನ್ ತಿಳಿಸಿದ್ದಾರೆ.


ಮಂಗಳೂರಿನಲ್ಲಿ ಮಾತನಾಡಿದ ಅವರು  ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಸಂಬಂಧಿಸಿದಂತೆ ಅಂಚೆ ಕಚೇರಿಯಲ್ಲಿ ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆಪಾಲಕ ಮತ್ತು ಢಾಕ್ ಸೇವಕ್ ಹುದ್ದೆಗಳಿಗೆ ಆನ್ ಲೈನ್‌ ಮೂಲಕ ನೇಮಕಾತಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-02-2023 ಆಗಿರುತ್ತದೆ. ಅರ್ಜಿಗಳನ್ನು ಆನ್‌ಲೈನ್‌ನಲ್ಲಿ https://indiapostodsonline.gov.in ಮೂಲಕ ಸಲ್ಲಿಸಬೇಕು, ಬೇರೆ ಯಾವುದೇ ವಿಧಾನದ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸಂಪೂರ್ಣ ಪ್ರಕ್ರಿಯೆಯು ಜುಲಾಯಿ 2023 ದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.





ಗ್ರಾಮೀಣ ಅಂಚೆ ಸೇವಕರ ನೇಮಕಾತಿಯು ಮೊದಲ ಬಾರಿಗೆ, ಅಖಿಲ ಭಾರತ ಮಟ್ಟದಲ್ಲಿ ಬೃಹತ್‌ ಸಂಖ್ಯೆಯ ಖಾಲಿ ಹುದ್ದೆಗಳೊಂದಿಗೆ ನಡೆಯುತ್ತಿದೆ. ಭಾರತದಾದ್ಯಂತ ಸೂಚಿಸಲಾದ ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ 40889, ಅದರಲ್ಲಿ 3036 ಕರ್ನಾಟಕಕ್ಕೆ ಸಂಬಂಧಿಸಿದೆ.


ಮಂಗಳೂರು ವಿಭಾಗದಲ್ಲಿ ಒಟ್ಟು 95 ಹುದ್ದೆಗಳು ಖಾಲಿ ಇದ್ದು ಆನ್ ಲೈನ್ ಮೂಲಕ ನೇಮಕಾತಿ ಪ್ರಕ್ರಿಯೆಯಲ್ಲಿ ತುಂಬಲ್ಪಡುತ್ತದೆ. ಈ ಹುದ್ದೆಗಳ ವಿವರಗಳನ್ನು ಅನುಬಂಧ 1 ರಲ್ಲಿ ನೀಡಲಾಗಿದೆ.


ಗ್ರಾಮೀಣ ಅಂಚೆ ಸೇವಕ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಕ್ಷಿಪ್ತ ಮಾಹಿತಿ ಕೆಳಗಿನಂತಿದೆ. ಶಾಖಾ ಅಂಚೆ ಪಾಲಕ (BPM) : ಗ್ರಾಮಾಂತರ ಪ್ರದೇಶದಲ್ಲಿ ಮತ್ತು ಕೆಲವು ಪಟ್ಟಣ ಪ್ರದೇಶದಲ್ಲಿ ಶಾಖಾ ಅಂಚೆ ಕಚೇರಿಗಳಿದ್ದು ಶಾಖಾ ಅಂಚೆ ಪಾಲಕರು ಅದರ ಮುಖ್ಯಸ್ಥರಾಗಿರುತ್ತಾರೆ, ಶಾಖಾ ಅಂಚೆ ಪಾಲಕರು ಅಂಚೆ ಸೇವೆಗಳಿಗೆ ಸಂಬಂಧಿಸಿದಂತ ಅಂಚೆ ಇಲಾಖೆಯಿಂದ ನೀಡಲ್ಪಡುವ ಯೋಜನೆಗಳು ಗ್ರಾಮೀಣ ಅಂಚೆ ಜೀವ ವಿಮೆ, ಅಂಚೆ ಜೀವ ವಿಮೆ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, ರಿಜಿಸ್ಟರ್/ಸ್ಪೀಡ್ ಪೋಸ್ಟ್ ಕಳುಹಿಸುವುದು, ಪತ್ರಗಳ ರವಾನೆ ಹೀಗೆ ವಿವಿಧ ಅಂಚೆ ಸೇವೆಗಳನ್ನು 4 ಅಥವ 5 ಗಂಟೆಗಳ ವರೆಗೆ ಸಾರ್ವಜನಿಕರಿಗೆ ನೀಡುವ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ.


