ಜನವರಿ ತಿಂಗಳ ಬಳಿಕ ಈ ರಾಶಿಯವರು ಪ್ರತಿ ಒಂದು ಕೆಲಸದಲ್ಲೂ ಎಚ್ಚರದಿಂದಿರಬೇಕು...!

ಶನಿಯು ಜನವರಿ 17 ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇನ್ನು ಶನಿ ಸಂಕ್ರಮಣದ 13 ದಿನಗಳ ನಂತರ ಅಸ್ತವಾಗುತ್ತಾನೆ. 

ಶನಿಯ ಅಸ್ತವಾಗುವುದರೊಂದಿಗೆ ಧನು ರಾಶಿಯವರಿಗೆ ಏಳೂವರೆ ವರ್ಷದ ಶನಿ ದೆಸೆಯಿಂದ ಮುಕ್ತಿ ಸಿಗಲಿದೆ. ಇದೇ ವೇಳೆ ಮಕರ ರಾಶಿಯವರ ಜಾತಕದಲ್ಲಿ ಮೂರನೇ ಹಂತದ ಸಾಡೇಸಾತಿ ಆರಂಭವಾಗಲಿದೆ.

 ಕುಂಭ ರಾಶಿಯವರ ಜೀವನದಲ್ಲಿ ಎರಡನೇ ಹಂತ ಹಾಗೂ ಮೀನ ರಾಶಿಯವರ ಜಾತಕದಲ್ಲಿ ಸಾಡೇಸಾತಿಯ ಮೊದಲ ಹಂತ ಆರಂಭವಾಗಲಿದೆ. 


ತುಲಾ ಮತ್ತು ಮಿಥುನ ರಾಶಿಯವರಿಗೆ ಶನಿ ಧೈಯ್ಯಾದಿಂದ ಮುಕ್ತಿ ದೊರೆಯುತ್ತದೆ. ಮತ್ತೊಂದೆಡೆ, ವೃಶ್ಚಿಕ ರಾಶಿ ಮತ್ತು ಕಟಕ ರಾಶಿಯವರ ಜಾತಕದಲ್ಲಿ ಶನಿ ಧೈಯ್ಯಾ ಪ್ರಾರಂಭವಾಗಲಿದೆ.