ಪುತ್ತೂರು: ಅಪ್ರಾಪ್ತೆಯಾಗಿದ್ದಾಗ ಲೈಂಗಿಕ ಕಿರುಕುಳ ಪ್ರಾಪ್ತಳಾದ ಬಳಿಕ ದೂರು; ಆರೋಪಿ ಮೇಲೆ ಪೊಕ್ಸೊ ಪ್ರಕರಣ ದಾಖಲು



ಪುತ್ತೂರು: ಕಾಲೇಜು ವಿದ್ಯಾರ್ಥಿನಿಯೋರ್ವಳು ಅಪ್ರಾಪ್ತೆಯಾಗಿದ್ದ ಸಂದರ್ಭ ಲೈಂಗಿಕ ಕಿರುಕುಳ ನೀಡಿರುವ  ಆರೋಪದಲ್ಲಿ ಕೋಳಿ ಫಾರಂ ಮಾಲಕನ ಮೇಲೆ ಪೊಲೀಸರು ಪೊಕ್ಸೊ ಪ್ರಕರಣ ದಾಖಲಿಸಿದ್ದಾರೆ.

ಕೋಡಿಯಡ್ಕ ನಿವಾಸಿ, ಪರ್ಲಡ್ಕದಲ್ಲಿ ಕೋಳಿ ಅಂಗಡಿ ಹೊಂದಿರುವ ರಾಹುಲ್‌ ವಿರುದ್ಧ ಸಂಪ್ಯ ಪೊಲೀಸರು ಪೊಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುತ್ತೂರಿನ ನಿವಾಸಿಯಾಗಿರುವ, ಮಂಗಳೂರಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ನೀಡಿದ ದೂರಿನಂತೆ ಈ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿ ಈಗ ಪ್ರಾಪ್ತ ವಯಸ್ಕಳಾದ ಬಳಿಕ ಈ ದೂರು ದಾಖಲಾಗಿದೆ. ಈ ಹಿಂದೆ ಆಕೆ ಅಪ್ರಾಪ್ತೆಯಾಗಿದ್ದಾಗ ರಾಹುಲ್‌ ಆಕೆಗೆ ಕೋಳಿ ಫಾರಂನಲ್ಲಿ ಲೈಂಗಿಕ ಕಿರುಕುಳ ನೀಡಿದ್ದ. ಅಲ್ಲದೆ ಬೆದರಿಕೆಯೊಡ್ಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ರಾಹುಲ್‌ ಆಕೆಯ ಚಾರಿತ್ರ್ಯ ಹಾಳು ಮಾಡುತ್ತೇನೆಂದು ಬೆದರಿಕೆ ಹಾಕಿದ್ದ ಬಗ್ಗೆ ಮಾಹಿತಿ ದೊರಕಿದ್ದರಿಂದ ವಿದ್ಯಾರ್ಥಿನಿ ತಡವಾಗಿ ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.