ಸಹಾಯಕ ಅಂಚೆಪಾಲಕ (ABPM) : ಅವರ ಮುಖ್ಯವಾದ ಉದ್ಯೋಗ ಬಟವಾಡೆಗೆ ಸಂಬಂಧಿಸಿದ್ದಾಗಿರುತ್ತದೆ. ರಿಜಿಸ್ಟರ್ಡ್ ಪತ್ರಗಳು/ಸ್ಟೀಡ್ ಪೋಸ್ಟ್ ಗಳು, ಮನಿ ಆರ್ಡರ್ ಗಳನ್ನು ಮನೆ ಮನೆಗೆ ಬಟವಾಡೆ ಮಾಡುವ ಜವಾಬ್ದಾರಿ ಇವರದ್ದಾಗಿರುತ್ತದೆ, ಜೊತೆಯಲ್ಲಿ ಹೊಸ ಗ್ರಾಮೀಣ ಅಂಚೆ ಜೀವ ವಿಮೆ ಪಾಲಿಸಿಗಳನ್ನು ಮಾಡಿಸುವುದು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ ಖಾತೆಗಳನ್ನು ತೆರೆಯುವುದು, ಮನೆ ಮನೆಗಳಿಗೆ ಬ್ಯಾಂಕಿಗ್‌ ಸೌಲಭ್ಯ ಹೀಗೆ ಹಲವಾರು ಜವಾಬ್ದಾರಿಗಳು ಇವರದ್ದಾಗಿರುತ್ತದೆ.


ಡಾಕ್ ಸೇವಕ್ (DS) : ಈ ಹುದ್ದೆಯಲ್ಲಿ ಇವರು ಉಪ ಅಂಚೆ ಕಚೇರಿಗಳಲ್ಲಿ ಪ್ಯಾಕರ್ ಹುದ್ದೆಗಳನ್ನು ನಿರ್ವಹಿಸಬೇಕಾಗುತ್ತದೆ, ಮತ್ತು ಆಯಾ ಅಂಚೆ ಕಚೇರಿಗಳಿಗಿರುವ ಉಪ ಅಂಚೆ ಪಾಲಕರಿಗೆ ಕಚೇರಿಯ ನಿರ್ವಹಣೆಯಲ್ಲಿ ಹಾಗೂ ವ್ಯವಹಾರ ಅಭಿವೃದ್ಧಿಯಲ್ಲಿ ಸಹಕರಿಸುವ ಕೆಲಸವನ್ನು ಡಾಕ್ ಸೇವಕರು ಹೊಂದಿರುತ್ತಾರೆ.


ಗ್ರಾಮೀಣ ಅಂಚೆ ಸೇವಕರು ಸಿವಿಲ್ ಪೋಸ್ಟ್‌ಗಳನ್ನು ಹೊಂದಿದ್ದರೂ ಅವರು ಯೂನಿಯನ್ ಆಫ್ ಇಂಡಿಯಾದ ನಿಯಮಿತ ಸಿವಿಲ್ ಸೇವೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ. ಅವರು ದಿನಾಂಕ 14.02.2020ರ ಅದೇಶ ಸಂಖ್ಯೆ: 17-30/2019 GDS ರ ಪ್ರಕಾರ ನಿರ್ಧರಿಸಲಾದ GDS (Conduct and Engagement) Rules, 2020 (ಕಾಲಕಾಲಕ್ಕೆ ತಿದ್ದುಪಡಿಗೊಳಪಟ್ಟಂತೆ) ನಿಯಮಗಳಿಂದ ನಿಯಂತ್ರಿಸಲ್ಪಡುತ್ತಾರೆ. ಈ ಅದೇಶವು www.indiapost.gov.in ನಲ್ಲಿ ಲಭ್ಯವಿದೆ.


