ಸೀಟ್ ಬೆಲ್ಟ್ ಧರಿಸದೆ ಕಾರಿನಲ್ಲಿ ಪ್ರಯಾಣಿಸಿದ ಬ್ರಿಟನ್ ಪ್ರಧಾನಿಗೆ ದಂಡ ವಿಧಿಸಿದ ಪೊಲೀಸರು
Saturday, January 21, 2023
ಲಂಡನ್: ಸೀಟ್ ಬೆಲ್ಟ್ ಅನ್ನು ಧರಿಸದೇ ಕಾರಿನಲ್ಲಿ ಪ್ರಯಾಣಿಸಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿಇರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.
ಸಾಮಾಜಿಕ ಜಾಲತಾಣದ ವಿಚಾರಕ್ಕಾಗಿ ವೀಡಿಯೋ ಮಾಡುತ್ತಿರುವ ವೇಳೆ ರಿಷಿ ಸುನಾಕ್ ಸೀಟ್ ಬೆಲ್ಟ್ ಧರಿಸದೇ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತು ಪ್ರಯಾಣ ಮಾಡಿದ್ದಾರೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಬ್ರಿಟನ್ ಪೊಲೀಸರು ಅವರಿಗೆ ದಂಡವನ್ನು ವಿಧಿಸಿದ್ದಾರೆ.
ಈ ಬಗ್ಗೆ ರಿಷಿ ಸುನಾಕ್ ಪ್ರತಿಕ್ರಿಯೆ ನೀಡಿದ್ದು, ಇದೊಂದು ತಿಳುವಳಿಕೆಯ ಸಣ್ಣ ಪ್ರಮಾದ. ತಾನು ಉತ್ತರ ಇಂಗ್ಲೆಂಡ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದಿದ್ದಾರೆ.
ಇದು ರಿಷಿ ಸುನಾಕ್ ಅವರಿಗೆ ವಿಧಿಸಲಾಗಿರುವ ಎರಡನೇ ದಂಡವಾಗಿದೆ. ಕಳೆದ ವರ್ಷ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಂದಿನ ಪ್ರಧಾನಿ ಮಂತ್ರಿ ಬೋರಿಸ್ ಜಾನ್ಸನ್ ಸೇರಿದಂತೆ ರಿಷಿ ಅವರಿಗೆ ದಂಡ ವಿಧಿಸಲಾಗಿತ್ತು. ನಿಜವಾಗಿಯೂ ತಪ್ಪಾಗಿದೆ ಎಂದು ಪ್ರಧಾನಿ ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ ಮತ್ತು ಕ್ಷಮೆಯಾಚಿಸಿದ್ದಾರೆ. ಅವರು ಖಂಡಿತವಾಗಿಯೂ ನಿಗದಿತ ದಂಡವನ್ನು ಅನುಸರಿಸುತ್ತಾರೆ ಎಂದು ಸುನಕ್ ಅವರ ಡೌನಿಂಗ್ ಸ್ಟ್ರೀಟ್ ಕಚೇರಿಯ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.