ಭತ್ಯೆಗಳು : ಶಾಖಾ ಅಂಚೆ ಪಾಲಕರಲ್ಲಿ 4 ಗಂಟೆಗಳ ಶಾಖಾ ಅಂಚೆ ಕಚೇರಿಗಳು ಮತ್ತು 5 ಗಂಟೆಗಳ ಶಾಖಾ ಅಂಚೆ ಕಚೇರಿಗಳು ಎಂಬ ಎರಡು ವಿಧಗಳಿದ್ದು ನಾಲ್ಕು ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ ರೂ 12000/- ಭತ್ಯೆ ಮೂಲ ವೇತನ ಮತ್ತೆ ತುಟ್ಟಿ ಭತ್ಯೆ ಹಾಗೂ ಇತರೆ ವೇತನಗಳು ಮತ್ತು 5 ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ ರೂ 14500/- ಭತ್ಯೆ ಮೂಲ ವೇತನ ಹಾಗೂ ತುಟ್ಟಿ ಭತ್ಯ,ಇತರ ವೇತನಗಳು ಲಭಿಸುತ್ತದೆ.


ಉಪ ಶಾಖಾ ಅಂಚೆ ಪಾಲಕರು ಹಾಗೂ ಢಾಕ್ ಸೇವಕ್ ಹುದ್ದೆಗಳಲ್ಲಿ 4 ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ ರೂ 10000/- ಭತ್ಯೆ ಮೂಲ ವೇತನ ಮತ್ತೆ ತುಟ್ಟಿ ಭತ್ಯೆ ಹಾಗೂ ಇತರ ವೇತನಗಳು ಮತ್ತು 5 ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ ರೂ 12000/- ಭತ್ಯೆ ಮೂಲ ವೇತನ ಮತ್ತೆ ತುಟ್ಟಿ ಭತ್ಯೆ ಲಭಿಸುತ್ತದೆ.


01-07-2018 ರ ನಂತರ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಆರಂಭಿಕ ಹಂತದಲ್ಲಿ ಆಯಾ ವರ್ಗಕ್ಕೆ ಸಂಬಂಧಿಸಿದ 4 ಗಂಟೆ ಕೆಲಸದ ಅವಧಿಗೆ ನಿಗದಿಯಾದ ವೇತನ ಶ್ರೇಣಿಯೇ ಅನ್ವಯವಾಗುವುದು.



ವಯೋಮಿತಿ: ಈ ಹುದ್ದೆಗೆ ಅರ್ಜಿ ಸುವ ಅಭ್ಯರ್ಥಿಗಳು, 05.06.20221 ಅನ್ವಯವಾಗುವ ಹಾಗೆ 18 ರಿಂದ 40 ವರ್ಷದ ವಯೋಮಿತಿಯೊಳಗಿರಬೇಕು. ಅನುಸೂಚಿತ ಜಾತಿ ಮತ್ತು ಇತರ ವರ್ಗಗಳಿಗೆ 5 ವರ್ಷಗಳ ವಿನಾಯಿತಿ, ಒ.ಬಿ.ಸಿ ಅಂದರ ಇತರ ಹಿಂದುಳಿದ ವರ್ಗದವರಿಗೆ 3 ವರ್ಷದ ವಿನಾಯಿತಿ ಅನ್ವಯಿಸುತ್ತದೆ. ಆದರೆ ಆರ್ಥಿಕವಾಗಿ ಹಿಂದುಳಿದ ವರ್ಗ ಅಂದರೆ EWS ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುವುದಿಲ್ಲ. ಇನ್ನು ವಿಕಲ ಚೇತನರಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ, ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಸಂಬಂಧಪಟ್ಟ ವಿಕಲಚೇತನರಿಗೆ ಒಟ್ಟು 13 ವರ್ಷಗಳು ಹಾಗೂ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗಗಳಿಗೆ ಸಂಬಂಧಪಟ್ಟ ವಿಕಲಚೇತನರಿಗೆ ವಯೋಮಿತಿಯಲ್ಲಿ 15 ವರ್ಷಗಳ ಸಡಿಲಿಕ ಇರುತ್ತದೆ.


ಶೈಕಣಿಕಆರ್ಹತೆ: ಎಲ್ಲಾ ಹುದ್ದೆಗಳಿಗೆ 10 ನೇ ತರಗತಿಯಲ್ಲಿ ತೇರ್ಗಡೆ ಹೊಂದಿರುವುದು ಕಡ್ಡಾಯ, ಗಣಿತ ಮತ್ತು ಇಂಗ್ಲೀಷಿನಲ್ಲಿ ಕನಿಷ್ಠ ತೇರ್ಗಡೆ ಅಂಕಗಳನ್ನು ಕೂಡ ಹೊಂದಿರಬೇಕು. ಮಾನ್ಯತೆ ಹೊಂದಿರುವ ಪ್ರೌಢ ಶಿಕ್ಷಣ ಮಂಡಳಿಯಿಂದ ನೀಡಲ್ಪಡುವ SSLC/10ನೇ ತರಗತಿ ಪ್ರಮಾಣ ಪತ್ರ ಹೊಂದಿರಬೇಕು, ಅಲ್ಲದ ಅಭ್ಯರ್ಥಿಯು ಕನ್ನಡವನ್ನು ಹತ್ತನೇ ತರಗತಿಯಲ್ಲಿ ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು. ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಒಂದು ವಿಷಯವಾಗಿ ಅಧ್ಯಯನ ನಡೆಸಿದವರೂ ಅರ್ಜಿ ಸಲ್ಲಿಸಬಹುದಾಗಿದೆ. ವಸತಿ, ಹುದ್ದೆಗೆ ಆಯ್ಕೆಗೊಂಡಲ್ಲಿ ಶಾಖಾ ಅಂಚೆ ಪಾಲಕರು ಕನಿಷ್ಟ 1010 ಅಳತೆಯ ಅಂದರೆ ಸುಮಾರು 100 ಚದರ ಅಡಿ ವಿಸ್ತೀರ್ಣ ಹೊಂದಿರುವ ಪ್ರಮುಖ ಜಾಗದಲ್ಲಿರುವ ಒಂದು ಕಟ್ಟಡವನ್ನು ಶಾಖಾ ಅಂಚೆ ಕಚೇರಿ ನಡೆಸಲು ಕೊಡುವ ಭಾದ್ಯತೆಯನ್ನು ಹೊಂದಿರುತ್ತಾರೆ. ಅಲ್ಲದೇ ಸದ್ರಿ ಗ್ರಾಮದಲ್ಲಿ ವಾಸ ಮಾಡಬೇಕು. ಮತ್ತು ಆ ಕಟ್ಟಡಕ್ಕೆ ವಿದ್ಯುಚ್ಛಕ್ತಿಯ ಪೂರೈಕೆ ಕೂಡ ಇರಬೇಕು, ಇತ್ತೀಚಿನ ದಿನಗಳಲ್ಲಿ ಶಾಖಾ ಅಂಚೆ ಕಚೇರಿಗಳಲ್ಲಿ ಇಲೆಕ್ಟ್ರಾನಿಕ್ ದರ್ಪಣ್ ಉಪಕರಣದ ಮೂಲಕ ತಂತ್ರಜಾನ ಆಧಾರಿತ ಸೇವೆಗಳನ್ನು ನೀಡುತ್ತಿರುವುದರಿಂದ ಆ ಊರಿನಲ್ಲಿ ಸದ್ರಿ ಅಂಚೆ ಪಾಲಕರು ನೀಡುವ ಕಟ್ಟಡದಲ್ಲಿ ಸರಿಯಾದ ರೀತಿಯ ನೆಟ್ ವರ್ಕ್ ಲಭ್ಯತೆಯು ಕೂಡ ಮುಖ್ಯ ಆಗಿರುತ್ತದೆ.


ಅರ್ಜಿ ಶುಲ್ಕ : ಸಾಮಾನ್ಯ(OC) ಹಿಂದುಳಿದ(OBC)/ಆರ್ಥಿಕವಾಗಿ ಹಿಂದುಳಿದ(EWS) ವರ್ಗಗಳ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ರೂಪಾಯಿ 100 ಅನ್ನು ಅರ್ಜಿ ಶುಲ್ಕವಾಗಿ ಸಲ್ಲಿಸಬೇಕಾಗುತ್ತದೆ, ಮಹಿಳಾ ಅಭ್ಯರ್ಥಿಗಳಿಗೆ ಮತ್ತು SC/ST ಹಾಗೂ PwD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಇದೆ.


ಎಲ್ಲಾ ಹುದ್ದೆಗಳಿಗೂ ಕೂಡ ಸ್ವತಂತ್ರವಾಗಿ ಸೈಕಲ್ ಚಲಾಯಿಸುವ ಅಥವಾ ಮೋಟರ್ ಸೈಕಲ್ ಚಲಾಯಿಸುವ ಸಾಮರ್ಥ್ಯ ವನ್ನು ಹೊಂದಿರಬೇಕು.


ಈ ಎಲ್ಲಾ ಹುದ್ದೆಗಳಲ್ಲೂ 4 ಅಥವಾ 5 ಗಂಟೆ ಮಾತ್ರ ಕೆಲಸ ಮಾಡುವ ಹುದ್ದೆಗಳಾಗಿದ್ದು ಇನ್ನುಳಿದ ಅವಧಿಗಳಲ್ಲಿ ಪ್ರತೀ ಅಭ್ಯರ್ಥಿಯೂ ಕೂಡ ತನ್ನ ಜೀವನ ನಿರ್ವಹಣೆಗೆ ಬೇಕಾದ ಬೇರೆ ಬದಲಿ ಆದಾಯದ ಮೂಲವನ್ನು ಹೊಂದಿರಬೇಕು.


ಅಭ್ಯರ್ಥಿಗಳು ಸ್ವಂತ ಸಕ್ರಿಯ Mail ID ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು.


ಅರ್ಜಿ‌ಸಲ್ಲಿಸುವ ಬಗ್ಗೆ ಮಾಹಿತಿಗಳು https://indiapost.gov.in ಅಥವಾ https://indiapostadsonline.gov.in ವೆಬ್ ಸೈಟ್ ನಲ್ಲೂ ಕೂಡ ಲಭ್ಯವಿದೆ. ಮಂಗಳೂರಿನಲ್ಲಿ ಸುಮಾರು 95 ಹುದ್ದೆಗಳಿರುವುದರಿಂದ ಹಾಗೂ ಆಯ್ಕೆಯು ಸಂಪೂರ್ಣವಾಗಿ ಅಂಕಗಳ ಆಧಾರದಲ್ಲಿ ಅನ್ ಲೈನ್ ಮೂಲಕ ಇರುವುದರಿಂದ ಮತ್ತೆ ಇದಕ್ಕೆ ಯಾವುದೇ ತರಹದ ಸಂದರ್ಶನವು ಇಲ್ಲದೇ ಇರುವುದರಿಂದ ಇದೊಂದು ಎಲ್ಲಾ SSLC ಮತ್ತು ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಭಾರತೀಯ ಅಂಚೆ ಯೊಂದಿಗೆ ಕೆಲಸ ಮಾಡುವ ಒಂದು ಅತ್ಯುತ್ತಮ ಅವಕಾಶವನ್ನು ನೀಡುತ್ತಿದೆ. ಇದನ್ನು ಅರ್ಹ ಅಭ್ಯರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ.


ಅರ್ಜಿಯನ್ನು ಸಲ್ಲಿಸುವ ಮೊದಲು ಇತ್ತೀಚಿನ ಭಾವಚಿತ್ರ  ( jpg/jpeg formate, <50 kb), ಸಹಿ (jpg/ jpeg format, <20 kb) ಇವುಗಳನ್ನು ಸ್ಕ್ಯಾನಿಂಗ್ ಮಾಡಿ ಇಟ್ಟುಕೊಂಡು ಅದನ್ನು ನಿಗದಿತ ಹಂತದಲ್ಲಿ ವೆಬ್ ಸೈಟ್ ಗೆ ಅಪ್ಲೋಡ್ ಮಾಡಬೇಕಾಗುತ್ತದೆ.





ಹೆಚ್ಚಿನ ಮಾಹಿತಿಯು https://indiapostgdsonline.gov.in ಲಭ್ಯವಿದೆ ಹಾಗೂ ಯಾವುದೇ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಗಳನ್ನು ಅಥವಾ ವಿಭಾಗೀಯ ಕಚೇರಿ, ಬಲ್ಮಠ ವನ್ನು ಸಂಪರ್ಕಿಸಬಹುದು. ನಮ್ಮ ಕಚೇರಿಯ ದೂರವಾಣಿ ಸಂಖ್ಯೆ 0824-2218400 ಇಮೇಲ್  domangalore.ka@indiapost.gov.in







Ads on article

Advertise in articles 1

advertising articles 2

Advertise under the article